ವರಮಹಾಲಕ್ಷ್ಮಿ ಪೂಜೆಯ ಅಂಗವಾಗಿ ಅನಂತಶಯನ ಅಲಂಕಾರ
ಶಿವಮೊಗ್ಗ: ವರಮಹಾಲಕ್ಷ್ಮಿ ಪೂಜೆಯ ಪ್ರಯುಕ್ತ ಶಿವಮೊಗ್ಗ ನಗರದ ಗೋಪಾಳ ನಿವಾಸಿ ಶ್ರೀಮತಿ ಮಮತಾ ದಿನೇಶ್ ಅವರ ಮನೆಯಲ್ಲಿ ವಿಶೇಷ ಧಾರ್ಮಿಕ ಅಲಂಕಾರವನ್ನು ಮಾಡಲಾಗಿತ್ತು.
ವರಮಹಾಲಕ್ಷ್ಮಿ ಪೂಜೆಯ ಅಂಗವಾಗಿ ಮನೆಯಲ್ಲಿ ಅನಂತಶಯನ ಅಲಂಕಾರವನ್ನು ಅತ್ಯಂತ ಭಕ್ತಿಭಾವದಿಂದ ಸಿದ್ಧಪಡಿಸಲಾಗಿದ್ದು, ವಿಶೇಷವಾಗಿ ಗಮನ ಸೆಳೆಯಿತು.
ಸಾಂಪ್ರದಾಯಿಕ ರೀತಿಯಲ್ಲಿ ದೇವರ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುವ ಮೂಲಕ ಕುಟುಂಬಸ್ಥರು ಭಕ್ತಿ ಮತ್ತು ಶ್ರದ್ಧೆಯಿಂದ ವರಮಹಾಲಕ್ಷ್ಮಿ ದೇವಿಯನ್ನು ಆರಾಧಿಸಿದರು.
ಈ ಸಂದರ್ಭದಲ್ಲಿ ಕುಟುಂಬಸ್ಥರು ಹಾಗೂ ಬಂಧು-ಬಳಗದವರು ಪೂಜೆಯಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದರು.
ಹಲೋ ಶಿವಮೊಗ್ಗ — ಸ್ಥಳೀಯ ಧಾರ್ಮಿಕ ಹಾಗೂ ಪ್ರಮುಖ ಸುದ್ದಿಗಳಿಗಾಗಿ ನಮ್ಮ ಚಾನೆಲ್‌ನ್ನು Subscribe ಮಾಡಿ, Like ಮತ್ತು Share ಮಾಡಿ.

Leave a Comment