ವಿಪಕ್ಷಗಳು ಸಚಿವ ನಾಗೇಂದ್ರ ಅವರ ಪದಚ್ಯುತಿ ನೆಪದಲ್ಲಿ ಕಲಾಪಗಳನ್ನು ಹಾಳು ಮಾಡುತ್ತಿವೆ : ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ:  ವಿಧಾನ ಮಂಡಲದಲ್ಕಿ ಚರ್ಚೆ ಆದ ಬಳಿಕವಷ್ಟೇ ಬರ ಪರಿಸ್ಥಿತಿ ಬಗ್ಗೆ ಘೋಷಣೆ ಮಾಡಬೇಕಾಗುತ್ತದೆ. ಆದರೆ ವಿಪಕ್ಷಗಳು ವಿನಾಕಾರಣ  ಸಚಿವ ನಾಗೇಂದ್ರ ಅವರ ಪದಚ್ಯುತಿ ನೆಪದಲ್ಲಿ ಕಲಾಪಗಳನ್ನು ಹಾಳು ಮಾಡುತ್ತಿವೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬರದ ಛಾಯೆ ಇದೆ. ಮಳೆ ಬಂದಂತೆ ಕಾಣುತ್ತದೆ. ಆದರೆ ನೀರಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಬಿಜೆಪಿಯವರು ಗದ್ದಲ ಗಲಾಟಯಲ್ಲೇ ಕಲಾಪ ನುಂಗುತ್ತಿದಗದಾರೆ. ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಿಸಿದರು. ನಾಗೇಂದ್ರ ಕುರಿತು ವಿಪಕ್ಷಗಳಿಗೆ ಸರ್ಕಾರ ಕಾನೂನಿನ ಮೂಲಕ ಉತ್ತರ ಕೊಡುತ್ತದೆ. ವಿರೋಧ ಪಕ್ಷಗಳು  ಟೀಕೆ ಟಿಪ್ಪಣೆ ಮಾಡಲಿ. ಆದರೆ ಸದನದಲ್ಲಿ ಚರ್ಚೆಗೇ ಬರಲ್ಲ ಅಂದರೆ ಏನರ್ಥ ಎಂದು ಪ್ರಶ್ನಿಸಿದ ಅವರು ದ್ವೇಷದ ರಾಜಕಾರಣ ಮಾಡಲೆಂದೇ ಬಿಜೆಪಿಗರಿದ್ದಾರಾ ಎಂದು ಕಟುಕಿಯಾಡಿದರು.
ಅಯ್ಯೋಧ್ಯಾ ಶ್ರೀ ರಾಮ ಮಂದಿರ ಮೊದಲಾದೆಡೆ ಹುಂಡಿ ಕಳ್ಳತನವಾಗಿದೆ. ಅದರ ಬಗ್ಗೆ ಬಿಜೆಪಿಗರು ಸೊಲ್ಲೆತ್ತುತ್ತಿಲ್ಲ. ಯುಪಿ, ಬಿಹಾರ್, ಪ.ಬಂಗಾಲಗಳಲ್ಲಿ ನಡೆದ ವಾಷಿಂಗ್ ಮಷಿನ್ ಬಗ್ಗೆ ಈಗ ಚರ್ಚೆ ಶುರು ಮಾಡಬೇಕಾ? ಚೌಕಿದಾರರೇ ಕಳ್ಳರಾದರೆ ಹೇಗೆ ಎಂದು ಛೇಡಿಸಿದರು.
ಮಾಜಿ ಸಚಿವ ಕುಮಾರ ಬಂಗಾರಪ್ಪ ಬಿಜೆಪಿಯಲ್ಲಿ ಒಬ್ಬ ಡಮ್ಮಿಯಾಗಿದ್ದಾರೆ ಅಷ್ಟೆ. ಅವರೊಬ್ಬ ತುಕ್ಕು ಹಿಡಿದ ವಸ್ತುವಾಗಿದ್ದಾರೆ. ತುಕ್ಕು ಹಿಡಿದ ವಸ್ತುವನ್ನು ಎಷ್ಟೇ ತಿಕ್ಕಿದರೂ ಆ ಗುಣ ಬಿಡುವುದಿಲ್ಲ. ತುಕ್ಕು ಹಿಡಿದವರ ಬಗ್ಗೆ ಯಾಕೆ ಪ್ರಶ್ನೆ ಕೇಳಿ ಸಮಯ ವ್ಯರ್ಥ ಮಾಡುತ್ತೀರಿ ಎಂದು ಕುಮಾರ ಬಂಗಾರಪ್ಪ ಅವರನ್ನು ಜರಿದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.