ಅತ್ಯುತ್ತಮ ಸೇವೆ ನೀಡುತ್ತಿರುವ ಜನರ ಮೆಚ್ಚುಗೆಯ ಶಿವಮೊಗ್ಗದ ಪೋಸ್ಟ್ ಮೆನ್ ಅಕ್ಷತಾ ನಾಯಕ್!!
ಅಕ್ಷತಾ ನಾಯಕ್ ಇವರು ಡೈಲಿ ವೇತನದಲ್ಲಿ 10 ವರ್ಷಕ್ಕಿಂತ ಹೆಚ್ಚು ದಿನ ಪೋಸ್ಟ್ ಆಫೀಸ್ ನಲ್ಲಿ ಸೇವೆಯನ್ನು ಸಲ್ಲಿಸಿ,ಇದೀಗ ಎರಡುವರೇ ವರ್ಷದಿಂದ ಫರ್ಮಿನೆಂಟ್ ಪೋಸ್ಟ್ ಮೆನ್ ಆಗಿ ನೇಮಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಮೂಲತಃ ಸೊರಬ ತಾಲ್ಲೂಕಿನ ಚಂದ್ರಗುತ್ತಿಯವರಾಗಿದ್ದು,ಇದೀಗ ಶಿವಮೊಗ್ಗ ನಗರದ RML ನಗರದಲ್ಲಿ ವಾಸವಾಗಿರುತ್ತಾರೆ. ಇವರಿಗೆ ಇದೀಗ ಮದುವೆಯಾಗಿದ್ದು, ಒಂದು ಮಗು ಸಹ ಇರುತ್ತದೆ.
ಬೆಳಿಗ್ಗೆ 7 ವರೆಗೆ ಕೆಲಸಕ್ಕೆ ಹಾಜರಾಗಬೇಕು. ಶಿವಮೊಗ್ಗ ನಗರದ ದುರ್ಗಿಗುಡಿ ಏರಿಯಾ ಮತ್ತು ತಿಲಕ್ ನಗರ, ಪಾರ್ಕ್ ಬಡಾವಣೆ,ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ತಮಗೆ ಬಂದ ಪೋಸ್ಟ್ ಗಳನ್ನು ಚುರುಕಾಗಿ ಚಾಚು ತಪ್ಪದೇ ಖುಷಿ ಖುಷಿಯಾಗಿ ಯಾವುದೇ ವಾಹನವಿಲ್ಲದೇ ಕಾಲ್ನಡಿಗೆಯಲ್ಲಿ ನಡೆದುಕೊಂಡು ಬಂದು ಟೈಮಿಗೆ ಸರಿಯಾಗಿ ಅಡ್ರೆಸಿಗೆ ಬಂದು ನಗುನಗುತಾ ಮಾತನಾಡಿಸಿ ಪೋಸ್ಟ್ ವಿತರಣೆ ಮಾಡಿ ಹೋಗುತ್ತಾರೆ ಅತ್ಯುತ್ತಮ ವಾಗಿ ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಅಂತಾ ಹೇಳಬಹುದು.
ನಾನು ಒಂದು ದಿವಸವೂ ನಾನು ಪೋಸ್ಟ್ ಆಫೀಸ್ ಗೆ ಹೋಗಿ ನನಗೆ ಬಂದ ಪೋಸ್ಟ್ ನ್ನು ಪಡೆದುಕೊಂಡು ಬಂದಿಲ್ಲ. ಹಾಗೇನಾದರೂ ನಾವು ಕಚೇರಿಯಲ್ಲಿ ಇಲ್ಲದಿದ್ದರೇ ನಿಮಗೆ ಒಂದು ಪೋಸ್ಟ್ ಬಂದಿದೆ ಸರ್ ಎಂದು ವಿನಯದಿಂದ ಮೊಬೈಲ್ ಗೆ ಪೋನ್ ಮಾಡಿ ಪೋಸ್ಟ್ ನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಅಕ್ಷತಾ ನಾಯಕ್ ಇವರು ದುರ್ಗಿಗುಡಿ, ಏರಿಯಾ ದಲ್ಲಿ ಜನರ ಮೆಚ್ಚುಗೆ ಗೆ ಪಾತ್ರರಾಗಿದ್ದಾರೆ.ಜನರ ಮೆಚ್ಚುಗೆಯ ಪ್ರೀತಿ ಪಾತ್ರರಾದ ಮಹಿಳಾ ಪೋಸ್ಟ್ ಮೆನ್ ಅಂತಲೇ ಹೇಳಬಹುದು.
ಅಕ್ಷತಾ ನಾಯಕ್ ಇವರ ಅತ್ಯುತ್ತಮ ಸೇವೆಯನ್ನು ಶಿವಮೊಗ್ಗದ ಹೆಡ್ ಪೋಸ್ಟ್ ಆಫೀಸ್, ಭಾರತೀಯ ಅಂಚೆ ಕಚೇರಿಯ ಅಧಿಕಾರಿಗಳು ಅಕ್ಷತಾ ನಾಯಕ್ ಇವರ ಸೇವೆಯನ್ನು ಗುರುತಿಸಿ ಇವರಿಗೆ ಮುಙದಿನ ದಿನಗಳಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲೀ ಎಂಬುದು ನಮ್ಮ ಸಾರ್ವಜನಿಕರ ಕಳಕಳಿಯಾಗಿರುತ್ತದೆ.
ಈಗಿನ ಹೆಣ್ಣುಮಕ್ಕಳು ಕೆಲವು ಕೆಲಸಗಳನ್ನು ಮಾಡಲು ಹಿಂಜರಿಯುವ ಕಾಲದಲ್ಲಿ ತಮಗೆ ಕೊಟ್ಟ ಕೆಲಸವನ್ನು ಶ್ರದ್ಧೆಯಿಂದ ಪೋಸ್ಟ್ ಮೆನ್ ಅಕ್ಷತಾ ನಾಯಕ್ ನಿರ್ವಹಿಸುತ್ತಿದ್ದಾರೆ. ಅವರಿಗೆ ದೇವರು ಆರೋಗ್ಯ, ಆಯಸ್ಸು ನ್ನು ನೀಡಲೀ.....ಎಂದು ಭಗವಂತನಲ್ಲಿ ಪ್ರಾರ್ಥಿಸುವ...
ಪೋಸ್ಟ್ ಮೆನ್ ಅಕ್ಷತಾ ನಾಯಕ್ ರವರ ಸೇವೆಗೆ ನಮ್ಮದೊಂದು ನಮಸ್ಕಾರ ಮತ್ತು ಧನ್ಯವಾದಗಳು...God bless you, All the best. ಅಕ್ಷತಾ ನಾಯಕ್...
Leave a Comment