ತೀರ್ಥಹಳ್ಳಿಯಲ್ಲಿ ಅಡಿಕೆ ಹಣದ ಬಾಕಿ ವಿಚಾರಕ್ಕೆ ವ್ಯಕ್ತಿಯ ಅಪಹರಣ, ಹಲ್ಲೆ!
ತೀರ್ಥಹಳ್ಳಿ: ಅಡಿಕೆ ವ್ಯಾಪಾರದ ಹಳೆಯ ಹಣಕಾಸಿನ ಬಾಕಿ ನೀಡಲು ತಡವಾಗಿದ್ದಕ್ಕೆ ವ್ಯಕ್ತಿಯೋರ್ವನನ್ನು ಬಲವಂತವಾಗಿ ವಾಹನದಲ್ಲಿ ಕರೆದೊಯ್ದು ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ತೂದೂರಿನಲ್ಲಿ ನಡೆದಿದೆ.
ತೂದೂರಿನ ಹೋಟೆಲ್‌ವೊಂದರ ಮುಂಭಾಗದಲ್ಲಿ ನಿಂತಿದ್ದ ಸುಧೀರ್ ಅವರೊಂದಿಗೆ ಥಾರ್ ಜೀಪ್‌ನಲ್ಲಿ ಬಂದ ಮಂಡಗದ್ದೆ ಮೂಲದ ಇಬ್ಬರು ವ್ಯಕ್ತಿಗಳು ಜಗಳ ತೆಗೆದಿದ್ದಾರೆ ಎನ್ನಲಾಗಿದೆ. ಬಳಿಕ ಅವರನ್ನು ಬಲವಂತವಾಗಿ ವಾಹನದಲ್ಲಿ ಕೂರಿಸಿಕೊಂಡು ಹೋಗಿ, ಮಾರ್ಗಮಧ್ಯೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನಂತರ ಸುಧೀರ್ ಅವರನ್ನು ಮತ್ತೆ ತೂದೂರಿನ ಅದೇ ಸ್ಥಳಕ್ಕೆ ಕರೆತಂದು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತರು ನೀಡಿದ ದೂರಿನ ಆಧಾರದ ಮೇಲೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮದ ನಿರೀಕ್ಷೆಯಿದೆ.
ಹಲೋ ಶಿವಮೊಗ್ಗ – ನಿಮ್ಮ ಜಿಲ್ಲೆಯ ಸುದ್ದಿಗಳಿಗಾಗಿ ನಮ್ಮ ಚಾನೆಲ್‌ನ್ನು Subscribe ಮಾಡಿ, Like ಮತ್ತು Share ಮಾಡಿ.

Leave a Comment