ಶಿವಮೊಗ್ಗದ ದುರ್ಗಿಗುಡಿ ಶ್ರೀ ಶನೈಶ್ವರ ದೇವಾಲಯದಲ್ಲಿ 36 ನೇ ವಾರ್ಷಿಕೋತ್ಸವದ ಅಂಗವಾಗಿ ಶನೈಶ್ವರ ಸ್ವಾಮಿಗೆ 108 ಕಲಶದ ಕುಂಭಾಭಿಷೇಕ-ಅನ್ನಸಂತರ್ಪಣೆ
ಶಿವಮೊಗ್ಗ: ಶ್ರೀ ಶನೈಶ್ವರ ದೇವಾಲಯ ಸಮಿತಿ ಟ್ರಸ್ಟ್ (ರಿ) ದುರ್ಗಿಗುಡಿ,ಶಿವಮೊಗ್ಗ ವತಿಯಿಂದ ಇಂದು ದಿನಾಂಕ 11-3-2026 ರಂದು 12 ಗಂಟೆ ನಂತರ ಮಧ್ಯಾಹ್ನ 36 ನೇ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯದಲ್ಲಿ ಪ್ರತಿಷ್ಟಾಪಿಸಿರುವ ಶ್ರೀ ಶನೈಶ್ವರ ಸ್ವಾಮಿಗೆ ಮತ್ತು ವಿಘ್ನಶ್ವರ,ಸಿತಾರಾಮಂಜನೇಯ ಲಕ್ಷ್ಮಣ ದೇವರುಗಳಿಗೆ 108 ಕಲಶದ ಕುಂಭಾಭಿಷೇಕ ಏರ್ಪಡಿಸಲಾಗಿದೆ. ವಿಶೇಷ ಪೂಜೆ..
ಕುಂಭಾಭಿಷೇಕ ನಂತರ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿಯ ಅಧ್ಯಕ್ಷರು ಮತ್ತು ಪಧಾದಿಕಾರಿಗಳು ವಿನಂತಿಸಿದ್ದಾರೆ.
ಶಿವಮೊಗ್ಗ ದುರ್ಗಿಗುಡಿಯ ಶನೈಶ್ವರ ದೇವಸ್ಥಾನದಲ್ಲಿ ಶನಿವಾರಗಳಂದು ವಿಶೇಷ ಪೂಜೆಗಳು, ಎಳ್ಳು ಎಣ್ಣೆ ಅಭಿಷೇಕ ಮತ್ತು ದೀಪಾರಾಧನೆ ನಡೆಯುತ್ತವೆ. ಪ್ರತಿನಿತ್ಯ ಪೂಜೆಗಳ ಜೊತೆಗೆ ವಾರ್ಷಿಕೋತ್ಸವದಲ್ಲಿ ಕುಂಭಾಭಿಷೇಕ ಮತ್ತು ಮಹಾಮಂಗಳಾರತಿ ನೆರವೇರುತ್ತವೆ.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಮತ್ತು ಅವರ ಧರ್ಮಪತ್ಮಿ ಹಾಗೂ ಅವರ ಮಗ ಕಾಂತೇಶ್ ಇಂದು ನಡೆದ ವಿಶೇಷ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು, ಅನ್ನಸಂತರ್ಪಣೆ ಕಾರ್ಯಕ್ರಮದ ವೇದಿಕೆ ಯಲ್ಲಿ ಉಪಸ್ಥಿತರಿದ್ದರು.
ದೈನಂದಿನ ಪೂಜೆಗಳು
ಶನೈಶ್ವರ ಸ್ವಾಮಿಗೆ ಎಳ್ಳು ಎಣ್ಣೆ ಅಭಿಷೇಕ, ತೈಲ ದೀಪಗಳು ಮತ್ತು ಕಪ್ಪು ಎಳ್ಳು ನೈವೇದ್ಯ.ಬೆಳಿಗ್ಗೆ ಸ್ನಾನ ಮಾಡಿ ಕಪ್ಪು/ನೀಲಿ ವಸ್ತ್ರ ಧರಿಸಿ ಪೂಜೆ; ದೇವರ ಕಣ್ಣು ನೇರ ನೋಡದೆ ಪ್ರಾರ್ಥಿಸಿ.ಮಂತ್ರ ಜಪ: "ಓಂ ಶನೈಶ್ಚರಾಯ ನಮಃ" ಅಥವಾ ಶನಿ ಸ್ತೋತ್ರಗಳು.
ವಿಶೇಷ ಕಾರ್ಯಕ್ರಮಗಳು:
ವಾರ್ಷಿಕೋತ್ಸವದಲ್ಲಿ ಇಂದು 108 ಕಲಶ ಕುಂಭಾಭಿಷೇಕ ಬೆಳಗ್ಗೆ 8 ರಿಂದ ಪೂಜೆಗಳು, 12 ಗಂಟೆಗೆ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯುತ್ತವೆ. ಶನಿ ದೋಷ ನಿವಾರಣೆಗೆ ಶನಿವಾರ ವ್ರತ, ದಾನಗಳು ಮುಖ್ಯ.

Leave a Comment