ದೇವಸ್ಥಾನಕ್ಕಿಂತ ಶಾಲೆ ದೊಡ್ಡದೆಂಬ ಮನೋಭಾವ ಬೆಳೆಯಬೇಕು: ಮಧು ಬಂಗಾರಪ್ಪ
ಶಿವಮೊಗ್ಗ,ಆ.22: ದೇವಸ್ಥಾನಕ್ಕಿಂತ ಶಾಲೆ ದೊಡ್ಡದು ಎನ್ನುವ ಮನೋಭಾವ ಸಮಾಜದಲ್ಲಿ ಬೆಳೆದಾಗ ಮಾತ್ರ ನಿಜವಾಗಿ ನಮ್ಮ ಮಕ್ಕಳ ಭವಿಷ್ಯದ ಉಜ್ವಲಗೊಳ್ಳಲಿದ್ದು, ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಾಲಾ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಅವರು ಶಿವಮೊಗ್ಗದಲ್ಲಿ ಅಜಾಕ್ಸ್ ಕಂಪನಿ ವತಿಯಿಂದ ಶನಿವಾರ ಸುಮಾರು 13.5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಇವತ್ತು ಶಿಕ್ಷಣ ಇಲಾಖೆಯಲ್ಲಿ ಒಂದು ಮಹತ್ವದ ದಿನವಾಗಿದೆ. ಕೆಪಿಎಸ್ ಶಾಲೆ ಬುನಾದಿ ಹಾಕುವ ಮೂಲಕ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಹೊಸ ಹೆಜ್ಜೆ ಇಟ್ಟಿದ್ದೇವೆ. ಮೂರು ವರ್ಷ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿದ್ದೇವೆ. ಇಲಾಖೆ ಸಮಸ್ಯೆಗಳನ್ನು ಅರಿತಿದ್ದೇನೆ. ಶೇ.80 ರಷ್ಟು ಸರ್ಕಾರಿ ನೌಕರರ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವೆಲ್ಲವನ್ನೂ ಸರಿದೂಗಿಸಿಕೊಂಡು ಹೊಸ ಕಾರ್ಯಕ್ಕೆ ಸಜ್ಜಾಗಿದ್ದೇವೆ ಎಂದರು.
ಮಕ್ಕಳ ಭವಿಷ್ಯದ ಹಿತಾದೃಷ್ಟಿಯಿಂದ ಆಡಳಿತ ಮತ್ತು ವಿರೋಧ ಪಕ್ಷಗಳು ಒಂದಾಗಿ ಈ ಕಾರ್ಯ ಮಾಡುತ್ತಿದ್ದೇವೆ. ಕೇವಲ ಇದು ಸರ್ಕಾರ ಮಾಡುವ ಕೆಲಸವಲ್ಲದೆ ನಮ್ಮೆಲ್ಲರ ಜವಾಬ್ದಾರಿಯೆಂದು ಮಾಡುತ್ತಿದ್ದೇವೆ. ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡುವ ಮನೋಭಾವನೆ ಅಗತ್ಯವಿದೆ ಎಂದರು.
ಶಿಕ್ಷಣ ಇಲಾಖೆ ಸರ್ಕಾರದ ಅತಿದೊಡ್ಡ ಇಲಾಖೆಗಳಲ್ಲಿ ಒಂದಾಗಿದ್ದು, ಇದು ಲಾಭ ಮಾಡುವ ಕ್ಷೇತ್ರವಲ್ಲ. ಬದಲಾಗಿ ಮಕ್ಕಳ ಭವಿಷ್ಯ ರೂಪಿಸುವ ಮಹತ್ವದ ಜವಾಬ್ದಾರಿ ಹೊಂದಿದೆ. ನಮ್ಮ ಮಕ್ಕಳು ಎಂದರೆ ನಮ್ಮ ಮನೆಯಲ್ಲಿ ಹುಟ್ಟಿದ ಮಕ್ಕಳಷ್ಟೇ ಅಲ್ಲ. ಈ ರಾಜ್ಯದ ಪ್ರತಿಯೊಂದು ಮಗು ಕೂಡ ನಮ್ಮ ಮನೆಯ ಮಗುವಿನಂತೆ ಎಂಬ ಭಾವನೆಯಿಂದ ಕೆಲಸ ಮಾಡಬೇಕು ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದು ಕಾರ್ಯಕ್ರಮವಲ್ಲ ಇದು ಕಾರ್ಯ. ಶ್ರಾವಣ ಮಾಸದಲ್ಲಿ ಇಂತಹ ಒಳ್ಳಯ ಕಾರ್ಯ ಆರಂಭವಾಗಿರುವುದು ನನಗೆ ಸಂತಸ ತಂದಿದೆ ಎಂದರು.
ಶಿಕ್ಷಣ ವ್ಯವಸ್ಥೆಗೆ ಸೇವೆ ಮಾಡುವಂತಹ ಮನಸುಗಳು ಈ ದೇಶದಲ್ಲಿ ಇದೆ. ಅವರನ್ನು ಗುರುತಿಸುವ ಕೆಲಸ ರಾಜ್ಯ ಸರ್ಕಾರ ಹಾಗೂ ಸಚಿವ ಮಧು ಬಂಗಾರಪ್ಪ ಮಾಡಿದ್ದಾರೆ. ಈಗ ಬದಲಾದ ಪರಿಸ್ಥಿಯಲ್ಲಿ ಒಂದು ಕಂಪನಿ ಮುಂದೆ ಬಂದಿದೆ. ಭವಿಷ್ಯದಲ್ಲಿ ಇದು ಹೆಚ್ಚಾಗಬಹುದು ಎಂದರು.
ಶಿವಮೊಗ್ಗ ಜಿಲ್ಲೆ ಎಲ್ಲಾ ಜಿಲ್ಲೆಗಳಿಂದ ವಿಭಿನ್ನ. ಇಲ್ಲಿ ಯಾವುದೇ ಪಕ್ಷವಿರಲಿ, ಯಾವುದೇ ಸರ್ಕಾರರ ಅಧಿಕಾರವಿರಲಿ. ಚುನಾವಣೆಯಲ್ಲಿ ಮಾತ್ರ ರಾಜಕೀಯ ನಡೆಯುತ್ತದೆ. ಅದರ ಹೊರತಾಗಿ ಅಭಿವೃದ್ದಿಯೇ ಮುಖ್ಯ ಉದ್ದೇಶವಾಗಿರುತ್ತದೆ ಎಂದರು.
ಎಂಎಲ್‌ಸಿ ಡಿ.ಎಸ್.ಅರುಣ್ ಮಾತನಾಡಿ, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಹೆಚ್ಚು ಒತ್ತು ಕೊಡಲಿಲ್ಲ ಅಂದರೆ ಭವಿಷ್ಯದಲ್ಲಿ ಮಕ್ಕಳು ಕನ್ನಡ ಭಾಷೆಯನ್ನು ದ್ವೇಷಿಸುವಂತರಾಗುತ್ತಾರೆ. ಹಾಗಾಗಿ ಅದನ್ನು ಉಳಿಸುವ ಪ್ರಯತ್ನ ಮಾಡಬೇಕು. ನಾವೆಲ್ಲರೂ ನಮ್ಮ ಮಾತೃ ಭಾಷೆಯಾದ ಕನ್ನಡ ಜೊತೆಗೆ ್ಲ ಭಾವನಾತ್ಮಕ ಸಂಬAಧವನ್ನು ಇಟ್ಟುಕೊಂಡಿದ್ದೇವೆ ಎಂದರು.
ಬಹಳ ದಿನಗಳಿಂದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಕೂಡಲೇ ಶಿಕ್ಷಕರನ್ನು ಬೇಗ ನೇಮಕ ಮಾಡಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಕೆಪಿಎಸ್ ಶಾಲೆ ಯೋಜನೆಯ ನಿರ್ಣಯ ಒಳ್ಳೆಯ ಕೆಲಸ. ಮಧು ಬಂಗಾರಪ್ಪ ಅವರ ಈ ಕರ್ತವ್ಯ ಸೇವೆಯ ಜೊತೆ ನಾವು ಇರ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಎಜಕ್ಸ್ ಇಂಜಿನಿಯರಿAಗ್ ಟ್ರಸ್ಟ್ನ ಕಲ್ಯಾಣಿ ವಿಜಯ್, ಎಂಎಲ್‌ಸಿ ಬಲ್ಕೀಶ್ ಬಾನು, ನಿಗಮದ ಅಧ್ಯಕ್ಷರುಗಳಾದ ಚೇತನ್.ಕೆ ಗೌಡ, ಪಲ್ಲವಿ.ಜಿ, ಗ್ಯಾರಂಟಿ ಯೋಜನೆ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಡಿಸಿ ಪ್ರಭುಲಿಂಗ ಕವಳಿಕಟ್ಟಿ, ಸಿಇಓ ಹೇಮಂತ್.ಎನ್, ಎಸ್ಪಿ ನಿಖಿಲ್.ಬಿ, ಆರ್.ಪ್ರಸನ್ನಕುಮಾರ್ ಸೇರಿದಂತೆ ಹಲವರು ಇದ್ದರು.

Leave a Comment