ರಾಮನಕೊಪ್ಪದಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ..!ಕುಳ್ಳಿ ಕಿರಣನ ಸಾವು — ನಾಲ್ವರಿಗಾಗಿ ಪೊಲೀಸರ ಬಲೆ

ಶಿವಮೊಗ್ಗ: ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ರಾಮನಕೊಪ್ಪದಲ್ಲಿ  ಮಾರಣಾಂತಿಕ ಹಲ್ಲೆ ಕುಳ್ಳಿ ಕಿರಣನ ಸಾವು 
ರಾಮನಕೊಪ್ಪದಲ್ಲಿ ನಡೆದ ಈ ಘಟನೆಯಲ್ಲಿ ಸಿಗೇಹಟ್ಟಿಯ ಕುಳ್ಳಿ ಕಿರಣ ಎಂಬಾತ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.
ರಾಮನಕೊಪ್ಪದಲ್ಲಿ  ಕಿರಣ ಹಣಕಾಸಿನ ನೆರವು ನೀಡುತ್ತಿದ್ದ ಎನ್ನಲಾಗಿದೆ. 
ಈ ವಿಚಾರವಾಗಿ ಕೆಲವರೊಂದಿಗೆ ಆತನಿಗೆ ವೈಷಮ್ಯವಿತ್ತು ಎನ್ನಲಾಗಿದ್ದು, ಹಳೆಯ ದ್ವೇಷವೇ ಹಲ್ಲೆಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಇಂದು ಏಕಾಏಕಿ ಕಿರಣನ ಮೇಲೆ ಹಲ್ಲೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣ ನಾರಾಯಣ ಹೃದಯಾಲಯಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಿರಣ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಬಳಿಕ ಮೃತದೇಹವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಇರಿಸಲಾಗಿದೆ.
ಘಟನೆ ಸಂಬಂಧ ಶಿವಮೊಗ್ಗ ಪೊಲೀಸರು ತನಿಖೆ ಆರಂಭಿಸಿದ್ದು, ಹೊಸಕೊಪ್ಪದ ಉಮೇಶ್ ಸೇರಿದಂತೆ ನಾಲ್ವರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ ಎನ್ನಲಾಗಿದೆ.

 ಈ ಮಾರಣಾಂತಿಕ ಹಲ್ಲೆಯ ಹಿಂದೆ ಹಣಕಾಸಿನ ವಿಚಾರವಿದೆಯೇ? ಅಥವಾ ಹಳೆಯ ವೈಷಮ್ಯವೇ ಕಾರಣವೇ? ಎಂಬುದನ್ನು ಪೊಲೀಸ್ ತನಿಖೆ ಸ್ಪಷ್ಟಪಡಿಸಬೇಕಿದೆ.
ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ತನಿಖೆಯ ನಂತರ ಹೊರಬರಬೇಕಿದೆ.

  ಪ್ರಕರಣ ಕುರಿತು ಶಿವಮೊಗ್ಗ ಎಸ್ಪಿ ನಿಖಿಲ್ ಬಿ ಹೇಳಿದ್ದೆನು?
ಪ್ರಾಥಮಿಕ ಹಂತದ ಮಾಹಿತಿಯ ಅನುಸಾರ ಕುಳ್ಳಿ ಕಿರಣನ ಹತ್ಯೆಗೆ, ವೈಯಕ್ತಿಕ ಹಣಕಾಸು ವ್ಯವಹಾರ ಕಾರಣವಾಗಿದೆ. ಇಬ್ಬರಿಂದ ಮೂವರು ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ತನಿಖೆ ನಡೆಯುತ್ತಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ’ ಎಂದು ಎಸ್ಪಿ ನಿಖಿಲ್ ಬಿ ಅವರು ಹಲೋ ಶಿವಮೊಗ್ಗ ಕ್ಕೆ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಶಿವಮೊಗ್ಗ ಜಿಲ್ಲಾ ಸುದ್ದಿಗಳಿಗಾಗಿ ‘ಹಲೋ ಶಿವಮೊಗ್ಗ’ ಚಾನೆಲ್‌ ಅನ್ನು ಸಬ್‌ಸ್ಕ್ರೈಬ್ ಮಾಡಿ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.