ದಿನಾಂಕ; 1-8-2020 covid-19 ಜಿಲ್ಲಾ ಹೆಲ್ತ್ ಬುಲಿಟಿನ್ ಪ್ರಕಟ
ಇಂದು ಕೊರೋನ ಸೋಂಕಿತರ ಸಂಖ್ಯೆ - 129
ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ-1952
ಶಿವಮೊಗ್ಗ ನಗರ ಮತ್ತು ತಾಲೂಕಿನಲ್ಲಿ 59 ಜನರಿಗೆ ಸೋಂಕು ದೃಢಪಟ್ಟಿದೆ, ಅದರಂತೆ ಭದ್ರಾವತಿ 32, ಶಿಕಾರಿಪುರದಲ್ಲಿ 23, ತೀರ್ಥಹಳ್ಳಿ 7, ಸಾಗರ 2 ಹೊಸನಗರ-1 ಹಾಗೂ ಇತರೆ ಜಿಲ್ಲೆಯಿಂದ ಬಂದು ಮೆಗ್ಗಾನ್ ಗೆ ದಾಖಲಾದವರ ಸಂಖ್ಯೆ 5 ಎಂದು ಹೆಲ್ತ್ ಬುಲಿಟಿನ್ ಪ್ರಕಟಿಸಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಕೊರೋನ ಸೋಂಕಿತ ಸಂಖ್ಯೆ 129 ಎಂದು ಜಿಲ್ಲಾ ಹೆಲ್ತ್ ಬುಲಿಟಿನ್ ತಿಳಿಸಿದ್ದು ಇದರಿಂದಾಗಿ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ ಎರಡು ಸಾವಿರದ ಗಡಿ ಸಮೀಪ ಬಂದು ನಿಂತಿದೆ. ಇಂದು ಸಹ ಮೂವರು ಸೋಂಕಿನಿಂದ ಸಾವನ್ನಪ್ಪಿರುವುದಾಗಿ ಹೆಲ್ತ್ ಬುಲಿಟಿನ್ ಪ್ರಕಟಿಸಿದೆ.
ಇದುವರೆಗೂ 27953 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಿದ್ದು, ಇದರಲ್ಲಿ 25706 ಜನರಿಗೆ ಕೊರೋನ ನೆಗೆಟಿವ್ ಎಂದು ವರದಿ ಬಂದಿದೆ. ಇದರಲ್ಲಿ 1952 ಜನರಿಗೆ ಪಾಸಿಟಿವ್ ಎಂದು ವರದಿ ಬಂದಿದೆ. ಇಂದು ಸಹ 21 ಜನರು ಕೊರೋನ ಪಾಸಿಟಿವ್ ನಿಂದ ಗುಣಮುಖರಾಗಿದ್ದು ಇದುವರೆಗೂ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 1024 ಜನ ಎಂದು ಬುಲಿಟಿನ್ ಪ್ರಕಟಿಸಿದೆ.
ಕೋವಿಡ್-19 ಆಸ್ಪತ್ರೆ ಮೆಗ್ಗಾನ್ ನಲ್ಲಿ 242 ಜನ ಕೊರೋನ ಚಿಕಿತ್ಸೆ ಪಡೆಯುತ್ತಿದ್ದರೆ, 530 ಜನ ಸೋಂಕಿತರು ಕೋವಿಡ್ ಕೇರ್ ನಲ್ಲೂ, 42 ಖಾಸಗಿ ಆಸ್ಪತ್ರೆಯಲ್ಲೂ, 72 ಜನ ಮನೆಯಲ್ಲೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿನಿಂದಾಗಿ ಜಿಲ್ಲೆಯಲ್ಲಿ 370 ಕಂಟೈನ್ಮೆಂಟ್ ಜೋನ್ ಗಳಿದ್ದು 97 ಜನ ಡಿನೋಟಿಫೈಡ್ ಕಂಟೈನ್ಮೆಂಟ್ ಜೋನ್ ಗಳಿವೆ ಎಂದು ಹೆಲ್ತ್ ಬುಲಿಟಿನ್ ಪ್ರಕಟಿಸಿವೆ.

Leave a Comment