ನಿವೃತ್ತ ASI ಸತ್ಯನಾರಾಯಣ ನಿಧನ- ಸಂತಾಪ
ಮೃತ ಸತ್ಯನಾರಾಯಣರವರಿಗೆ ಕಳೆದ ಮೂರು ದಿನಗಳ ಹಿಂದೇ ಅನಾರೋಗ್ಯದ ನಿಮಿತ್ತ ಶಿವಮೊಗ್ಗದ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು..ಆದರೇ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.
ನಿವೃತ್ತ ASI ರವರು 3 ವರ್ಷದ ಹಿಂದೇ ಇಲಾಖೆಯಿಂದ ನಿವೃತ್ತ ರಾಗಿದ್ದರು. ಶಿವಮೊಗ್ಗ ಜಿಲ್ಲೆಯ ಹಲವು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ರಿಪ್ಪನ್ ಪೇಟೆ ನಿವಾಸಿ ನಿವೃತ್ತ ASI ಸತ್ಯನಾರಾಯಣ ರವರ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಪಧಾದಿಕಾರಿಗಳು ಕಂಬನಿಮಿಡಿದು ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೀ, ಮೃತರ ಕುಟುಂಬಕ್ಕೆ ದುಃಖಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಮೃತರಿಗೆ ಇಬ್ಬರು ಮಕ್ಕಳು, ಮಗಳು ಮತ್ತು ಮಗ ಇರುತ್ತಾರೆ. ಮೃತರು ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಹಾಗೂ ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ರಿಪ್ಪನ್ ಪೇಟೆಯಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.
Leave a Comment