ಭದ್ರಾವತಿ ತಾಲ್ಲೂಕಿನ ಮಾವಿನಕಟ್ಟೆ ವಲಯ ಅರಣ್ಯ ಅಧಿಕಾರಿ ವ್ಯಾಪ್ತಿಯಲ್ಲಿ ಅರಣ್ಯ ಗುಡ್ಡ ಅಗೆದು ಮಣ್ಣು ಲೂಟಿ! ಅರಣ್ಯ ಅಧಿಕಾರಿಗಳು ಶಾಮೀಲು...!!
ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಮಾವಿನ ಕಟ್ಟೆ ವಲಯ ಅರಣ್ಯ ಅಧಿಕಾರಿಗಳ ವ್ಯಾಪ್ತಿಯಲ್ಲಿ ಕಳೆದ 10 ದಿವಸಗಳಿಂದ ಆನವೇರಿ ಗ್ರಾಮದಲ್ಲಿರುವ ಅರಣ್ಯ ಗುಡ್ಡ ಅಗೆದು ಸಾವಿರಾರು ಲೋಡ್ ಮಣ್ಣು ತೆಗೆದು ಟಿಪ್ಪರ್ ನಲ್ಲಿ ಮಣ್ಣನ್ನು ಅಕ್ರಮವಾಗಿ ರಾಜರೋಷವಾಗಿ ಸಾಗಿಸುವ ಮಾರಾಟ ಮಾಡುವ ಮಣ್ಣು ಲೂಟಿ ಮಾಡುವ ಜಾಲದ ಪ್ರಕರಣವೊಂದು ಇಂದು ಬೆಳಕಿಗೆ ಬಂದಿದೆ.
ಅರಣ್ಯಗುಡ್ಡ ಅಗೆದು ಸಾವಿರಾರು ಲೋಡ್ ಮಣ್ಣನ್ನು ಪ್ರತಿನಿತ್ಯ ಟಿಪ್ಪರ್ನಲ್ಲಿ ಸಾಗಿಸುತ್ತಿದ್ದಾರೆ.ಇದಕ್ಕೆ ಪೂರಕವಾದ ಪೋಟೋ ವಿಡಿಯೋ ಗಳು ಹಲೋ ಶಿವಮೊಗ್ಗ ದಿನಪತ್ರಿಕೆ ಗೆ ಲಭ್ಯವಾಗಿದೆ. ಮಾವಿನಕಟ್ಟೆ ಅರಣ್ಯ ಇಲಾಖೆಯ ಸ್ಥಳೀಯ DRFO,ಗಾರ್ಡ್ಗಳಿಗೆ ಮತ್ತು ವಲಯ ಅರಣ್ಯ ಅಧಿಕಾರಿ ಉಷಾರವರಿಗೆ ಗಮನಕ್ಕೆ ಬಾರದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ನಮಗೆ ವ್ಯಾಟ್ಸಪ್ ಮೂಲಕ ದಿನಪತ್ರಿಕೆಗೆ ಬಂದಿರುವ ಪೋಟೋವನ್ನು ಮತ್ತು ವಿಡಿಯೋ ಗಮನಿಸಿದರೇ ಇದರಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ನೇರವಾಗಿ ಶಾಮೀಲು ಆಗಿದ್ದಾರೆಯೇ? ಎಂಬ ಅನುಮಾನ ಕಾಡುತ್ತಿದೆ.
ಅರಣ್ಯ ಇಲಾಖೆಗೆ ಸೇರಿದ ಗುಡ್ಡದ ಮಣ್ಣನ್ನು ಅಗೆದು ದೊಡ್ಡ ದೊಡ್ಡ ಟಿಪ್ಪರ್ ನಲ್ಲಿ ರಾಜಾರೋಷವಾಗಿ ಖಾಸಾಗಿ ಲೇಔಟ್ ಗಳಿಗೆ ಸಾಗಿಸುತ್ತಿರುವುದು ನೋಡಿದರೇ ಆಶ್ಚರ್ಯವಾಗುತ್ತದೆ ಇದರ ಹಿಂದೇ ಯಾರಿದ್ದಾರೆ....ಇದಕ್ಕೆ ಕುಮ್ಮಕ್ಕು ನೀಡಿದವರು ಯಾರು?ಇದರಿಂದ ಪ್ರತಿನಿತ್ಯ ಅರಣ್ಯ ಅಧಿಕಾರಿಗಳಿಗೆ ಲಕ್ಷಾಂತರ ರೂಪಾಯಿ ಹಣ ಸಂದಾಯವಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚಿತವಾಗುತ್ತಿರುವ ವಿಷಯವಾಗಿದೆ.
ಬಲ್ಲ ಮೂಲಗಳಿಂದ ಶಿವಮೊಗ್ಗದಲ್ಲಿ ತುಂಗಾ ನಗರ ಪೊಲೀಸ್ ಠಾಣೆಯ ಹತ್ತಿರ ಇರುವ DRFO ರವರ ಮನೆಗೆ ಸಹ 10 ಲೋಡ್ ಮಣ್ಣು ಈ ಗುಡ್ಡದಿಂದ ಟಿಪ್ಪರ್ನಲ್ಲಿ ಸಾಗಾಟವಾಗಿದೆ ಎಂಬ ಸುದ್ದಿ ಸಹ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.ಈ ಬಗ್ಗೆ ಸಹ ಸತ್ಯಾಸತ್ಯತೆ ಬಗ್ಗೆ ತನಿಖೆಯಾಗಬೇಕು.
ಭದ್ರಾವತಿ ತಾಲ್ಲೂಕಿನ ಮಾವಿನ ಕಟ್ಟೆ (RFO) ವಲಯ ಅರಣ್ಯ ಅಧಿಕಾರಿ ಉಷಾ ಇವರು ಅರಣ್ಯ ಇಲಾಖೆಗೆ ಸೇರಿ ಸುಮಾರು 10 ವರ್ಷಗಳು ಆಗಿದ್ದು, ಇದೀಗ ಭದ್ರಾವತಿಯ ಮಾವಿನಕಟ್ಟೆ ಅರಣ್ಯ ವಲಯಕ್ಕೆ ಬಂದು 1 ವರ್ಷ ಆಗಿದೆ ಎಂದು ತಿಳಿದು ಬಂದಿದೆ.ಇವರಿಗೆ ಈ ಮಾಹಿತಿ ಗೊತ್ತಿಲ್ಲ ಅನ್ನುತ್ತಿದ್ದಾರೆ. ಇದೀಗ ಆನವೇರಿ ಗ್ರಾಮದ ಅರಣ್ಯ ಗುಡ್ಡವನ್ನೆ ಅಗೆದು ಮಣ್ಣನ್ನು ಟಿಪ್ಪರ್ ನಲ್ಲಿ ಸಾಗಿಸುತ್ತಿರುವ ವ್ಯಕ್ತಿಗಳು ಯಾರು? ಇದರ ಹಿಂದೇ ಯಾರಿದ್ದಾರೆ? ಹೊಣೆ ಹೊರುವವರು ಯಾರು...?
ಇದಕ್ಕೆ ಅರಣ್ಯ ಇಲಾಖೆಯ ವರಿಷ್ಟರು ಮತ್ತು ಸಚಿವರಾದ ಈಶ್ವರ ಖಂಡ್ರೆಯವರು ಉತ್ತರಿಸಬೇಕು. ಗುಡ್ಡದ ಮಣ್ಣು ಅಗೆದು ಟಿಪ್ಪರ್ ನಲ್ಲಿ ರಾಜಾರೋಷವಾ್ಉ ಹಗಲಿರುಳು ಸಾಗಿಸುತ್ತಿರುವ ವ್ಯಕ್ತಿಗಳ ಮೇಲೆ, ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ ಕಣ್ಣಿದ್ದರೂ ಕುರುಡರಂತೆ ವರ್ತಿಸಿದ ಅರಣ್ಯ ಅಧಿಕಾರಿಗಳ ಮೇಲೆ ಸೂಕ್ತವಾದ ಕ್ರಮ ಜರುಗಿಸುತ್ತಾರೆಯೇ? ಎಂಬುದನ್ನು ಕಾದು ನೋಡಬೇಕಿದೆ.
ವಲಯ ಅರಣ್ಯ ಅಧಿಕಾರಿ ಉಷಾರವರ ಪ್ರತಿಕ್ರಿಯೆ ನೋಡಿ...
ಭದ್ರಾವತಿ ತಾಲ್ಲೂಕಿನ ಮಾವಿನಕಟ್ಟೆ ವಲಯದಲ್ಲಿ ಆನವೇರಿ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಗುಡ್ಡ ಅಗೆದು ಮಣ್ಣು ಸಾಗಿಸುತ್ತಿರುವ ಪ್ರಕರಣ ನನಗೆ ಇದೀಗ ಗಮನಕ್ಕೆ ಬಂದಿದೆ. ನಾನು ಇಂದು ಸ್ಪಾಟ್ ವೀಸಿಟ್ ಮಾಡಿದ್ದೆನೆ . ನಾನು ಪ್ರಾಮಾಣಿಕ ಅಧಿಕಾರಿಯಾಗಿದ್ದೆನೆ. ನಾನು ಮಾಹಿತಿಯನ್ನು ತಿಳಿದು ಹೋದಾಗ ಮಣ್ಣು ಸಾಗಿಸುವ ಯಾವುದೇ ಟಿಪ್ಪರ್ ಸಿಗಲಿಲ್ಲ...ಸಿಕ್ಕಿದ್ದರೇ ಸೀಜ್ ಮಾಡುತ್ತಿದ್ದೆ ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಮೇಲೆ ಮತ್ತು ಮಣ್ಣು ಸಾಗಿಸುತ್ತಿರುವ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳುತ್ತೆನೆ. ಈ ಸಂಬಂಧ FIR ಆಗಿದೆ ಎಂದು ನಮ್ಮ ಹಲೋ ಶಿವಮೊಗ್ಗ ದಿನಪತ್ರಿಕೆ ಗೆ ಮಾಹಿತಿಯನ್ನು ನೀಡಿದ್ದಾರೆ. ಇದೀಗ ಸಂಬಂಧಿಸಿದ ವ್ಯಕ್ತಿಗಳು ಮತ್ತು ನಿರ್ಲಕ್ಷ್ಯ ವಹಿಸಿದ ಅರಣ್ಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸುತ್ತಾರೆ.
DCF ರವಿಂದ್ರಕುಮಾರ್ ರವರು ಅಕ್ರಮವಾಗಿ ಮಣ್ಣು ಲೂಟಿ ಮಾಡುತ್ತಿರುವ ಬಗ್ಗೆ ಗಮನಹರಿಸಿ ಸೂಕ್ತವಾದ ಕಾನೂನು ಕ್ರಮಕ್ಕೆ ಮುಂದಾಗುವರೇ ಎಂಬುದನ್ನು ಕಾದುನೋಡಬೇಕಿದೆ.
ಒಟ್ಟಿನಲ್ಲಿ ಮಣ್ಣು ಸಾಗಿಸಿ ಮಾರಾಟ ಮಾಡು ಜಾಲದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳೇ ನೇರವಾಗಿ ಶಾಮೀಲಾಗಿದ್ದಾರೆ. ಪ್ರತಿದಿನ ಲಕ್ಷಾಂತರ ರೂಪಾಯಿ ಹಣ ಸಂಬಂಧಿಸಿದ ಅರಣ್ಯದ ಅಧಿಕಾರಿಗಳ ಜೇಬು ಸೇರುತ್ತಿದೆ ಎಂಬ ಗಂಭೀರ ಆರೋಪ ಸಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಈ ಬಗ್ಗೆ ಅರಣ್ಯ ಇಲಾಖೆಯ ವರಿಷ್ಟರು ಮತ್ತು ಸಚಿವ ಈಶ್ವರ ಖಂಡ್ರೆಯವರು ಗಮನಹರಿಸಿ ತಪ್ಪು ಮಾಡಿದ ಅಧಿಕಾರಿಗಳ ವಿರುದ್ದ ಸೂಕ್ತವಾದ ಕ್ರಮಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.

Leave a Comment