ಆಗಸ್ಟ್ 23ರಿಂದ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ
ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯಲ್ಲಿರುವ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ಶ್ರಾವಣ ಮಾಸದ ಅಂಗವಾಗಿ ವಿವಿಧ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಆಗಸ್ಟ್ 23, ಭಾನುವಾರ ಶ್ರಾವಣ ಶುಕ್ಲ ಏಕಾದಶಿಯಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಶ್ರೀ ಮೈಲಾರೇಶ್ವರ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಹಾಲಿನ ಅಭಿಷೇಕ ನಡೆಯಲಿದೆ.
ಆಗಸ್ಟ್ 30, ಭಾನುವಾರ ಶ್ರಾವಣ ಕೃಷ್ಣ ದ್ವಿತೀಯೆಯಂದು ಶ್ರೀ ಮೈಲಾರೇಶ್ವರ ದೇವರ ಸನ್ನಿಧಿಯಲ್ಲಿ ಶತವಾರ ರುದ್ರಾಭಿಷೇಕ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ನೆರವೇರಲಿದೆ.
ಸೆಪ್ಟೆಂಬರ್ 4, ಶುಕ್ರವಾರ ಶ್ರಾವಣ ಕೃಷ್ಣ ಅಷ್ಟಮಿಯಂದು ಶ್ರೀ ರಣದಮ್ಮ ದೇವಿಯ ಸನ್ನಿಧಿಯಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಸಾಮೂಹಿಕ ತುಪ್ಪದ ಅಭಿಷೇಕ ಆಯೋಜಿಸಲಾಗಿದೆ.
ಅದೇ ದಿನ ಶ್ರೀ ದೇವಿಯ ಸನ್ನಿಧಿಯಲ್ಲಿ ಸುಮಂಗಲಿಯರಿಂದ ಸಾಮೂಹಿಕ ಸಹಸ್ರ ಕುಂಕುಮಾರ್ಚನೆ ನಡೆಯಲಿದೆ. ಬೆಳಿಗ್ಗೆ 9ರಿಂದ 10.15ರವರೆಗೆ ಹಾಗೂ ನಂತರದ ಅವಧಿಗಳಲ್ಲಿ ಒಟ್ಟು ಮೂರು ಹಂತಗಳಲ್ಲಿ ಅರ್ಚನೆ ನಡೆಸಲಾಗುವುದು.
ಇನ್ನು ಸೆಪ್ಟೆಂಬರ್ 6, ಭಾನುವಾರ ಶ್ರಾವಣ ಕೃಷ್ಣ ದಶಮಿಯಂದು ಶ್ರೀ ಮೈಲಾರೇಶ್ವರ ದೇವರ ಸನ್ನಿಧಿಯಲ್ಲಿ ಏಕಾದಶ ರುದ್ರಾಭಿಷೇಕ ಮತ್ತು ಲಕ್ಷ ಭಂಡಾರ ಅರ್ಚನೆ ನಡೆಯಲಿದೆ.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ವತಿಯಿಂದ ಮನವಿ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅರ್ಚಕರನ್ನು 9480354402 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.
ಹಲೋ ಶಿವಮೊಗ್ಗ — ಸ್ಥಳೀಯ ಧಾರ್ಮಿಕ ಹಾಗೂ ಪ್ರಮುಖ ಸುದ್ದಿಗಳಿಗಾಗಿ ನಮ್ಮ ಚಾನೆಲ್‌ನ್ನು Subscribe ಮಾಡಿ, Like ಮತ್ತು Share ಮಾಡಿ.

Leave a Comment