ನಿವೃತ್ತ ಪಿಎಸ್ಐ ಶಿವಣ್ಣಗೌಡ ಇವರ ಪತ್ನಿ ಕಮಲಮ್ಮ ನಿಧನ

 ಶಿವಮೊಗ್ಗ:  ನಿವೃತ್ತ ಪಿಎಸ್ಐ  ಮತ್ತು ಜಿಲ್ಲಾ ನಿವೃತ್ತ ಪೊಲೀಸ್ ನೌಕರರ ಸಂಘದ ನಿರ್ಧೆಶಕರಾದ ಶಿವಣ್ಣಗೌಡ ಇವರ ಪತ್ನಿ ಕಮಲಮ್ಮ 60 ವರ್ಷ ಇವರ ದಿಢೀರ್ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಖಾಸಾಗಿ ಆಸ್ಪತ್ರೆ ಗೆ ಇಂದು ಬೆಳಿಗ್ಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಇದೀಗ ಸ್ವಲ್ಪ ಹೊತ್ತಿನಲ್ಲಿ ನಿಧನರಾದ ರೆಂದು ತಿಳಿಸಲು ವಿಷಾದಿಸುತ್ತೆವೆ. 
ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಪಧಾದಿಕಾರಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

ಮೃತರ ಪಾರ್ಥಿವ ಶರೀರವನ್ನು ಗಾಂಧೀಬಜಾರನಲ್ಲಿರುವ ಕುಚಲಕ್ಕಿ ಕೇರಿ 1 ನೇ ಕ್ರಾಸ್, ಸ್ವಗೃಹದಲ್ಲಿ ಇರಿಸಲಾಗಿದೆ. ಮದ್ಯಾಹ್ನದ 3 ಗಂಟೆಯವರೆಗೆ ಅಂತಿಮ ದರ್ಶನಕ್ಕಾಗಿ ಸ್ವ ಗೃಹ ದಲ್ಲಿರಿಸಲಾಗಿದ್ದು,ನಂತರ ಭದ್ರಾವತಿ ಮಾವಿನ ಕರೆ ಕೊಂಡೊಯ್ದು, ಸಂಜೆ 7 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಮೃತರು ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ.
ಮೃತರ ಆತ್ಮಕ್ಕೆ ಚಿರ ಶಾಂತಿ ಸಿಗಲೀ ಮತ್ತು ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲೀ ಎಂದು ಭಗವಂತ ಪ್ರಾರ್ಥಿಸುವ.....

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.