ಬ್ಯಾರಿ ಮಾಲ್ ನಲ್ಲಿ ಮಕ್ಕಳ ಇಂಡೋರ್ ಗೇಮ್ -ಮನರಂಜನೆ
ಶಿವಮೊಗ್ಗ: ಶಿವಪ್ಪ ನಾಯಕ ಬ್ಯಾರಿ ಮಾಲ್ ನಲ್ಲಿ ಮಕ್ಕಳ ಇಂಡೋರ್ ಗೇಮ್ ಗಳ ಲೋಕವನ್ನೇ ಧರೆಗಿಳಿಸಲಾಗಿದೆ. ಮಕ್ಕಳಿಗಾಗಿ ಪಕ್ಕ ಮನರಂಜನಾವೇ ಈ ಬಿಫನ್ ಆಗಿದೆ.
ಬಿಫನ್ ನಲ್ಲಿ 50 ಕ್ಕೂ ಹೆಚ್ಚೂ ಆಟಗಳನ್ನ ಇಡಲಾಗಿದೆ. 3 ವರ್ಷದ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಈ ಬಿಫನ್ ಎಂಬ ಆಟದ ಲೋಕ ಮಕ್ಕಳನ್ನ ಕೈಬೀಸಿ ಕರೆಯುತ್ತಿದೆ. ಇಂಡೋರ್ ಕ್ರಿಕೆಟ್, ಬೌಲಿಂಗ್,ಹಾಕಿ ಡ್ಯಾಶಿಂಗ್ ಕಾರ್, ಕಿಡ್ಡಿ ರೈಡ್ಸ್
ಸಾಫ್ಟ್ ಪ್ಲೇ ಏರಿಯಾ, ಕಿಡ್ಡಿ ಟ್ರೈನ್ ಹೀಗೆ ಆಟಗಳ ಸರಮಾಲೆಗಳನ್ನ ಮಕ್ಕಳು ಆಡಬಹುದಾಗಿದೆ. ಆಟದ ಮೇಲೆ ದರವನ್ನ ನಿಗದಿ ಮಾಡಲಾಗಿದೆ. 30 ರೂ. ವಿನಿಂದ 100 ರೂ.ಗಳ ವರೆಗಿನ ಆಟವನ್ನ ಇಲ್ಲಿ ಆಡಬಹುದಾಗಿದೆ. ಮಾಲಿನ ಮೂರನೇ ಮಹಡಿಯಲ್ಲಿ ಈ ಬಿಫನ್ ಲೋಕಾರ್ಪಣೆಗೊಂಡಿದೆ.
ಮತ್ತೊಂದು ವಿಶೇಷವೆಂದರೆ ಅರ್ಧ ಗಂಟೆ ಅಥವಾ ಒಂದು ಗಂಟೆಗೆ ಮಕ್ಕಳನ್ನ ಇಲ್ಲಿ ಆಡಲು ಬಿಟ್ಟು ಮಾಲ್ ನಲ್ಲಿ ಶಾಪಿಂಗ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಮೂರು ವರ್ಷದ ಮೇಲ್ಪಟ್ಟ ಮಕ್ಕಳನ್ನ ಹಿಡಿದುಕೊಂಡು ಬರುವ ದಂಪತಿಗಳಿಗೆ ಶಾಪಿಂಗ್ ಗೆ ಕಿರಿಕಿರಿ ಉಂಟಾಗುತ್ತದೆ ಎಂದು ಭಾವಿಸಿದಲ್ಲಿ ಈ ಬಿಫನ್ ನಲ್ಲಿ ಬಿಟ್ಟು ಹೋಗಬಹುದು. ಒಂದು ಗಂಟೆಗೆ 100 ರೂ ದರ ನಿಗದಿಪಡಿಸಲಾಗಿದೆ.
ದಕ್ಷಿಣ ಕನ್ನಡದ ಸಿದ್ದಕ್ ಬ್ಯಾರಿ ಅವರಿಂದ ನಿರ್ಮಾಣಗೊಂಡಿರುವ ಬಿಫನ್ ನನ್ನ ಸಚಿವ ಈಶ್ವರಪ್ಪನವರ ಪುತ್ರ ಕೆ.ಈ.ಕಾಂತೇಶ್, ಮೇಯರ್ ಸುನೀತಾ ಅಣ್ಣಪ್ಪನವರ ಮೂಲಕ ಉದ್ಘಾಟನೆ ಗೊಂಡಿದೆ. ಮಕ್ಕಳ ಬೇಸಿಗೆ ರಜೆಗೆ ಬಿಫನ್ ಒಳ್ಳೆಯ ಆಟದ ಲೋಕವಾಗಿ ಪರಿಣಮಿಸಬಹುದು.
[28/03, 13:34] Nagarajshenoy: ಈ ಸಂದರ್ಭದಲ್ಲಿ ಪ್ರಮುಖರಾದ ಎಸ್ ದತ್ತಾತ್ರಿ ಜ್ಯೋತಿಪ್ರಕಾಶ್ ಪಾಲಿಕೆ ಸದಸ್ಯರಾದ ಅನಿತಾ ರವಿಶಂಕರ್. ವಿಶ್ವಾಸ್ ಮೊದಲಾದವರಿದ್ದರು
Leave a Comment