ಶಿವಮೊಗ್ಗದಲ್ಲಿ ಪತಿ 16 ವರ್ಷ ಸೇವೆ -ಪತ್ನಿ 13 ವರ್ಷ ಧೀರ್ಘಕಾಲದ ಸರ್ಕಾರಿ ಸೇವೆ:ಸಾಧನೆ ಗುರುತಿಸಿ ಗಿನ್ನಿಸ್ ದಾಖಲೆಗೆ ಸೇರಿಸಲು ಸಿ.ಎಂಗೆ ಆಗ್ರಹ
ಶಿವಮೊಗ್ಗದಲ್ಲಿ ಒಂದೇ ಕಡೆ ಪತಿ 16 ವರ್ಷ ಸೇವೆ-ಪತ್ನಿ 13 ವರ್ಷಗಳ ಧೀರ್ಘಕಾಲದ ಸೇವೆ ಸಾಧನೆ ಗುರುತಿಸಿ,ಧೀರ್ಘಕಾಲದ ಸೇವೆಯನ್ನು ಪರಿಗಣಿಸಿ ಇವರಿಬ್ಬರನ್ನು ನಿವೃತ್ತಿ ಆಗುವವರೆಗೆ ಈಗಿರುವ ಜಾಗದಲ್ಲೇ ಮುಂದುವರಿಸಿ ಕೊಡಿ ಎಂದು ಸಿ.ಎಂಗೆ ಮತ್ತು ಸಂಬಂಧಿಸಿದ ಇಲಾಖೆಯ ವರಿಷ್ಟರಿಗೆ ಗಮನಹರಿಸಲು ವಿನಂತಿಯನ್ನು ಮಾಡಲಾಗಿದೆ.
ಶಿವಮೊಗ್ಗದಲ್ಲಿ ಪತಿ 16 ವರ್ಷ ಸೇವೆ -ಪತ್ನಿ 13 ವರ್ಷ ಧೀರ್ಘಕಾಲದ ಸರ್ಕಾರಿ ಸೇವೆ:ಸಾಧನೆ ಗುರುತಿಸಿ ಗಿನ್ನಿಸ್ ದಾಖಲೆಗೆ ಸೇರಿಸಲು ಸಿ.ಎಂ ಗೆ ಆಗ್ರಹ
ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ.ಆರ್ ಇವರು 16 ವರ್ಷದಿಂದ ಶಿವಮೊಗ್ಗ ವಾರ್ತಾಇಲಾಖೆಯಲ್ಲಿ ಒಂದೇ ಕಡೆ ಇದುವರೆಗೂ ಕೆಲಸ ಮಾಡಿಕೊಂಡಿದ್ದಾರೆ. ಇವರಿಗೆ ಇದುವರೆಗೂ ವರ್ಗಾವಣೆ ಗೊಂಡಿಲ್ಲ.ವರ್ಗಾವಣೆಯಾದರೂ ಇವರು ಕ್ಯಾನ್ಸಲ್ ಮಾಡಿಕೊಂಡು ಬರುತ್ತಾರೆ.ಇವರ ಮೇಲೆ ಅನೇಕ ಗುರುತರ ಆರೋಪಗಳು ಇದ್ದು, ಇದುವರೆಗೂ ಯಾವುದೇ ವಿಚಾರಣೆ ಆಗಿಲ್ಲ.ವಾರ್ತಾ ಇಲಾಖೆಯನ್ನು ಕುಲಗೇಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸರ್ಕಾರಿ ಕಟ್ಟಡವನ್ನು ಇನ್ನೋಬ್ಬರಿಗೆ ಒತ್ತೆಯಿಟ್ಟು ಇದು ನಮ್ಮ ಕಟ್ಟಡ ಅಲ್ಲ ಅಂತಾ ಬೊಬ್ಬೆ ಒಡೆಯುತ್ತಾ ತಿರುಗಾಡುತ್ತಿದ್ದಾನೆ.ಈತ ವಾರ್ತಾ ಇಲಾಖೆ ಬಿಟ್ಟರೆ ವಾರ್ತಾ ಇಲಾಖೆ ಮುಚ್ಚಬೇಕಾಗುತ್ತದೆ.ಯಾಕೆಂದರೆ ಯಾರಿಗೂ ಇವನ ರೀತಿಯಲ್ಲಿ ಸುದ್ದಿ ಮಾಡುವುದಕ್ಕೆ ಬರುವುದಿಲ್ಲವಂತೇ....3-4 ಜನ ಪತ್ರಕರ್ತರಿಗೆ ಇವನೇಂದರೇ ಪ್ರಾಣ...ಇವನಿಲ್ಲದಿದ್ದರೇ ಅವರ ಪತ್ರಿಕೆ ನಿಂತು ಹೋಗುತ್ತದೆ.ಪತ್ರಕರ್ತರ ನಡುವೆ ಬೇದಭಾವ ತಾರತಮ್ಯ ಮಾಡಿದ ಕೀರ್ತಿ ಈತನಿಗೆ ಸಲ್ಲುತ್ತದೆ.
ಆಗಾಗಿ ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ಇವರ ಧೀರ್ಘಕಾಲದ 16 ವರ್ಷದ ಸೇವೆಯನ್ನು ಪರಿಗಣಿಸಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಶಾಶ್ವತವಾಗಿ ನಿವೃತ್ತಿ ಆಗುವವರೆಗೂ ಶಿವಮೊಗ್ಗ ವಾರ್ತಾ ಇಲಾಖೆಯಲ್ಲಿಯೇ ಸೇವೆಯನ್ನು ಮುಂದುವರೆಸಿಕೊಡಬೇಕು..
*ವಾರ್ತಾಧಿಕಾರಿ*ಮಾರುತಿಗೆ ಧೀರ್ಘಕಾಲದ ಸೇವೆ ಪರಿಗಣಿಸಿ ವಾರ್ತಾಇಲಾಖೆಯ ಸರ್ಕಾರಿ ಕಟ್ಟಡ ಬರೆದುಕೊಡಬೇಕು!!**
ಮತ್ತೆ ಇವರ ಧೀರ್ಘಕಾಲದ ಸೇವೆಯನ್ನು ಪರಿಗಣಿಸಿ ನಿವೃತ್ತಿಯಾದ ನಂತರ ವಾರ್ತಾ ಇಲಾಖೆಯಲ್ಲಿನ ಕಟ್ಟಡದಲ್ಲಿ ವಾಸಿಸಲು ಶಿವಮೊಗ್ಗ ವಾರ್ತಾ ಇಲಾಖೆಯ ಕಟ್ಟಡವನ್ನು ಸಹ ಅವರ ಹೆಸರಿಗೆ ಬರೆದು ಕೊಡಬೇಕು ಅವರು ಅಲ್ಲೆ ವಾಸಿಸಲು ಅನುವು ಮಾಡಿಕೊಡವೇಕು ಎಂಬುದು ನಮ್ಮ ಆಗ್ರಹವಾಗಿದೆ.
ಅದೇ ರೀತಿಯಲ್ಲಿ ಶಿವಮೊಗ್ಗ ವಾರ್ತಾ ಇಲಾಖೆಯ ವಾರ್ತಾಧಿಕಾರಿ ಮಾರುತಿ ಇವರ ಧರ್ಮ ಪತ್ನಿ ಟಿಜಿಟಿ ಶಿಕ್ಷಕಿ ಸೌಮ್ಯ ಇವರು ಸಹ ಶಿವಮೊಗ್ಗ ಜಯಂತಿ ಗ್ರಾಮದ ಸರ್ಕಾರದ ಶಾಲೆಯಲ್ಲಿ 13 ವರ್ಷದಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದಾರೆ.ಇವರ ಸಾಧನೆ ಏನೇಂದರೇ ಸದರಿ ಶಾಲೆಯಲ್ಲಿ ವಿದ್ಯಾರ್ಥಿಗಳು 130 ಇದ್ದರು. 2024-25 ಸಾಲಿನಲ್ಲಿ ವಿದ್ಯಾರ್ಥಿಗಳು 11 ಮಾತ್ರ.ಆಗಾಗಿ ಇವರ ಸಾಧನೆ ಬಹಳ ಇದೆ. ಪತಿ ಮತ್ತು ಪತ್ನಿ ಇಬ್ಬರು ಒಂದೇ ಕಡೆ ಧೀರ್ಘಕಾಲದ ಸೇವೆಯನ್ನು ಮಾಡಿ ಗಿನ್ನಿಸ್ ದಾಖಲೆಯನ್ನು ಮಾಡಲು ಹೊರಟಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಇತ್ತೀಚೆಗೆ ಗಾಜನೂರು ಸರ್ಕಾರಿ ಶಾಲೆಗೆ ಒಒಡಿ ಮೇಲೆ ಕಳುಹಿಸಲಾಗಿದೆ. ಸರ್ಕಾರ ಶಿಕ್ಷಣ ಸಚಿವರು ಟಿಜಿಟಿ ಶಿಕ್ಷಕಿ ಸೌಮ್ಯರವರಿಗೂ ಸಹ ನಿವೃತ್ತಿ ಆಗುವವರೆಗೂ ಜಯಂತಿ ಗ್ರಾಮದ ಶಾಲೆಯಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡಬೇಕು. ಅವರು ನಿವೃತ್ತಿ ನಂತರ ಶಾಲೆಯ ಒಂದು ಕೊಠಡಿಯನ್ನು ಅವರಿಗೆ ಬರೆದುಕೊಡಬೇಕು. ಅವರು ಅಲ್ಲಿಯೇ ವಾಸಿಸಲು ಸರ್ಕಾರ ಶಿಕ್ಷಣ ಸಚಿವರು ಮತ್ತು ಸಂಬಂಧಿಸಿದ ಅಧಿಕಾರಿಗಳು ಅನುವು ಮಾಡಿಕೊಡಬೇಕು ಎಂಬುದು ನಮ್ಮ ಒತ್ತಾಸೆ ಆಗಿದೆ.
ಇವರಿಬ್ಬರ ದೀರ್ಘಕಾಲದ ಸೇವೆ ಗಿನ್ನಿಸ್ ದಾಖಲೆಗೆ ಸೇರಿ ಅವರಿಗೆ ಸರ್ಕಾರ ಸನ್ಮಾನಿಸುವವರೆಗೂ ಇವರಿಬ್ಬರನ್ನು ಗಂಡ- ಹೆಂಡತಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ನಿವೃತ್ತಿ ಆಗುವವರೆಗೂ ನಿಮಗೆ ವರ್ಗಾವಣೆ ಮಾಡುವುದಿಲ್ಲ ಎಂದು ಛಾಪಾಕಾಗದದಲ್ಲಿ ಬರೆದು ಕೊಡಬೇಕು ಎಂಬುದು ನಮ್ಮ ಆಶಯವಾಗಿದೆ.
*ಇವರಿಬ್ಬರಿಗೆ ತಮ್ಮ ಆಸ್ತಿಯನ್ನು ಸಂರಕ್ಷಿಸಲು ಬೇರೆ ಎಲ್ಲಿಗೂ ವರ್ಗಾವಣೆ ಮಾಡಬಾರದು!!!*
ಮೇಲ್ಕಂಡ ಗಂಡ- ಹೆಂಡತಿ ಇವರಿಬ್ಬರೂ ವರ್ಗಾವಣೆ ಆದರೇ ಸಾಕು ಮತ್ತೆ ಕ್ಯಾನ್ಸಲ್ ಮಾಡಿಸಿಕೊಂಡು ಬರುತ್ತಾರೆ.ಇವರ ಅಪಾರ ಆಸ್ತಿಯನ್ನು ಮತ್ತು ಸ್ಥಿರಾಸ್ತಿ ಯನ್ನು ಬಂಗಾರ ಬೆಳ್ಳಿಯನ್ನು ಕೋಟಿ ಕೋಟಿ ಖರ್ಚು ಮಾಡಿ ಶಿವಮೊಗ್ಗ ದಲ್ಲಿ ಕಟ್ಟಿದ ಕಟ್ಟಡ ನೋಡಿ ಕೊಳ್ಳುವ ಸಲುವಾಗಿ ಇವರಿಗೆ ಬೇರೆಎಲ್ಲಿಗೂ ವರ್ಗಾವಣೆ ಮಾಡಬಾರದು. ಆಗಾಗಿ ಇವರಿಬ್ಬರಿಗೆ ಸರ್ಕಾರದ ವರ್ಗಾವಣೆಯ ನೀತಿ ನಿಯಮ ಯಾವುದು ಅನ್ವಯಿಸುವುದಿಲ್ಲ ಎಂದು ಕೇಂದ್ರ ವಾರ್ತಾ ಇಲಾಖೆಯ ಕಮೀಷನರ್ ರವರು ಮತ್ತು ಶಿಕ್ಷಣ ಇಲಾಖೆಯ ಶಿವಮೊಗ್ಗದ DDPI ಹಾಗೂ ಶಿವಮೊಗ್ಗದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ರವರು ಒಂದು ಆದೇಶ ಹೊರಡಿಸಿ ಮುಚ್ಚಳಿಕೆ ಬರೆದು ಕೊಡಬೇಕು ಎನ್ನುವುದು ನಮ್ಮ ಒತ್ತಾಸೆ ಯಾಗಿ ಈ ಪತ್ರವನ್ನು ಬರೆಯಲಾಗಿದೆ.
*ಸರ್ಕಾರ ಗಿನ್ನಿಸ್ ದಾಖಲೆಗೆ ಅವಕಾಶ ಮಾಡಿಕೊಡಬೇಕು!!*
ಮೇಲ್ಕಂಡ ಇಬ್ಬರೂ ಸರ್ಕಾರದ ಗಣ್ಯ ವ್ಯಕ್ತಿಗಳು ಎಂದು ಪರಿಗಣಿಸಿ ಗಿನ್ನಿಸ್ ದಾಖಲೆಗೆ ಅವಕಾಶ ಮಾಡಿಕೊಟ್ಟು, ಗಿನ್ನೆಸ್ ದಾಖಲೆಗೆ ಭಾಗವಹಿಸುವ ಖರ್ಚು ವೆಚ್ಚ ಗಳನ್ನು ಸಹ ಸರ್ಕಾರ ಭರಿಸಬೇಕು ಸಿ.ಎಂ ಅವರು ಗಂಡ- ಹೆಂಡತಿ ವಿಶೇಷ ಪ್ರಕರಣ ಎಂದು ಪರಿಗಣಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಾವೇರಿ ಮೇಡಮ್ ಮತ್ತು ಅಧೀನ ಕಾರ್ಯದರ್ಶಿ ಜೇಸಿಂತ್ ಮೇಡಮ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಬ ರವರು ಹಾಗೂ ವಾರ್ತಾ ಇಲಾಖೆಯ ನಿರ್ದೇಶಕರಾಗದ ನಿಂಬಾಳ್ಕರ್ ರವರು ಹಾಗೂ ಶಿವಮೊಗ್ಗದ DDPI ರವರು ಒಂದೇ ಕಡೆ ಧೀರ್ಘಕಾಲದ ಸೇವೆ ಸಲ್ಲಿಸಿದ ಇವರಿಗೆ ಇದೀಗ ಮತ್ತೆ ಇದ್ದ ಜಾಗದಲ್ಲಿಯೇ ನಿವೃತ್ತಿ ಆಗುವವರೆಗೂ ಸೇವೆ ಸಲ್ಲಿಸಲೂ ಹಾಗೂ ಗಿನ್ನಿಸ್ ದಾಖಲೆಗೆ ಇವರಿಬ್ಬರ ಹೆಸರು ಸೇರ್ಪಡೆ ಗೊಳಿಸಲು ಸಿಎಂಗೆ ಶಿಫಾರಸ್ಸು ಮಾಡಬೇಕೆಂದು ವಿನಂತಿಸಲಾಗಿದೆ.
ಸರ್ ತುಂಬಾ ಚೆನ್ನಾಗಿ ಬರೆದಿದ್ದೀರಿ ನಾಚಿಕೆ ಆಗಬೇಕು ಇಂತಹ ಅಧಿಕಾರಿಗಳಿಗೆ ಇಂತಹ ಅಧಿಕಾರಿಗಳನ್ನು ಪೋಷಿಸುತ್ತಿರುವ ರಾಜಕಾರಣಿಗಳಿಗೂ ನಾಚಿಕೆಯಾಗಬೇಕು ದಾವಣಗೆರೆ ಡ್ಯೂಟಿಗೆ ಹೋಗಿಲ್ಲ ಸರ್ ಮತ್ತೆ ಇವರು
ಪ್ರತ್ಯುತ್ತರಅಳಿಸಿ