ನಿವೃತ್ತ ಎಸ್ಪಿ ಬಿ.ಆರ್.ಚಂದ್ರಶೇಖರ್ ನಿಧನ -ಸಂತಾಪ
ಶಿವಮೊಗ್ಗ: ನಗರದ ಗೋಪಾಲಗೌಡ ಬಡಾವಣೆಯಲ್ಲಿ ಎ ಬ್ಲಾಕ್ ನಲ್ಲಿ ಪಾರ್ಕ್ ಎದುರು ( ಹಳೇ ಪೊಲೀಸ್ ಲೇಔಟ್ )ನಲ್ಲಿ ವಾಸವಾಗಿರುವ ನಿವೃತ್ತ ಎಸ್ಪಿ ಬಿ.ಆರ್.ಚಂದ್ರಶೇಖರ್ 75 ವರ್ಷ ಇವರು ಇಂದು ನಿಧನವಾಗಿದ್ದಾರೆ.
ಇವರು ಶಿವಮೊಗ್ಗ ನಗರದ ಖಾಸಾಗಿ ಆಸ್ಪತ್ರೆ NH ಆಸ್ಪತ್ರೆ ಯಲ್ಲಿ ಅನಾರೋಗ್ಯದ ನಿಮಿತ್ತ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಇಂದು ದಿನಾಂಕ 23-10-25 ರಂದು ಮದ್ಯಾಹ್ನ ಅಂದರೇ 1-30 ಸಮಯದಲ್ಲಿ ನಿಧನರಾಗಿದ್ದಾರೆ.
ನಿವೃತ್ತ ಎಸ್ಪಿ ಬಿ.ಆರ್.ಚಂದ್ರಶೇಖರ್ ರವರು 20-10-1975 ರಲ್ಲಿ ಪೊಲೀಸ್ ಇಲಾಖೆಯಲ್ಲಿ PSI ಆಗಿ ಸೇವೆಗೆ ಸೇರಿದ್ದು, ನಂತರದಲ್ಲಿ ಮುಂಬಡ್ತಿ ಹೊಂದಿ CPI,Dysp,Addl SP,SP ಯಾಗಿ ಕೆಲಸ ನಿರ್ವಹಿಸಿದ್ದರು.ದಿನಾಂಕ: 31-5-2008 ರಲ್ಲಿ ನಿವ್ರತ್ತಿ ಹೊಂದಿದ್ದರು.ಇವರು ಪೊಲೀಸ್ ಇಲಾಖೆಯಲ್ಲಿ 33 ವರ್ಷ ಧೀರ್ಘಕಾಲದ ಸೇವೆಯನ್ನು ಸಲ್ಲಿಸಿದ್ದಾರೆ. ಇವರು CPI ಮತ್ತು Dysp ಯಾಗಿ ಶಿವಮೊಗ್ಗದಲ್ಲಿ ಬಹಳ ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ದಕ್ಷ, ಖಡಕ್ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಇವರ ಸಹಪಾಠಿಗಳು ಉತ್ತಪ್ಪ,ಯೋಗಪ್ಪ,ಲಿಂಗಾರೆಡ್ಡಿ ಇವರೆಲ್ಲರೂ ಆತ್ಮಿಯರಾಗಿದ್ದರು.ಮೃತರು ಎಲ್ಲರಿಗೂ ಚಿರಪರಿಚಿತರು.
ಮೃತರು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯತ್ವವನ್ನು ಸಹ ಹೊಂದಿದ್ದರು. ಮೃತರ ನಿಧನದ ಸುದ್ದಿಯನ್ನು ತಿಳಿದ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದರು. ಕಂಬನಿ ಮಿಡಿದಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಮತ್ತು ಮೃತರ ಕುಟುಂಬಕ್ಕೆ ದುಂಖಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಮೃತರು ಅವರ ಪತ್ನಿ ಮತ್ತು ಮಗ ಹಾಗೂ ಸೊಸೆ ಮೊಮ್ಮಕ್ಕಳು ಮತ್ತು ಅಪಾರ ಸ್ನೇಹಿತರು ಮತ್ತು ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ.
ಇವರ ಪಾರ್ಥಿವ ಶರೀರವನ್ನು ಸ್ವಗೃಹ ಗೋಪಾಲಗೌಡ ಬಡಾವಣೆಯಲ್ಲಿ ಇರಿಸಲಾಗಿದೆ. ನಂತರ ನಾಳೆದಿನಾಂಕ 24-10-25 ರಂದು 12 ಗಂಟೆಯ ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ. ಅಂತ್ಯಕ್ರಿಯೆ ಮೃತರ ತೋಟದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

Leave a Comment