ಚಿತ್ರದುರ್ಗದಿಂದ ಇಆರ್‌ಎಸ್‌ಎಸ್‌–112ಕ್ಕೆ ಬಂದ ಒಂದು ತುರ್ತು ಕರೆ… ಏನು ಅಂತೀರಾ ನೋಡಿ

“ನನ್ನ ಹೆಂಡತಿ ಹೊಳೆಹೊನ್ನೂರಿನ ಕೂಡ್ಲಿ ಬಳಿ ತುಂಗಭದ್ರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ” ಎಂಬ ಮಾಹಿತಿ.
ಮಾಹಿತಿ ದೊರೆತ ತಕ್ಷಣ, ಇಆರ್‌ವಿ ಕರ್ತವ್ಯದಲ್ಲಿದ್ದ ಸಿಪಿಸಿ ಅಶೋಕ್ ಕುಮಾರ್ ಹಾಗೂ ಚಾಲಕ ಎಪಿಸಿ ಅಮರೇಶ್ ನಾಯ್ಕ್ ಅವರು ಯಾವುದೇ ಸಮಯ ವ್ಯರ್ಥ ಮಾಡದೆ ಕೂಡಲೇ ಸ್ಥಳಕ್ಕೆ ಧಾವಿಸಿದರು.
ನದಿಯ ಸಮೀಪ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯನ್ನು ಗುರುತಿಸಿದ ಪೊಲೀಸರು, ತಕ್ಷಣ ಕಾರ್ಯಪ್ರವೃತ್ತರಾಗಿ ಆಕೆಯ ಪ್ರಾಣವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತುರ್ತು ಸಂದರ್ಭದಲ್ಲಿ ಸಮಯ ಪ್ರಜ್ಞೆ ಮೆರೆದ ಇಆರ್‌ಎಸ್‌ಎಸ್‌ ಸಿಬ್ಬಂದಿಯ ಕರ್ತವ್ಯನಿಷ್ಠೆ ಹಾಗೂ ಮಾನವೀಯ ಕಾರ್ಯಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸಿದೆ.
ಒಂದು ಕ್ಷಣದ ಸಮಯ ಪ್ರಜ್ಞೆ… ಒಂದು ಜೀವವನ್ನು ಉಳಿಸಿದೆ!

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.