ಭದ್ರಾವತಿಯಲ್ಲಿ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಶಾಖೆ: ನಟ ದೊಡ್ಡಣ್ಣರಿಂದ ಉದ್ಘಾಟನೆ
ಭದ್ರಾವತಿ: ನಗರದ ಭೂತನಗುಡಿ ಹಳೇ ಸಂತೇಮೈದಾನದ ರಸ್ತೆಯಲ್ಲಿರುವ ಎಸ್‌ಎಲ್‌ಎನ್ ಆಸ್ಪತ್ರೆ ಎದುರು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಯ ಭದ್ರಾವತಿ ಶಾಖೆ ಶುಭಾರಂಭಗೊಂಡಿದೆ.
ಭದ್ರಾವತಿ ಹಾಗೂ ಸುತ್ತಮುತ್ತಲಿನ ಜನರಿಗೆ ಗುಣಮಟ್ಟದ ನೇತ್ರ ಚಿಕಿತ್ಸಾ ಸೇವೆಗಳನ್ನು ಸ್ಥಳೀಯವಾಗಿಯೇ ಒದಗಿಸುವ ಉದ್ದೇಶದಿಂದ ಈ ಶಾಖೆ ಆರಂಭಿಸಲಾಗಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ಅಧಿಕಾರಿ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಡಾ. ಶಮಾ ಬೇಗಂ, ಫಕ್ರುದ್ದಿನ್, ವಿಮಲ, ಬಿ.ಪಿ. ಶಿವಕುಮಾರ್, ಡಾ. ಟಿ. ನರೇಂದ್ರ ಭಟ್, ಡಾ. ವೆಂಕಟೇಶ್ ಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹೊಸ ಶಾಖೆಯ ಆರಂಭದಿಂದ ಭದ್ರಾವತಿ ಭಾಗದ ಜನರಿಗೆ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಸೇವೆಗಳು ಮತ್ತಷ್ಟು ಸುಲಭವಾಗಿ ದೊರೆಯುವ ನಿರೀಕ್ಷೆಯಿದೆ.
ಇದೇ ರೀತಿ ಶಿವಮೊಗ್ಗ ಮತ್ತು ಜಿಲ್ಲೆಯ ಪ್ರಮುಖ ಸುದ್ದಿಗಳಿಗಾಗಿ ‘ಹಲೋ ಶಿವಮೊಗ್ಗ’ ಯೂಟ್ಯೂಬ್ ಚಾನೆಲ್‌ನ್ನು ಸಬ್‌ಸ್ಕ್ರೈಬ್ ಮಾಡಿ, ಬೆಲ್ ಐಕಾನ್ ಒತ್ತಿ.
ಹಲೋ ಶಿವಮೊಗ್ಗ – ನಿಮ್ಮೂರಿನ ಸುದ್ದಿ, ನಿಮ್ಮ ಧ್ವನಿ.

Leave a Comment