ಮದುವೆಯ ನಡೆಯುವಾಗ ಶಾಧಿಮಹಲ್ ಗಳಲ್ಲಿ ಕಳ್ಳತನ ಮಾಡುತ್ತಿದ್ದ ಚಾಲಾಕಿ ಕಳ್ಳಿ ಬಂಧನ
*ಶಿವಮೊಗ್ಗ ತುಂಗಾನಗರ* ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ *ಶಾದಿಮಹಲ್* ಗಳಲ್ಲಿ *ಮದುವೆಯ ಸಮಯದಲ್ಲಿ* ನಡೆಯುತ್ತಿದ್ದ ಕಳ್ಳತನ ಪ್ರಕರಣಗಳ ಪತ್ತೆಗಾಗಿ *ಮಾನ್ಯ ಎಸ್.ಪಿ ಸಾಹೇಬರರಾದ ಶ್ರೀ ನಿಖಿಲ್ ಬಿ. ಐಪಿಎಸ್,* ಮಾನ್ಯ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಾದ *ಶ್ರೀ ಎ.ಜಿ ಕಾರಿಯಪ್ಪ* ಹಾಗೂ *ರಮೇಶ್ ಕುಮಾರ್ ಎಸ್* ಹಾಗೂ ಉಪವಿಭಾಗದ ಡಿ.ವೈ.ಎಸ್.ಪಿ ಸಾಹೇಬರಾದ *ಶ್ರೀ ಬಾಬು ಅಂಜನಪ್ಪ* ರವರ ಮಾರ್ಗದರ್ಶನದಲ್ಲಿ ತುಂಗಾನಗರ ಇನ್ಸ್ ಪೆಕ್ಟರ್ *ಶ್ರೀ ಕೆ.ಟಿ ಗುರುರಾಜ್, ಶ್ರೀ ಗಾದಿಲಿಂಗಪ್ಪ ಗೌಡರ್* ಪಿಎಸ್ಐ ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಹೆಚ್ಸಿ ಕಿರಣ್ ಮೋರೆ, ಅರುಣ್ ಕುಮಾರ್, ಶ್ರೀಮತಿ ಶೋಭಾರಾಣಿ ಹಾಗೂ ಪಿಸಿಗಳಾದ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಹರೀಶ್, ರಂಗನಾಥ್, ತಮ್ಮಣ್ಣ ಜಂಬಗಿ, ರವರನ್ನೊಳಗೊಂಡ ತಂಡವನ್ನು ರಚಿಸಿರುತ್ತಾರೆ.
ಈ ತಂಡ ಶಿವಮೊಗ್ಗ, ತುಂಗಾನರ ಪೊಲೀಸ್ ಠಾಣಾ ವ್ಯಾಪ್ತಿಯ ಶಾದಿಮಹಲ್ ಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿತೆಯಾದ *ಶ್ರೀಮತಿ ರುಕ್ಸಾರ್ ಫಿರ್ದೋಸ್ ಕೊಂ ಮೊಹಮದ್ ನಯಾಜ್ 30 ವರ್ಷ ವಾಸ: ಸೂಳೆಬೈಲ್ ಶಿವಮೊಗ್ಗ ಈಕೆಯನ್ನು ದಿನಾಂಕ:07/03/2026 ರಂದು ವಶಕ್ಕೆ ಪಡೆದು ಆರೋಪಿತೆಯಿಂದ ತುಂಗಾನಗರ ಪೊಲೀಸ್ ಠಾಣೆಯ 04 ಪ್ರಕರಣಗಳಲ್ಲಿ ಒಟ್ಟು 18,00,000/- ರೂ ಅಂದಾಜು ಮೌಲ್ಯದ 120 ಗ್ರಾಂ ಬಂಗಾರದ ಆಭರಣಗಳನ್ನು ವಶ ಪಡಿಸಿಕೊಂಡಿರುತ್ತಾರೆ.*
ತಂಡದ ಕೆಲಸದ ಬಗ್ಗೆ ಮೇಲಾಧಿಕಾರಿಗಳು ಶಾಘಿಸಿರುತ್ತಾರೆ.

Leave a Comment