ಶಿವಮೊಗ್ಗ: ಮಾಜಿ ಶಾಸಕ ಹೆಚ್. ಎಂ. ಚಂದ್ರಶೇಖರಪ್ಪ ಅವರ ಶಿವಗಣಾರಾಧನೆ ಹಾಗೂ ಸರ್ವಶರಣರ ಸಮ್ಮೇಳನ

ಶಿವಮೊಗ್ಗ:ಶಿವಮೊಗ್ಗದ ಮಾಜಿ ಶಾಸಕರು, ಬೆಂಗಳೂರಿನ ಮಾಜಿ ಶಾಸಕರ ವೇದಿಕೆಯ (ರಿ.) ಅಧ್ಯಕ್ಷರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾಗಿದ್ದ ಶರಣ ಹೆಚ್. ಎಂ. ಚಂದ್ರಶೇಖರಪ್ಪ ಅವರ ಶಿವಗಣಾರಾಧನೆ ಮತ್ತು ಸರ್ವಶರಣರ ಸಮ್ಮೇಳನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ವಿವರಗಳು:

  • ದಿನಾಂಕ: 02 ಅಕ್ಟೋಬರ್ 2026, ಶುಕ್ರವಾರ
  • ಸಮಯ: ಬೆಳಿಗ್ಗೆ 10:30ಕ್ಕೆ
  • ಸ್ಥಳ: ಲಗಾನ್ ಕಲ್ಯಾಣ ಮಂದಿರ, ಸಾಗರ ರಸ್ತೆ, ಗಾಡಿಕೊಪ್ಪ, ಶಿವಮೊಗ್ಗ.

​ಈ ಪುಣ್ಯಸ್ಮರಣೆ ಮತ್ತು ಸಮ್ಮೇಳನ ಕಾರ್ಯಕ್ರಮದಲ್ಲಿ ಬಂಧು-ಮಿತ್ರರು, ಶರಣರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಅವರ ಮಕ್ಕಳಾದ ಶರಣ ಹೆಚ್. ಸಿ. ಯೋಗೇಶ್, ಶರಣ ಹೆಚ್. ಸಿ. ಶರಣ್ ಹಾಗೂ ಕುಟುಂಬವರ್ಗ ಮತ್ತು ದುಃಖತಪ್ತರು ಕೋರಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.