ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಪ್ರಥಮ ಸ್ಥಾನ, ಉಡುಪಿ ಎರಡನೇ ಸ್ಥಾನ,ಶಿವಮೊಗ್ಗ ಜಿಲ್ಲೆ 9 ನೇ ಸ್ಥಾನ ನೋಡಿ...
ಬೆಂಗಳೂರು:ಶಿವಮೊಗ್ಗ :ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಕರ್ನಾಟಕ ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆ ಫಲಿತಾಂಶ 2026 ಇಂದು ಗುರುವಾರ (ಏ.23) ಬಿಡುಗಡೆ ಆಗಿದೆ.
SSLC ಫಲಿತಾಂಶದ ಪ್ರಮುಖ ಅಂಶಗಳು
* ರಾಜ್ಯದಲ್ಲಿ ಮೂರು ವಿದ್ಯಾರ್ಥಿಗಳು 625 ಕ್ಕೆ 625 ಪೂರ್ಣ ಅಂಕಗಳನ್ನು ಪಡೆದಿದ್ದಾರೆ.
* ಎಸ್‌ಎಸ್‌ಎಲ್‌ಸಿ ಪರೀಕ್ಷೆ 7,70,209 ಲಕ್ಷ ಮಕ್ಕಳಲ್ಲಿ 7,26,794 ಮಕ್ಕಳು ತೇರ್ಗಡೆಯಾಗಿದ್ದಾರೆ.
* ಈ ಬಾರಿ ಬರೊಬ್ಬರಿ ಶೇಕಡಾ 94.10 ರಷ್ಟು ಮಕ್ಕಳು ತೇರ್ಗಡೆ ಆಗಿದ್ದಾರೆ.
* ದಕ್ಷಿಣ ಕನ್ನಡ ಜಿಲ್ಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಪ್ರಥಮ, ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
* ಉಡುಪಿ ಜಿಲ್ಲೆಯು ಫಲಿತಾಂಶದಲ್ಲಿ ಎರಡನೇ ಸ್ಥಾನದಲ್ಲಿದೆ.
* ವಿಜಯಪುರದ ಸೌಜನ್ಯಾ, ಬೆಂಗಳೂರಿನ ಧನುಷ್, ರಾಯಚೂರಿನ ಸುಖದೇವ್, ದಾವಣಗೆರೆಯ ಭರತ್, ಚಿಕ್ಕಮಗಳೂರಿನ ಬೃಂದಾ, ಚಿಕ್ಕೋಡಿಯ ಪ್ರಾರ್ಥನಾ, ಉಡಪಿಯ ಪ್ರಥಮ್ ಪೂಜಾರಿ ಇವರುಗಳು ಎಸ್‌ಎಸ್‌ಎಲ್‌ಸಿ ಟಾಪಾರ್‍ಗಳಾಗಿ ಹೊರ ಹೊಮ್ಮಿದ್ದಾರೆ.
ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ:
ಎಂದಿನಂತೆ ದಕ್ಷಿಣ ಕನ್ನಡ( 98.40% ) ಪ್ರಥಮ ಸ್ಥಾನ ಪಡೆದರೆ, ಉಡುಪಿ( 98% )ಪಡೆದು ಎರಡನೇ ಸ್ಥಾನ ಪಡೆದುಕೊಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 96.56% ರಷ್ಡು ಫಲಿತಾಂಶದೊಂದಿಗೆ ಪಡೆದು 9 ನೇ ಸ್ಥಾನದಲ್ಲಿದೆ. ಕಳೆದ ವರ್ಷ 88.66% ರಷ್ಟು ಫಲಿತಾಂಶ ಬಂದಿತ್ತು.
ಜಿಲ್ಲೆಯಲ್ಲಿ 21,692 ಜನ ಮಕ್ಕಳು ಪರೀಕ್ಷೆ ಬರೆದಿದ್ದರೆ, ಇದರಲ್ಲಿ 20945 ಮಕ್ಕಳು ಪಾಸಾಗಿದ್ದಾರೆ. ಕಳೆದ ವರ್ಷ ಶಿವಮೊಗ್ಗ 88.66% ಜನ ಮಕ್ಕಳು ಪರೀಕ್ಷೆ ಪಾಸಾಗಿದ್ದರು. ಈ ವರ್ಷ 8% ಹೆಚ್ಚು ಮಕ್ಕಳು ಪಾಸಾಗಿ ದಾಖಲೆ ಬರೆದಿದ್ದಾರೆ.
ಒಟ್ಟು ರಾಜ್ಯದಲ್ಲಿ 770209 ಜನ ಮಕ್ಕಳು ಪರೀಕ್ಷೆ ಬರೆದಿದ್ದರೆ 7,24,796 ಮಕ್ಕಳು ಪಾಸಾಗಿ ರಾಜ್ಯದಲ್ಲಿ ಶೇ.94.1 ಜನ ಮಕ್ಕಳು ಪಾಸಾಗಿದ್ದಾರೆ.
ಅದರಂತೆ ಶಿವಮೊಗ್ಗದಲ್ಲಿ ತೀರ್ಥಹಳ್ಳಿಯ ವಾಗ್ದೇವಿ ಶಾಲೆಯ ಅನಘ 624/625 ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಪ್ರಿಯ ದರ್ಶಿನಿ ಶಾಲೆಯ ಆಂಗ್ಲಭಾಷೆಯ ವಿದ್ಯಾರ್ಥಿನಿ ಕೃತಿ 623/625 ಅಂಕ ತೆಗೆದು ಮೂರನೇ ಸ್ಥಾನ ಪಡೆದಿದ್ದಾರೆ.
ರಾಜ್ಯದಲ್ಲಿ 625/625 ಅಂಕ ಪಡೆದವರು 7 ಜನ ಮಕ್ಕಳು ಪಡೆದರೆ ಕಳೆದ ವರ್ಷ ಈಅಂಕಪಡೆದವರು 22 ಜನ ಮಕ್ಕಳು ಪಡೆದಿದ್ದರು. 624/625 ಅಂಕ ಪಡೆದವರು ಈ ಬಾರಿ 21 ಜನ ಮಕ್ಕಳು ಪಡೆದರೆ ಕಳೆದ ವರ್ಷ 65 ಜನ ಮಕ್ಕಳು ಈ ಅಂಕದಲ್ಲಿ ತೇರ್ಗಡೆಯಾಗಿದ್ದರು. 623/625 ಅಂಕದಲ್ಲಿ ಈ ವರ್ಷ 28 ಜನ ಮಕ್ಕಳು ಪಾಸಾದರೆ ಕಳೆದ ವರ್ಷ 108 ಜನ ಮಕ್ಕಳು ಪಾಸಾಗಿದ್ದರು.
74 ಜನ ಮಕ್ಕಳು 622 ಅಂಕ ಪಡೆದರೆ, 98 ಜನ ಮಕ್ಕಳು 621 ಅಂಕ ಪಡೆದಿದ್ದಾರೆ. 620 ಅಂಕವನ್ನ 150 ಜನ ಮಕ್ಕಳು ಅಂಕ ಪಡೆದಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕು ಕೋಣಂದೂರಿನ ಮೇಲಿನ ಕಡಗೋಡುವಿನ ಮಂಗಳ ಮತ್ತು ಶಿವಕುಮಾರ ದಂಪತಿಗಳ ಪುತ್ರಿ ಅನಘಾ ಕೆ.ಎಸ್. ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ,
ವಾಗ್ಧೇವಿ ಸಂಸ್ಥೆಯ ವಿದ್ಯಾರ್ಥಿನಿ ಅನಘಾ 625/624 ಅಂಕ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಶಿವಮೊಗ್ಗ ವಿಕಾಸ ವಿದ್ಯಾಸಂಸ್ಥೆಯ ಚಿತ್ಸುಖಿ ಆರ್. ನಾಡಿಗ್ 625ಕ್ಕೆ 621 ಅಂಕ ಪಡೆದು ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಶಾಲೆಯ 13 ಮಕ್ಕಳು 600ಕ್ಕಿಂತ ಹೆಚ್ಚು ಅಂಕ ಪಡೆದಿದ್ದು, 76 ಮಂದಿ ಡಿಸ್ಟಿಂಕ್ಷನ್‌ನಲ್ಲಿ 51 ಮಂದಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು ಶೇ.100ರಷ್ಟು ಫಲಿತಾಂಶ ಬಂದಿದೆ.
ಶಿವಮೊಗ್ಗ ನಗರದ ಕಲ್ಲಹಳ್ಳಿಯಲ್ಲಿರುವ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100ಕ್ಕೆ 100ರಷ್ಟು ಫಲಿತಾಂಶ ಬಂದಿದೆಯಲ್ಲದೆ ಈ ಶಾಲೆಯ ವಿದ್ಯಾರ್ಥಿನಿ ಕೃತಿ ಪಿ.ಎಸ್. 625ಕ್ಕೆ 623 ಅಂಕಗಳನ್ನು ಪಡೆದು ಶಿವಮೊಗ್ಗ ನಗರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಪರೀಕ್ಷೆಗೆ ಈ ಶಾಲೆಯಲ್ಲಿ 97 ವಿದ್ಯಾರ್ಥಿಗಳು ಕುಳಿತುಕೊಂಡಿದ್ದು, ಇವರಲ್ಲಿ 72 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿ ಪಾಸಾಗಿದ್ದಾರೆ. ಜಿಲ್ಲೆಗೆ ಮೊದಲ ಸ್ಥಾನ ತಂದುಕೊಟ್ಟ ಕೃತಿ ಇಂಗ್ಲೀಷ್, ಹಿಂದಿ, ಗಣಿತ ಮತ್ತು ಸಮಾಜ ವಿಜ್ಞಾನ ಪರೀಕ್ಷೆಗಳಲ್ಲಿ 100ಕ್ಕೆ 100ರಷ್ಟು ಅಂಕ ಪಡೆದಿದ್ದು ಅಲ್ಲದೆ, ಕನ್ನಡದಲ್ಲಿಯೂ ಸಹ 125ಕ್ಕೆ 125 ಅಂಕ ಪಡೆದಿದ್ದಾಳೆ. ವಿಜ್ಞಾನ ವಿಷಯದಲ್ಲಿ ಮಾತ್ರ 98 ಅಂಕ ಪಡೆದಿದ್ದು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು.
ಈ ಬಾರಿ ಶೇಕಡಾ ಶೇ 90ರಷ್ಟು ಫಲಿತಾಂಶ ದಾಖಲಾಗಿದೆ. ಹಿಂದೆಂದು ಕೂಡ ಈ ರೀತಿಯ ಫಲಿತಾಂಶ ಬಂದಿರಲಿಲ್ಲ ಎಂಬುದು ಗಮನಿಸಬೇಕಾದ ವಿಷಯ.
ಈ ಫಲಿತಾಂಶವನ್ನು ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಅಧಿಕೃತ ಜಾಲತಾಣದ ಲಿಂಕ್ www.karresults.nic.in ಗೆ ಭೇಟಿ ನೀಡಿ ವೀಕ್ಷಿಸಬಹುದು. ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಬಹುದೆಂದು ಸಚಿವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಚಿವರು ನೀಡಿದ ಮಾಹಿತಿಯ ಪ್ರಮುಖ ಅಂಶಗಳು, ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
SSLC ಪರೀಕ್ಷೆ-2: ಫೇಲಾದವರಿಗೆ ಇನ್ನೊಂದು ಅವಕಾಶ;
ವೇಳಾಪಟ್ಟಿ ಮತ್ತು ಶುಲ್ಕದ ವಿವರ ಇಲ್ಲಿದೆ
SSLC ಪರೀಕ್ಷೆ-2: ಫೇಲಾದವರಿಗೆ ಇನ್ನೊಂದು ಅವಕಾಶ; ವೇಳಾಪಟ್ಟಿ ಮತ್ತು ಶುಲ್ಕದ ವಿವರ ಇಲ್ಲಿದೆ
* ನಗರ ಫಲಿತಾಂಶದಲ್ಲಿ ಶೇ. 92ರಷ್ಟು ಫಲಿತಾಂಶ ಬಂದಿದೆ.
ಮೊಬೈಲ್ ಅಪ್ಲಿಕೇಷ್‌ನಗಳಲ್ಲು ಫಲಿತಾಂಶ ಲಭ್ಯ
10ನೇ ತರಗತಿ ಫಲಿತಾಂಶವನ್ನು ಮಂಡಳಿ ಜಾಲತಾಣದಲ್ಲಿ ಮಾತ್ರವಲ್ಲದೇ, ಡಿಜಿಲಾಕರ್ ಮತ್ತು ಕರ್ನಾಟಕ ಒನ್ ಮೊಬೈಲ್ ಅಪ್ಲಿಕೇಷನ್‌ಗಳಲ್ಲೂ ಲಭ್ಯವಿದೆ. ವಿದ್ಯಾರ್ಥಿಗಳು ಪರೀಕ್ಷಾ ನೋಂದಣಿ ಸಂಖ್ಯೆ, ಅಗತ್ಯ ವಿವರ ಹಾಕಿ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸುಮಾರು 9,02,889 ಮಂದಿ ಪರೀಕ್ಷೆಗೆ ಹಾಜರಾಗಲು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ ಒಟ್ಟು ಸುಮಾರು 2000 ಮಂದಿ ಗೈರು ಹಾಜರಾಗಿದ್ದಾರೆ. ಫಲಿತಾಂಶ. ಅದರಲ್ಲಿ ಒಟ್ಟು 7.20 ಲಕ್ಷ ಮಂದಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

Leave a Comment