BTV ವರಧಿಗಾರ ಅನಿಲ್ ಕುಮಾರ್ ನಾಯ್ಕ ಇನ್ನಿಲ್ಲ: ಎರಡು ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಸಾವು
ಶಿವಮೊಗ್ಗ:BTV ಅನಿಲ್ ಕುಮಾರ್ ನಾಯ್ಕ್ ಅವರು ಖಾಸಗಿ ಸುದ್ದಿ ಚಾನಲ್‌ನ ಪತ್ರಕರ್ತರಾಗಿದ್ದು, ಇಂದು (ಮಾರ್ಚ್ 8, 2026) ಶಿವಮೊಗ್ಗದಲ್ಲಿ ಬೈಕ್ ಅಪಘಾತದಲ್ಲಿ ಮರಣಹೊಂದಿದ್ದಾರೆ.
ಘಟನೆ ವಿವರಗಳು:
ಶಿವಮೊಗ್ಗ ನಗರದ ಶುಭಮಂಗಳ ಆಟೋ ಕಾಂಪ್ಲೆಕ್ಸ್ ಬಳಿ ಭಾನುವಾರ ರಾತ್ರಿ ಬೈಕ್ ಮತ್ತು ಸ್ಕೂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತು.
44 ವರ್ಷ ವಯಸ್ಸಿನ ಅನಿಲ್ ಕುಮಾರ್ ನಾಯ್ಕ್ ತೀವ್ರ ಗಾಯಗಳಿಂದ ಮ್ಯಾಕ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಒಯ್ಯಲ್ಪಟ್ಟರೂ ಮುಂಜಾನೆ ಸಾವನ್ನಪ್ಪಿದರು.
ಹಿನ್ನೆಲೆ:
ಅವರು ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಪತ್ನಿ, ಮೂರು ಮಕ್ಕಳು ಮತ್ತು ಅಪಾರ ಮಿತ್ರರನ್ನು ಬಿಟ್ಟುಹೋಗಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಶಿವಮೊಗ್ಗ ಘಟಕದ ಅದ್ಯಕ್ಷರು ಮತ್ತು ಪಧಾದಿಕಾರಿಗಳು ಕಂಬನಿ ಮಿಡಿದಿದ್ದಾರೆ. ಸಂತಾಪ ಸೂಚಿಸಿದ್ದಾರೆ.
ಮೃತ ಪತ್ರಕರ್ತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ...ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.
ಹಲವು ಪತ್ರಕರ್ತರು, ಸಂಘಟನೆಗಳು ಮತ್ತು ಜನ ಪ್ರತಿನಿಧಿಗಳು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ

Leave a Comment