ಶಿವಮೊಗ್ಗ ನಗರಕ್ಕೆ ಆಗಮಿಸಿದ ದಸರಾ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ

ಶಿವಮೊಗ್ಗ: ‘ಶಿವಮೊಗ್ಗ ನಾಡಹಬ್ಬ ದಸರಾ–2026’ರ ಜಂಬೂಸವಾರಿ ಮೆರವಣಿಗೆಯ ಗಾಂಭೀರ್ಯ ಹೆಚ್ಚಿಸಲಿರುವ ಸಕ್ರೆಬೈಲು ಆನೆ ಬಿಡಾರದ ಗಜಪಡೆಯು ಅಕ್ಟೋಬರ್ 15ರಂದು ಶಿವಮೊಗ್ಗ ನಗರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ, ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬರಮಾಡಿಕೊಳ್ಳುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಗುರುವಾರ ಸಂಜೆ 5 ಗಂಟೆಗೆ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿ ಸ್ವಾಗತಿಸುವ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಶಿವಮೊಗ್ಗ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಗಜಪಡೆಯು ವಿಶೇಷ ಮೆರುಗು ನೀಡಲಿದೆ. ದಸರಾ ಉತ್ಸವದ ಸಂಪ್ರದಾಯ, ವೈಭವ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮಕ್ಕೆ ವಿಶೇಷ ಮಹತ್ವವಿದೆ.

ಈ ಕಾರ್ಯಕ್ರಮದಲ್ಲಿ ಮಾಧ್ಯಮ ಮಿತ್ರರು ಉಪಸ್ಥಿತರಿರುವಂತೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಾರ್ಯಾಲಯದ ವತಿಯಿಂದ ಆಹ್ವಾನ ನೀಡಲಾಗಿತ್ತು.






 ದಸರಾ ಉತ್ಸವ ಪೋಸ್ಟರ್ ಬಿಡುಗಡೆ


ಶಿವಮೊಗ್ಗ: ಮಹಾನಗರ ಪಾಲಿಕೆ ವತಿಯಿಂದ ಆಚರಿಸುವ ನಾಡ ಹಬ್ಬ ದಸರಾ ಉತ್ಸವಕ್ಕೆ ಪ್ರಚಾರ ಮಾಡುವ ಉದ್ದೇಶದಿಂದ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ವತಿಯಿಂದ ಸ್ಟಿಕರ್ ಮತ್ತು ಪೋಸ್ಟರ್ ಗಳನ್ನೂ. ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಮಹಾಪೋಷಕರಾದ ಜ್ಯೋತಿ ಪ್ರಕಾಶ್ ಮತ್ತು ಹರ್ಷ ಕಾಮತ್ ಅವರು ಬಿಡುಗಡೆ ಮಾಡಿದರು ಈ ಸಂದರ್ಭದಲ್ಲಿ. ಆಟೋಗಳಿಗೆ ಬೈಕ್ ಗಳಿಗೆ ಬ್ಯೂಟಿ ಪಾರ್ಲರುಗಳಿಗೆ. ಕಟಿಂಗ್ ಶಾಪುಗಳಿಗೆ ಮೆಡಿಕಲ್ ಗಳು ಮತ್ತು ಜ್ಯೂಸ್ ಸೆಂಟರ್ ಗಳು ಸ್ಟಿಕರ್ ಗಳನ್ನು ಅಂಟಿಸಲಾಯಿತು.

ಹಿರಿಯ ಆಟೋ ಚಾಲಕರನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಸಂಸ್ಥಾಪಕÀ ಕುಪೇಂದ್ರ ಆಯನೂರು. ರಾಜ್ಯಾಧ್ಯಕ್ಷರಾದ ಪ್ರದೀಪ ಹೊನ್ನಪ್ಪ. ಉಪಾಧ್ಯಕ್ಷರಾದ ಸುರೇಖಾ ಪಾಲಾಕ್ಷಪ್ಪ. ರಾಜ್ಯ ಪ್ರಧಾನ ಕಾರ್ಯದರ್ಶಿ ಇಂದು ಬಿ ಗೌಡ.. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಿನಿ ಗೌಡ. ಉಪಾಧ್ಯಕ್ಷರಾದ ಧರ್ಮರಾಜ್. ಮಹಾನಗರ ಅಧ್ಯಕ್ಷರಾದ ವೈ ಚಂದ್ರಶೇಖರ್. ಶಿಕಾರಿಪುರ ತಾಲೂಕ ಅಧ್ಯಕ್ಷ ಸುರೇಶ್. ಪದಾಧಿಕಾರಿಗಳಾದ ರವಿಕುಮಾರ್. ಕವಿತಾ.. ಆಟೋ ರವಿ. ಆಟೋ ನಾಗಭೂಷಣ್. ಇತರರು ಹಾಜರಿದ್ದರು


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.