ಕೌಟುಂಬಿಕ ಕಲಹದ ಬಳಿಕ 30ಕ್ಕೂ ಹೆಚ್ಚು ಮಾತ್ರೆ ಸೇವಿಸಿದ್ದ ಮಹಿಳೆ – ERSS 112 ಸಿಬ್ಬಂದಿಯಿಂದ ಸಮಯಕ್ಕೆ ರಕ್ಷಣೆ

ಕೌಟುಂಬಿಕ ಕಲಹದ ಬಳಿಕ 30ಕ್ಕೂ ಹೆಚ್ಚು ಮಾತ್ರೆ ಸೇವಿಸಿದ್ದ ಮಹಿಳೆ – ERSS 112 ಸಿಬ್ಬಂದಿಯಿಂದ ಸಮಯಕ್ಕೆ ರಕ್ಷಣೆ
ಶಿವಮೊಗ್ಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿ 30ಕ್ಕೂ ಹೆಚ್ಚು ಮಾತ್ರೆಗಳನ್ನು ಸೇವಿಸಿದ ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ.

ಮಹಿಳೆ ಮಾತ್ರೆ ಸೇವಿಸಿರುವ ಬಗ್ಗೆ ERSS 112ಕ್ಕೆ ಕರೆ ಬಂದ ತಕ್ಷಣ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ CHC ವೀರೇಶಯ್ಯ B.M. ಹಾಗೂ DAR ಶಿವಮೊಗ್ಗದ AHC ಸುರೇಶ್ ನಾಯ್ಕ್ ಅವರು ERV ವಾಹನದಲ್ಲಿ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಮಹಿಳೆಗೆ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವುದನ್ನು ಗಮನಿಸಿದ ಪೊಲೀಸರು, ವಿಳಂಬ ಮಾಡದೆ ERSS ವಾಹನದಲ್ಲೇ ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ.

ತಕ್ಷಣ ಸ್ಪಂದಿಸಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಸಮಯಪ್ರಜ್ಞೆ ಹಾಗೂ ಕರ್ತವ್ಯನಿಷ್ಠೆ ಮೆರೆದ ERSS 112 ಸಿಬ್ಬಂದಿಯ ಕಾರ್ಯಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದನೆ ಸಲ್ಲಿಸಲಾಗಿದೆ.

ಸಂಕಷ್ಟದ ಸಂದರ್ಭದಲ್ಲಿ 112ಕ್ಕೆ ಕರೆ ಮಾಡಿದರೆ ತುರ್ತು ಸೇವೆ ಲಭ್ಯವಾಗಲಿದೆ.

ಸೂಚನೆ: ಮಹಿಳೆಯ ಗುರುತು ಮತ್ತು ವೈಯಕ್ತಿಕ ವಿವರಗಳನ್ನು ಗೌಪ್ಯವಾಗಿಡಲಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.