ಶಿವಮೊಗ್ಗದಲ್ಲಿ ಬಿಜೆಪಿ ಬೃಹತ್ ಪಾದಯಾತ್ರೆ: ಬಸ್ ಮತ್ತು ಟಿ.ಟಿ. ವಾಹನಗಳ ನಿಲುಗಡೆಗೆ ನಾಲ್ಕು ಮಾರ್ಗಗಳ ವ್ಯವಸ್ಥೆ

ಕಾರ್ಯಕರ್ತರ ವಾಹನ ಸಂಚಾರಕ್ಕೆ ಮಾರ್ಗಸೂಚಿ ಪ್ರಕಟ

ಶಿವಮೊಗ್ಗ: ಭಾರತೀಯ ಜನತಾ ಪಾರ್ಟಿ ಶಿವಮೊಗ್ಗ ವಿಭಾಗದ ವತಿಯಿಂದ ನವೆಂಬರ್ 5ರಂದು ಶಿವಮೊಗ್ಗದಲ್ಲಿ ಆಯೋಜಿಸಿರುವ ‘ಪ್ರಜಾಪ್ರಭುತ್ವ ಉಳಿಸಿ – ಅರಾಜಕತೆ ಅಳಿಸಿ’ ಎಂಬ ಘೋಷವಾಕ್ಯದಡಿ ನಡೆಯುವ ಬೃಹತ್ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕಾರವಾರ ಭಾಗದ ಬಿಜೆಪಿ ಕಾರ್ಯಕರ್ತರ ಅನುಕೂಲಕ್ಕಾಗಿ ಬಸ್ ಮತ್ತು ಟಿ.ಟಿ. ವಾಹನಗಳ ನಿಲುಗಡೆಗೆ ನಾಲ್ಕು ಪ್ರತ್ಯೇಕ ಮಾರ್ಗಗಳನ್ನು ನಿಗದಿಪಡಿಸಲಾಗಿದೆ.

ಕಾರ್ಯಕ್ರಮಕ್ಕೆ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಬಿಜೆಪಿ ವತಿಯಿಂದ ಮಾರ್ಗಸೂಚಿ ಪ್ರಕಟಿಸಲಾಗಿದೆ.

ನಾಲ್ಕು ಮಾರ್ಗಗಳ ವಿವರ:

* ಮಾರ್ಗ–1: ವಿಜಯಪುರ ಸರ್ಕಲ್ ಬಳಿಯ ವಾಹನ ನಿಲುಗಡೆ ಪ್ರದೇಶ.

* ಮಾರ್ಗ–2: ವಿಜಯಪುರ ಸರ್ಕಲ್‌ನಿಂದ ಬಸ್‌ಸ್ಟ್ಯಾಂಡ್, ಅಲೋಕ್ ವಿಡಿಯೋಸ್, ಸವಿ ಬೇಕರಿ ಮೂಲಕ ಫ್ರೀಡಂ ಪಾರ್ಕ್ ಕಡೆಗೆ ನಿಗದಿಪಡಿಸಿದ ಮಾರ್ಗ.

* ಮಾರ್ಗ–3: ವಿಜಯಪುರ ಸರ್ಕಲ್‌ನಿಂದ ಕಿರಣದವರ ರಸ್ತೆ, ರೈಲ್ವೆ ಸ್ಟೇಷನ್, ಅಶ್ವಥಖಾನೆ ಪ್ರದೇಶದ ಮೂಲಕ ಫ್ರೀಡಂ ಪಾರ್ಕ್ ಕಡೆಗೆ ಸಾಗುವ ಮಾರ್ಗ.

* ಮಾರ್ಗ–4: ವಿಜಯಪುರ ಸರ್ಕಲ್‌ನಿಂದ ಬಸ್‌ಸ್ಟ್ಯಾಂಡ್, ಹಳೇಪೇಟೆ ಸರ್ಕಲ್, ಕುಂಬಾರಗುಂಡಿ ಮೂಲಕ ಫ್ರೀಡಂ ಪಾರ್ಕ್ ಕಡೆಗೆ ಸಾಗುವ ಮಾರ್ಗ.

ಶಿವಮೊಗ್ಗ ನಗರಕ್ಕೆ ಆಗಮಿಸುವ ಬಿಜೆಪಿ ಕಾರ್ಯಕರ್ತರು ತಮ್ಮ ವಾಹನಗಳಿಗೆ ನಿಗದಿಪಡಿಸಿರುವ ಮಾರ್ಗವನ್ನು ಅನುಸರಿಸಿ, ಸೂಚಿಸಿರುವ ಸ್ಥಳಗಳಲ್ಲಿಯೇ ಬಸ್ ಮತ್ತು ಟಿ.ಟಿ. ವಾಹನಗಳನ್ನು ನಿಲುಗಡೆ ಮಾಡಬೇಕು. ನಗರದಲ್ಲಿ ಸಂಚಾರಕ್ಕೆ ತೊಂದರೆಯಾಗದಂತೆ ವಾಹನ ಚಾಲಕರು ಹಾಗೂ ಕಾರ್ಯಕರ್ತರು ಪಕ್ಷದ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.

ನಿಗದಿತ ಮಾರ್ಗಸೂಚಿಯಂತೆ ವಾಹನಗಳನ್ನು ನಿಲುಗಡೆ ಮಾಡಿ, ಬೃಹತ್ ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ಸಹಕರಿಸುವಂತೆ ಬಿಜೆಪಿ ಶಿವಮೊಗ್ಗ ವಿಭಾಗ ಮನವಿ ಮಾಡಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.