ಹೆಣ್ಣಿನ ಆಸೆಗೆ ಬಿದ್ದು ಕೈದಿ ಬಿಡುಗಡೆಗೆ DIG ಷಡ್ಯಂತ್ರ? ತನಿಖೆ ವೇಳೆ ಸೋಮಶೇಖರ್ ಕರ್ಮಕಾಂಡ ಬಯಲು.

ಬೆಂಗಳೂರು: ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಕೇಸ್‌ಗೆ ಸಂಬಂಧಪಟ್ಟಂತೆ ಜೈಲು ಡಿಐಜಿ ಸೋಮಶೇಖರ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೊದಲು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪರಪ್ಪನ ಅಗ್ರಹಾರ ಪೊಲೀಸರು. ಬಳಿಕ ಡಿಐಜಿ ಸೋಮಶೇಖರ್‌ನನ್ನು ಅರೆಸ್ಟ್ ಮಾಡಿ ಕೋರ್ಟ್ ಮುಂದೆ ಹಾಜರುಪಡಿಸಿದ್ದರು.

ಅಪರಾಧಿ ಶಂಕರ್ ಪತ್ನಿಯ ಜೊತೆ ಡಿಐಜಿ ಸೋಮಶೇಖರ್ ಮತ್ತು ಸಿಬ್ಬಂದಿ ಶ್ರೀಕಾಂತ್ ಲೈಂಗಿಕ ಸಂಪರ್ಕ ಬೆಳೆಸಿದ್ದರು ಅನ್ನೋ ಶಾಕಿಂಗ್ ವಿಚಾರ ಗೊತ್ತಾಗಿದೆ. ಆಕೆಯನ್ನ ಲೈಂಗಿಕವಾಗಿ ಬಳಸಿಕೊಂಡು ಶಂಕರ್ ಬಿಡುಗಡೆಗೆ ಸಂಚು ರೂಪಿಸಿದ್ದರು ಅನ್ನೋ ಮಾಹಿತಿ ಸಿಕ್ಕಿದೆ. ಸದ್ಯ, ಅಕ್ರಮದಲ್ಲಿ ಡಿಐಜಿ ಸೋಮಶೇಖರ್ ಪಾತ್ರದ ಬಗ್ಗೆ ಕೈದಿ ಪತ್ನಿ ಒಪ್ಪಿಕೊಂಡಿದ್ದು, ಪರಪ್ಪನ ಅಗ್ರಹಾರ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

"2018 ರಲ್ಲಿ ಬಿಡುಗಡೆಗೊಂಡಿದ್ದ ಕೈದಿ ಶಂಕರ್ "

8 ವರ್ಷದ ಬಳಿಕ ಜೈಲು ಇಲಾಖೆಯ ಮಹಾನಿರ್ದೇಶಕರಿಗೆ (DG) ಒಂದು ಪತ್ರ ಬಂದಿದೆ. ಆ ಪತ್ರದಲ್ಲಿ ಶಂಕರ್ ಎಂಬಾತ ನಕಲಿ ದಾಖಲೆ ನೀಡಿ ಜೈಲಿಂದ ಪರಾರಿಯಾಗಿದ್ದಾನೆ ಎಂದು ಬರೆಯಲಾಗಿತ್ತು, ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ಜೈಲು ಇಲಾಖೆ ಆಂತರಿಕ ತನಿಖೆಗೆ ಆದೇಶಿಸಿತ್ತು. ಬಳಿಕ ಶಂಕರ್ ಹಾಗೂ ಆರೋಪಿ ಶ್ರೀಕಾಂತ್ನ ಪೊಲೀಸರು ಅರೆಸ್ಟ್ ಮಾಡಿದ್ದರು. ಇದೀಗ ಈ ಪ್ರಕರಣದಲ್ಲಿ ಕಾರಾಗೃಹ ಡಿಐಜಿ ಪಾತ್ರ ಬಯಲಾಗಿದ್ದು, ಇಡೀ ಪೊಲೀಸ್ ಇಲಾಖೆಯ ತಲೆ ತಗ್ಗಿಸುವಂತಾಗಿದೆ.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.