ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಇಸ್ಪೀಟ್ ಅಡ್ಡೆಯಲ್ಲಿ ನರಸಿಂಹನ ಭೀಕರ ಕೊಲೆ ...

ಶಿವಮೊಗ್ಗ :ಶಿವಮೊಗ್ಗ ನಗರದ ಗಾಂಧಿ ಬಜಾರ್‌ನಲ್ಲಿ ನಿನ್ನೆ (ಜೂನ್ 12, 2026) ರೌಡಿಶೀಟರ್ ನರಸಿಂಹ (39) ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರ ಕೊಲೆ ಮಾಡಿದ್ದಾರೆ.

ನಗರದ ಗಾಂಧಿ ಬಜಾರ್ ದಲ್ಲಿ ಶುಕ್ರವಾರ ಸಂಜೆ ನಡೆದ ಭೀಕರ ಕೊಲೆ ನಗರದಲ್ಲಿ ಆತಂಕ ಮೂಡಿಸಿದೆ. ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ರೌಡಿ ಹಿನ್ನೆಲೆ ಹೊಂದಿದ್ದ ಎನ್ನಲಾದ ನರಸಿಂಹ ಎಂಬಾತನನ್ನು ದುಷ್ಕರ್ಮಿಗಳು ಮಚ್ಚು, ಲಾಂಗ್‌ಗಳಂತಹ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಶಿವಮೊಗ್ಗ ನಗರದ  ನಾಗಪ್ಪನ ಕೇರಿ ಹಳೇ ಪೋಸ್ಟ್ ಆಫೀಸ್ ಎದುರು, ಬ್ರಾಂಡಿ ಶಾಪ್ ಹತ್ತಿರ ಇಸ್ಪೀಟು ಅಡ್ಡೆ ನಡೆಯುತ್ತಿತ್ತು. ಸುಮಾರು 20 ದಿವಸಗಳ ಹಿಂದೇ ಸದರಿ ಮನೆ ಡೆಮಾಲಿಷ್ ಆದ್ದರಿಂದ ಹಿಂದಿನ ರಸ್ತೆಯಲ್ಲಿ ಕರಿದೇವರಕೇರಿಯ ಜ್ಯೋತಿ ಕ್ಲಿನಿಕ್ ಹತ್ತಿರ ಇರುವ ಮನೆಗೆ ಶಿಪ್ಟ್ ಆಯಿತು ಸದರಿ ಜಾಗದಲ್ಲಿ ಇದೀಗ ಕೊಲೆ ನಡೆದಿದೆ

ಸದರಿ ಜಾಗದಲ್ಲಿ. ಪ್ರತಿದಿನ ಇಸ್ಪೀಟ್ ಆಟವಾಡುವ ವ್ಯಕ್ತಿಗಳು ಮತ್ತು ಇತರರ ನಡುವೆ ಜಗಳವಾಗುತ್ತಿತ್ತು ಎಂದು ಸ್ಥಳೀಯ ಜನರು ಹೇಳುತ್ತಾರೆ.

ಶುಕ್ರವಾರ ಸಂಜೆ ಸುಮಾರು 3 ರಿಂದ 4 ಗಂಟೆ ಸಮಯದಲ್ಲಿ   ಬಜಾರ್‌ನಲ್ಲಿದ್ದ ವೇಳೆ ಅಂಬು ಮತ್ತು ಆತನ ಸಹಚರರು ಎನ್ನಲಾದ ಗುಂಪು ದಾಳಿ ನಡೆಸಿ ಬಳಿಕ ಪರಾರಿಯಾಗಿದೆ ಎಂದು ಹೇಳಲಾಗಿದೆ. 
ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತ ನರಸಿಂಹ ಕಾಡಾ ಕಾರ್ತಿಕನ ಆಪ್ತ ಸಹಚರನಾಗಿದ್ದ ಎನ್ನಲಾಗಿದ್ದು, ಕೆಲವು ಅಪರಾಧ ಪ್ರಕರಣಗಳಲ್ಲೂ ಆತನ ಹೆಸರು ಕೇಳಿಬಂದಿತ್ತು ಎಂದು ತಿಳಿದುಬಂದಿದೆ. 
ಇದೇ ವೇಳೆ, ಈ ಇಸ್ಪೀಟ್ ಅಡ್ಡೆಯನ್ನು “ಪಾತಾಳಿ ” ಎಂಬ ರೌಡಿ ಶೀಟರ್  ವ್ಯಕ್ತಿ ನಡೆಸುತ್ತಿದ್ದ ಎನ್ನುವ ಮಾಹಿತಿ ಸ್ಥಳೀಯ ವಲಯಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಮಾಹಿತಿಯನ್ನು ಪೊಲೀಸರು ಅಧಿಕೃತವಾಗಿ ದೃಢಪಡಿಸಿಲ್ಲ. ಹತ್ಯೆಗೆ ಇಸ್ಪೀಟ್ ಅಡ್ಡೆ ನಡೆಸುವ ಚಟುವಟಿಕೆಗಳು ಅಥವಾ ಇತರೆ ಹಳೇಯ ವೈಷಮ್ಯ ಕಾರಣವೇ ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.
ಸ್ಥಳಕ್ಕೆ ಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ಪ್ರಕರಣದ ಎಲ್ಲ ಆಯಾಮಗಳನ್ನು ಪರಿಗಣಿಸಿ ಕೋಟೆ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳ ಪತ್ತೆಗೆ ಕ್ರಮಕೈಗೊಂಡಿದ್ದಾರೆ.
ಇಸ್ಪೀಟ್ ಅಡ್ಡೆ ಬಗ್ಗೆ  ಕೋಟೆ ಠಾಣೆ ಇನ್ಸ್ಪೆಕ್ಟರ್ ಗೆ ಅನೇಕ ಬಾರಿ ಮಾಹಿತಿ ಕೊಡಲಾಗಿತ್ತು!!ವಿಡಿಯೋ ನೋಡಿ

ಶಿವಮೊಗ್ಗ ನಗರದ  ನಾಗಪ್ಪನ ಕೇರಿ ಹಳೇ ಪೋಸ್ಟ್ ಆಫೀಸ್ ಎದುರು, ಬ್ರಾಂಡಿ ಶಾಪ್ ಹತ್ತಿರ ಇಸ್ಪೀಟು ಅಡ್ಡೆ ನಡೆಯುತ್ತಿತ್ತು. ಸುಮಾರು 20 ದಿವಸಗಳ ಹಿಂದೇ ಸದರಿ ಮನೆ ಡೆಮಾಲಿಷ್ ಆದ್ದರಿಂದ ಹಿಂದಿನ ರಸ್ತೆಯಲ್ಲಿ ಕರಿದೇವರಕೇರಿಯ ಜ್ಯೋತಿ ಕ್ಲಿನಿಕ್ ಹತ್ತಿರ ಇರುವ ಮನೆಗೆ ಶಿಪ್ಟ್ ಆಯಿತು ಸದರಿ ಜಾಗದಲ್ಲಿ ಇದೀಗ ಕೊಲೆ ನಡೆದಿದೆ

ಸದರಿ ಜಾಗದಲ್ಲಿ ಇಸ್ಪೀಟ್ ಅಡ್ಡೆ ನಡೆಯುತ್ತಿರುವ ಬಗ್ಗೆ, ದಿನ ನಿತ್ಯ ಗಲಾಟೆ ಆಗುತ್ತಿರುವ ಬಗ್ಗೆ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿರುವ ಬಗ್ಗೆ ಎರಡು ಮೂರು ಬಾರಿ ಹಲೋ ಶಿವಮೊಗ್ಗ ದಿನಪತ್ರಿಕೆ  ಕೋಟೆ ಇನ್ಸ್ಪೆಕ್ಟರ್ ಹರೀಶ್ ಪಾಟೀಲ್ ರವರಿಗೆ ಮತ್ತು ಜಿಲ್ಲಾರಕ್ಷಣಾಧಿಕಾರಿಯವರ EYE ವ್ಯಾಟ್ಸಪ್ ಗ್ರೂಪ್ ಗೆ ಕಳುಹಿಸಿ ಸೂಕ್ತವಾದ ಕ್ರಮ ಕೈಗೊಳ್ಳಲು  ದಿನಾಂಕ 13-3-2026 ರಂದು ವಿಡಿಯೋವನ್ನು ಕಳುಹಿಸಿ ತಿಳಿಸಲಾಗಿತ್ತು.ಮುಂಜಾಗ್ರತಾ ಕ್ರಮಕೈಗೊಳ್ಳದ ಕಾರಣ ಕೊಲೆಯಲ್ಲಿ ಅಂತ್ಯವಾಗಿದೆ .


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.