ಅಪ್ಪ ಕಾಣದ ದೇವರು: ತಂದೆಯ ತ್ಯಾಗ, ಪ್ರೀತಿ ಸಾರುವ ಭಾವುಕ ಬರಹ ವೈರಲ್
ಶಿವಮೊಗ್ಗ:“ಅಪ್ಪ ಕಾಣದ ದೇವರು” ಎಂಬ ಶೀರ್ಷಿಕೆಯಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಭಾವುಕ ಬರಹವೊಂದು ಹಲವರ ಮನಗೆದ್ದಿದೆ.
ತಂದೆಯ ಪ್ರೀತಿ, ತ್ಯಾಗ ಹಾಗೂ ಮಕ್ಕಳಿಗಾಗಿ ಆತ ಮಾಡುವ ಕಷ್ಟಗಳನ್ನು ಮನಮುಟ್ಟುವ ರೀತಿಯಲ್ಲಿ ಈ ಬರಹದಲ್ಲಿ ವಿವರಿಸಲಾಗಿದೆ. ತಾಯಿಯ ಮಮತೆಯಂತೆ ತಂದೆಯ ಪ್ರೀತಿಯೂ ಅಪಾರವಾಗಿದ್ದು, ಆದರೆ ಅನೇಕ ಸಂದರ್ಭಗಳಲ್ಲಿ ತಂದೆಯ ತ್ಯಾಗ ಮತ್ತು ನೋವು ಮಕ್ಕಳಿಗೆ ಗೋಚರವಾಗುವುದಿಲ್ಲ ಎಂಬ ಸಂದೇಶವನ್ನು ಬರಹ ಸಾರುತ್ತದೆ.
ಮಕ್ಕಳು ಹುಟ್ಟಿದ ಕ್ಷಣದಿಂದ ಅವರ ಬೆಳವಣಿಗೆ, ವಿದ್ಯಾಭ್ಯಾಸ, ಜೀವನದ ಏಳಿಗೆಗಾಗಿ ತಂದೆ ತನ್ನ ಸಂತೋಷವನ್ನು ಬದಿಗಿಟ್ಟು ದುಡಿಯುತ್ತಾನೆ. ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವ ತಂದೆ, ತನ್ನ ಕಷ್ಟಗಳನ್ನು ಮಾತ್ರ ಬಹಿರಂಗಪಡಿಸುವುದಿಲ್ಲ.
“ಎಲ್ಲಕ್ಕಿಂತ ಮಿಗಿಲು ಅಮ್ಮನಾದರೂ, ಮಗುವಿನ ಬದುಕಿನ ದಾರಿಯಲ್ಲಿ ನೆರಳಾಗಿ ನಿಲ್ಲುವ ಅಪ್ಪನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ” ಎಂಬ ಭಾವನೆಯನ್ನು ಈ ಬರಹ ಮೂಡಿಸುತ್ತದೆ.
ಕೊನೆಯದಾಗಿ, “ನಾ ಕಂಡ ದೇವರು ಅಪ್ಪನಾದರೂ, ಆ ದೇವರಿಗೆ ದೇವರಾಗಿದ್ದವನು ನೀನು” ಎಂಬ ಭಾವನಾತ್ಮಕ ಸಂದೇಶದ ಮೂಲಕ ತಂದೆಯ ಮಹತ್ವವನ್ನು ಸಾರಲಾಗಿದೆ.
ತಂದೆ-ಮಕ್ಕಳ ಬಾಂಧವ್ಯವನ್ನು ನೆನಪಿಸುವ ಈ ಬರಹ ಸಾಮಾಜಿಕ ಜಾಲತಾಣದಲ್ಲಿ ಹಲವರ ಮೆಚ್ಚುಗೆಗೆ ಪಾತ್ರವಾಗಿದ್ದು, ಅಪ್ಪನನ್ನು ಕಳೆದುಕೊಂಡವರಿಗೂ, ಅಪ್ಪನ ಪ್ರೀತಿಯನ್ನು ಅನುಭವಿಸುತ್ತಿರುವವರಿಗೂ ಭಾವನಾತ್ಮಕವಾಗಿ ತಟ್ಟುತ್ತಿದೆ.

Leave a Comment