ಭದ್ರಾವತಿಯ ಮುದ್ದೆ ವಿಶ್ವ ಯಾನೆ ಇಸ್ಪೀಟ್ ವಿಶ್ವನ ಮೇಲೆ ಭೀಕರ ದಾಳಿ*
ಭದ್ರಾವತಿ ಅನ್ವರ್ ಕಾಲೋನಿಯಲ್ಲಿ 35 ವರ್ಷ ವಯಸ್ಸಿನ ಮುದ್ದೆ ವಿಶ್ವ @ ಇಸ್ಪೀಟ್ ವಿಶ್ವನ ಮೇಲೆ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ ಮಾಡಿದ ಘಟನೆ ಇಂದು ನಡೆದಿದೆ.
ಭದ್ರಾವತಿಯಲ್ಲಿ ಟೀ ಕುಡಿಯಲು ಹೋಗಿದ್ದ ಯುವಕನ ಮೇಲೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಎರಡು ಕೈ ತುಂಡಾಗುವ ರೀತಿ ಹಾಗೂ ಕುತ್ತಿಗೆ ಭಾಗಕ್ಕೆ ಹರಿತವಾದ ಆಯುಧದಿಂದ ಹಲ್ಲೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ನಡೆದಿದೆ.
ಗಾಯಾಳು ವಿಶ್ವನಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಈ ಘಟನೆಯಲ್ಲಿ ಗಾಯಗೊಂಡಿದ್ದ ಯುವಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆರು ಜನರಿದ್ದ ಗ್ಯಾಂಗಿನಿಂದ ಈ ಭೀಕರ ಹಲ್ಲೆ ನಡೆದಿದ್ದು,ಹಲ್ಲೆಗೊಳಗಾದ ವ್ಯಕ್ತಿ ಭದ್ರಾವತಿ ಹಳದಮ್ಮ ಬೀದಿಯ ನಿವಾಸಿ ವಿಶ್ವ ಎಂದು ತಿಳಿದು ಬಂದಿದೆ.
ಕೂಡಲೇ ಹಲ್ಲೆಗೊಳಗಾದ ವಿಶ್ವನನ್ನು ಶಿವಮೊಗ್ಗದ ಖಾಸಗಿ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಿದ್ದಾರೆ.
ಹಲ್ಲೆಕೋರರ ಬಂಧನಕ್ಕೆ ಎಸ್ ಪಿ ನಿಖಿಲ್ ಬಲೆ ಬೀಸಿದ್ದಾರೆ. ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.ಪೊಲೀಸರು ಈ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ.
ಭದ್ರಾವತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮುದ್ದೆ ಅಲಿಯಾಸ್ ವಿಶ್ವನಾಥ್ ಮೇಲೆನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಕ್ಷೇತ್ರದಶಾಸಕ ಬಿ.ಕೆ. ಸಂಗಮೇಶ್ ಅವರ ಪುತ್ರ ಬಸವ ಅವರು ಶಿವಮೊಗ್ಗದ ಮ್ಯಾಕ್ಸ್
ಆಸ್ಪತ್ರೆಯಲ್ಲಿ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ ಕಾರ್ಯಕರ್ತನಮೇಲೆ ನಡೆದಿರುವ ಈ ಹಲ್ಲೆ ಅತ್ಯಂತ ಖಂಡನೀಯ. ಈ ಕೃತ್ಯದ ಹಿಂದೆ ಜೆಡಿಎಸ್ ಪಕ್ಷದ ಕೆಲವು ಕಾರ್ಯಕರ್ತರ ಕೈವಾಡವಿದೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ
ಎಂದರು.
ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಯಾವುದೇ ಸ್ಥಾನವಿಲ್ಲ. ತಪ್ಪಿತಸ್ಥರನ್ನು ಪೊಲೀಸರುಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದುಆಗ್ರಹಿಸಿದರು.
ಇತ್ತೀಚಿನ ಪೋಲಿಸರ ಬಿಗಿ ಕ್ರಮಗಳು
ಭದ್ರಾವತಿ ತಾಲ್ಲೂಕಿನಲ್ಲಿ ಜೂಜಾಟದ ಹಾವಳಿ ಜಾಸ್ತಿಯಾಗಿರುವುದರಿಂದ ಮತ್ತು ಅದರಿಂದ ಜನ ಸಾಮಾನ್ಯರು ಸಾಲದ ಸುಳಿಗೆ ಸಿಲುಕುತ್ತಿರುವ ಬಗ್ಗೆ ಸಾರ್ವಜನಿಕ ವಲಯ ಹಾಗೂ ರಾಜಕೀಯ ಮುಖಂಡರಿಂದ ತೀವ್ರ ಆಕ್ಷೇಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಇತ್ತೀಚೆಗೆ ಪೊಲೀಸರು ತಂತ್ರಜ್ಞಾನ (ಡ್ರೋಣ್ ಕ್ಯಾಮೆರಾ ಬಳಸಿ ಅರಣ್ಯ ಪ್ರದೇಶದ ಅಡ್ಡಾಗಳನ್ನು ಪತ್ತೆ ಹಚ್ಚುವುದು ಮತ್ತು ದಾಳಿಗಳನ್ನು ಮಾಡಿದ್ದಾರೆ.ಆದರೂ ಭದ್ರಾವತಿಯಲ್ಲಿ ಇಸ್ಪೀಟ್ ಜೂಜಾಟ ನಿಂತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Leave a Comment