ಮಾಧಕ ದ್ರವ್ಯಗಳ ವಿರುದ್ಧ ಜಾಗೃತಿ: ಶಿವಮೊಗ್ಗದಲ್ಲಿ ನಾಳೆ ರಾಷ್ಟ್ರೀಯ ಮೋಟಾರ್ ಸೈಕಲ್ ಜಾಥಾ
ಶಿವಮೊಗ್ಗ:ಏಕತಾ ದಿನಾಚರಣೆಯ ಅಂಗವಾಗಿ ಮಾದಕ ದ್ರವ್ಯಗಳ ವಿರುದ್ಧ ಹೋರಾಟ ಎಂಬ ಪ್ರಮುಖ ಸಂದೇಶದೊಂದಿಗೆ ರಾಷ್ಟ್ರೀಯ ಮೋಟಾರ್ ಸೈಕಲ್ ಜಾಥಾ – 2026 ಹಮ್ಮಿಕೊಳ್ಳಲಾಗಿದೆ. ಚಿತ್ರದುರ್ಗದಿಂದ ಹಂಚಿನ ಸಿದ್ದಾಪುರ ಮೂಲಕ ಶಿವಮೊಗ್ಗ ನಗರಕ್ಕೆ ಆಗಮಿಸಲಿರುವ ಮೋಟಾರ್ ಸೈಕಲ್ ಜಾಥಾ ತಂಡಗಳನ್ನು ನಾಳೆ ಅಂದರೆ ದಿನಾಂಕ: 17-10-2026ರ ಬೆಳಗ್ಗೆ 11:00 ಗಂಟೆಗೆ ಗೋಪಿ ಸರ್ಕಲ್ನಲ್ಲಿ ಸಭಾ ಕಾರ್ಯಕ್ರಮದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಲಾಗುತ್ತದೆ. ನಂತರ ಐಕ್ಯತಾ ಗೋಡೆಯ ಎದುರು ಮಾದಕ ದ್ರವ್ಯದ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ಕುರಿತು ಸಾರ್ವಜನಿಕರು ಹಾಗೂ ಭಾಗವಹಿಸುವವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಜಾಥಾದ ಸಾಗುವ ಮಾರ್ಗ:
ಗೋಪಿ ವೃತ್ತದಿಂದ ಆರಂಭವಾಗುವ ಈ ಬೈಕ್ ಜಾಥಾವು ಎಎ ವೃತ್ತ, ಕರ್ನಾಟಕ ಸಂಘ, ಶಂಕರ ಮಠ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಕೆಇಬಿ ವೃತ್ತ, ರೈಲ್ವೇ ಸ್ಟೇಷನ್ ಮುಂಭಾಗದಿಂದ ಎ.ಎ ಕಾಲೋನಿ, ಉಷಾ ವೃತ್ತ, ವಿನೋಬ ನಗರ 60 ಅಡಿ ರಸ್ತೆ, ಆಲ್ಕೊಳ ವೃತ್ತ, ಗೋಪಾಳ ಗೌಡ ಬಡಾವಣೆ, ಡಿವಿಜಿ ವೃತ್ತ, ಗೋಪಾಳ ಬಸ್ ಸ್ಟಾಂಡ್, ತುಂಗಾನಗರ ಬೈಪಾಸ್, ನ್ಯೂ ಮಂಡ್ಲಿ ವೃತ್ತ, ಸಂದೇಶ ಮೋಟಾರ್ಸ್, ಎನ್ ಟಿ ರಸ್ತೆ ಮೂಲಕ ಅಶೋಕ ವೃತ್ತ ತಲುಪಿ, ಅಂತಿಮವಾಗಿ ಡಿಎಆರ್ ಪೊಲೀಸ್ ಸಭಾಂಗಣಕ್ಕೆ ತೆರಳಿ ಮುಕ್ತಾಯಗೊಳ್ಳಲಿದೆ.
ಸಾರ್ವಜನಿಕರಿಗೆ ಮುಕ್ತ ಆಹ್ವಾನ:
ಈ ಬೈಕ್ ಜಾಥಾದಲ್ಲಿ ಸಾರ್ವಜನಿಕರು ಹಾಗೂ ಸ್ಥಳೀಯ ಬೈಕ್ ಸವಾರರು ಕೂಡ ಸಕ್ರಿಯವಾಗಿ ಭಾಗವಹಿಸಬಹುದಾಗಿದೆ. ಆಸಕ್ತ ಸವಾರರು ತಮ್ಮ ಸ್ವಂತ ಮೋಟಾರ್ ಬೈಕ್, ಕಡ್ಡಾಯವಾಗಿ ವಾಹನದ ಸಂಪೂರ್ಣ ದಾಖಲಾತಿಗಳು ಹಾಗೂ ತಲೆಗೆ ಸಂಪೂರ್ಣ ರಕ್ಷಣೆ ನೀಡುವ ಹೆಲ್ಮೆಟ್ ಧರಿಸಿ ಜಾಥಾದಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

Leave a Comment