ಭದ್ರಾವತಿಯ ಮಾವಿನಕಟ್ಟೆ ಅರಣ್ಯ ವಲಯದ ಗುಡ್ಡದಲ್ಲಿ ಮಣ್ಣು ಲೂಟಿ ಪ್ರಕರಣ:ಇಬ್ಬರು ಅರಣ್ಯ ಅಧಿಕಾರಿಗಳಿಗೆ ಬೇರೆಡೆಗೆ ಗೇಟ್ ಪಾಸ್!!

ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಮಾವಿನ ಕಟ್ಟೆ ವಲಯ ಅರಣ್ಯ ಅಧಿಕಾರಿಗಳ ವ್ಯಾಪ್ತಿಯಲ್ಲಿ ಕಳೆದ 10-12 ದಿವಸಗಳಿಂದ ಆನವೇರಿ ಗ್ರಾಮದಲ್ಲಿರುವ ಅರಣ್ಯ ಗುಡ್ಡ ಅಕ್ರಮವಾಗಿ ಅಗೆದು ಸಾವಿರಾರು ಲೋಡ್ ಮಣ್ಣು ತೆಗೆದು ಟಿಪ್ಪರ್ ನಲ್ಲಿ ಮಣ್ಣನ್ನು ಅಕ್ರಮವಾಗಿ ರಾಜರೋಷವಾಗಿ ಸಾಗಿಸುವ ಮಾರಾಟ ಮಾಡುವ ಮಣ್ಣು ಲೂಟಿ ಮಾಡುವ ಜಾಲದ ಪ್ರಕರಣ  ಬೆಳಕಿಗೆ ಬಂದಿದ್ದು, ಈ ಪ್ರಕರಣದ ಸುದ್ದಿಯನ್ನು ಹಲೋ ಶಿವಮೊಗ್ಗ ದಿನಪತ್ರಿಕೆಯಲ್ಲಿ ಮುಖಪುಟದಲ್ಲಿ ಪ್ರಕಟಿಸಲಾಗಿತ್ತು. ಅರಣ್ಯ ಅಧಿಕಾರಿಗಳು ಶಾಮೀಲು ಆಗಿದ್ದಾರೆ ಎಂದು ಸಂಭಂದಿಸಿದ ಅರಣ್ಯ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು ಸೂಕ್ತವಾದ ಕ್ರಮ ಕೈಗೊಳ್ಳಲು ನಮ್ಮ ಪತ್ರಿಕೆವತಿಯಿಂದ ಆಗ್ರಹಿಸಲಾಗಿತ್ತು.

ಇದೀಗ ಭದ್ರಾವತಿ ತಾಲ್ಲೂಕಿನ ಮಾವಿನ ಕಟ್ಟೆ ವಲಯ ಅರಣ್ಯ ಅಧಿಕಾರಿಗಳಾದ ಉಷಾ RFO ರವರು ಈ ಬಗ್ಗೆ ಇಬ್ಬರು ಅಧಿಕಾರಿಗಳ ವಿರುದ್ದ ಕ್ರಮಜರುಗಿಸಿರುತ್ತಾರೆ. ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ತೋರಿದ ಹೊಳೆಹೊನ್ನೂರು ಉಪವಲಯ ಅರಣ್ಯ ಅಧಿಕಾರಿ ಮಹಮ್ಮದ್ ಸೈಫುಲ್ ರವರನ್ನು ಉಂಬ್ಳೆಬೈಲಿಗೆ ಮತ್ತು ಆನವೇರಿ ಗಸ್ತು ಪಾಲಕ ಶ್ರೀಕಾಂತ್ ಇವರನ್ನು ಲಕ್ಕವಳ್ಳಿಗೆ ಕೂಡಲೇ debtation ಆಧಾರದ ಮೇಲೆ ಬೇರೆಡೆಗೆ ವರ್ಗಾಯಿಸಿರುತ್ತಾರೆ. ಇದೀಗ ವಲಯ ಇಲಾಖಾ ಪ್ರಾಥಮಿಕವಾಗಿ ತನಿಖೆ ಸಹ ನಡೆಯುತ್ತಿದೆ FIR ಕೂಡ ದಾಖಲಾಗಿದೆ ಎಂದು ತಿಳಿದು ಬಂದಿದೆ.ಇದೀಗ ಸದ್ಯಕ್ಕೆ ಅರಣ್ಯದ ಗುಡ್ಡದಲ್ಲಿ ಮಣ್ಣು ಅಗೆಯುವ ಕಾರ್ಯ ನಿಂತಿದೆ ಎಂದು ತಿಳಿದು ಬಂದಿದೆ.
ಅರಣ್ಯದ ಗುಡ್ಡದ ಮಣ್ಣನ್ನು ಸುಮಾರು 10 ಲೋಡ್ ಮಣ್ಣು ತುಂಗಾನಗರದ ಬೈಪಾಸ್ ರಸ್ತೆಯಲ್ಲಿ ಇರುವ ಅರಣ್ಯದ ಅಧಿಕಾರಿಗಳ ಮನೆಗೆ ಸಹ ಸಾಗಿಸಲಾಗಿತ್ತು.ಈ ಪೋಟೋ ನೋಡಿದರೆ ಗೊತ್ತಾಗುತ್ತದೆ.

 ಅರಣ್ಯಗುಡ್ಡ ಅಗೆದು ಸಾವಿರಾರು ಲೋಡ್ ಮಣ್ಣನ್ನು ಪ್ರತಿನಿತ್ಯ ಟಿಪ್ಪರ್ನಲ್ಲಿ ಸಾಗಿಸುತ್ತಿದ್ದಾರೆ.ಇದಕ್ಕೆ ಪೂರಕವಾದ ಪೋಟೋ ವಿಡಿಯೋ ಗಳು ಹಲೋ ಶಿವಮೊಗ್ಗ ದಿನಪತ್ರಿಕೆ ಗೆ ಲಭ್ಯವಾಗಿತ್ತು .

ಅರಣ್ಯ ಗುಡ್ಡ ಅಗೆದು ಸಾವಿರಾರು ಲೋಡ್ ಮಣ್ಣು ಮಾರಾಟಮಾಡುವ ಸಾಗಾಟದ ಜಾಲದಲ್ಲಿ  ಗಜೇಂದ್ರ, ನಾಗಣ್ಣ,ಮಾಲತೇಶಗೌಡ ಮೂವರು ವ್ಯಕ್ತಿಗಳ ಹೆಸರು ತೇಲಾಡುತ್ತಿದೆ..  ಇದೀಗ ಸಾರ್ವಜನಿಕವಾಗಿ ಚರ್ಚಿತವಾಗುತ್ತಿದೆ. 

ಈ ನಿಟ್ಟಿನಲ್ಲಿ ಸಹ RFO ರವರು ತನಿಖೆ ಮಾಡಿ ಸದರಿ ವ್ಯಕ್ತಿಗಳು ಭಾಗಿಯಾಗಿದ್ದಲ್ಲಿ ಅವರ ವಿರುದ್ದ ಸಹ ಸೂಕ್ತವಾದ ಕ್ರಮಕೈಗೊಳ್ಳ ಬೇಕು. ಟಿಪ್ಪರ್ ಗಳನ್ನು ಸೀಜ್ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಈ ಬಗ್ಗೆ DCF, ಮತ್ತು ACF ರವರು ಸಹ ತನಿಖೆ ಮಾಡಿ ತಪ್ಪಿತಸ್ಥರೆಂದು ಕಂಡು ಬಂದ ಅರಣ್ಯಾಧಿಕಾರಿಗಳ ವಿರುದ್ದ ಕ್ರಮಜರುಗಿಸಬೇಕು‌ ಮತ್ತು  ರಾಜರೋಷವಾಗಿ ಮಣ್ಣನ್ನು ಅಗೆದು ಸಾಗಾಟ ಮಾಡಿ ಮಾರಾಟ ಮಾಡಿದ ವ್ಯಕ್ತಿಗಳ ವಿರುದ್ದ ಸಹ ಕ್ರಮ ಜರುಗಿಸಬೇಕು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.