ಚಿತ್ರರಂಗ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ : ರಾಜೇಂದ್ರಸಿಂಗ್ ಬಾಬು


ಶಿವಮೊಗ್ಗ: ಲಕ್ಷಾಂತರ ಕಲಾವಿದರು ಮತ್ತು ತಂತ್ರಜ್ಞರಿಗೆ ಉದ್ಯೋಗ ನೀಡಿದ ಚಿತ್ರರಂಗವನ್ನು ಕಡೆಗಣಿಸಬೇಡಿ. ಸಿನಿಮಾ ಒಂದು ಸಂಸ್ಕೃತಿಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ನಿದೇಶಕ ರಾಜೇಂದ್ರಸಿAಗ್ ಬಾಬು ಹೇಳಿದ್ದಾರೆ.

ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ವಿಜೃಂಭಣೆಯ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾದಲ್ಲಿ ಇಂದು ಸಂಸ್ಕೃತಿ ಭವನದಲ್ಲಿ ಆಯೋಜಿಸಿದ್ದ ಚಲನಚಿತ್ರ ದಸರಾ ಉದ್ಘಾಟಿಸಿ ಅವರು ಮಾತನಾಡಿದರು.

ನಾಡಿನ ಪ್ರಸಿದ್ಧ ಮೈಸೂರು ದಸರಾದಲ್ಲಿ ೧೯೩೬ ರಿಂದ ನಡೆದುಕೊಂಡು ಬಂದ ಚಲನಚಿತ್ರೋತ್ಸವ ವನ್ನು ಈ ಬಾರಿ ದುಡ್ಡಿಲ್ಲ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ಕೈಬಿಟ್ಟಿರುವುದು ದುರಂತದ ಸಂಗತಿ. ವಿದೇಶದಲ್ಲಿ ಕಾಮ್ಸ್ ಫೆಸ್ಟಿವಲ್ ಮುನ್ನ ಹಲವು ದೇಶಗಳ ತಂತ್ರಜ್ಞರು ೬ ತಿಂಗಳ ಮುನ್ನವೇ ತಯಾರಿ ನಡೆಸುತ್ತಾರೆ. ಆ ಮೂಲಕ ಚಿತ್ರರಂಗವನ್ನು ಬೆಳೆಸಿ ಸಮಾಜಕ್ಕೆ ಸಂದೇಶ, ಕೊಡುಗೆ ನೀಡಿದ್ದಾರೆ ಎಂದರು.

ನಾನು ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ ಕಳೆದ ೧೪ ವರ್ಷಗಳಿಂದ ಫೈಲ್ ಹಿಡಿದು ರಾಜಕಾರಣಿಗಳ ಬಳಿಗೆ ಓಡಾಡುತ್ತಿದ್ದೇನೆ. ಹಿಂದೆ ೩೬ ಗಂಟೆಗಳ ಸಿನಿಮಾ ಮಾಡುತ್ತಿದ್ದರು. ಆದರೂ ಜನ ಇನ್ನೆರಡು ಗೀತೆ ಇರಬೇಕೆಂದು ಹೇಳುತ್ತಿದ್ದರು. ಈಗ ೯೦ ನಿಮಿಷಕ್ಕೆ ಸೀಮಿತವಾಗಿದೆ. ಮೈಸೂರಿಗೆ ಸವಾಲು ಎಂಬAತೆ ಶಿವಮೊಗ್ಗದಲ್ಲಿ ದಸರಾ ನಡೆಸುತ್ತಿದ್ದಾರೆ. ಇಲ್ಲಿ ಕಲೆ ಮತ್ತು ಕಲಾದೇವಿಯೇ ನೆಲೆಸಿದ್ದಾಳೆ. ಎಲ್ಲಾ ಜನಪ್ರತಿನಿಧಿಗಳು ತಮ್ಮ ಸಹಾಯಹಸ್ತ ಚಾಚಿದ್ದಾರೆ. ಇಲ್ಲಿಯೇ ರಾಷ್ಟç ಮತ್ತು ಅಂತರಾಷ್ಟಿçÃಯ ಚಲನಚಿತ್ರೋತ್ಸವ ಮಾಡುವ ತಯಾರಿಯೂ ನಡೆಯುತ್ತಿದೆ. ಅದರೊಂದಿಗೆ ಮಕ್ಕಳ ಚಲನಚಿತ್ರೋತ್ಸ ಕೂಡ ನಡೆಸಬೇಕು ಎಂದು ವಿನಂತಿ ಮಾಡಿದ್ದೇನೆ. ಎಲ್ಲರೂ ಒಪ್ಪಿದ್ದಾರೆ. ಇಲ್ಲಿನ ಆಹಾರ ವಾತಾವರಣ ಪರಿಸರ ಮತ್ತು ಕ್ರಿಯಾಶೀಲ ಕಲಾವಿದರು, ಶರಾವತಿಯ ಸೌಂದರ್ಯ ಎಲ್ಲವೂ ಇದೆ. ಮೊಬೈಲ್ ಗಳಲ್ಲಿ ಕೆಟ್ಟ ವಿಷಯಗಳನ್ನು ಯುವಕರು ಆಸಕ್ತಿಯಿಂದ ನೋಡುತ್ತಾರೆ. ಆದರೆ, ನಮ್ಮ ಸುತ್ತಲಿನ ಗಿಡ ಮರ, ಕ್ರಿಮಿ ಕೀಟಗಳು ಪ್ರಾಣಿ ಪಕ್ಷಿಗಳು ನಮ್ಮ ಪರಿಸರ ಎಲ್ಲದರ ಅರಿವನ್ನು ನಾವು ಮೂಡಿಸಬೇಕಾಗಿದೆ ಎಂದರು.

ನಾನು ಮಕ್ಕಳ ಚಿತ್ರಗಳಿಗೆ ಹೆಚ್ಚಿನ ಒತ್ತು ನೀಡುತ್ತೇನೆ. ಆದರೆ, ನಮ್ಮ ಸರ್ಕಾರ ಅದಕ್ಕೆ ತೆರಿಗೆ ರಿಯಾಯಿತಿ ನೀಡಿಲ್ಲ. ಅದರ ಬದಲಿಗೆ ಸಂಜಯ್ ಖಾನ್ ನಿರ್ಮಾಣದ ಚಿತ್ರಕ್ಕೆ ತೆರಿಗೆ ರಿಯಾಯಿತಿ ನೀಡಿದ್ದು ಕೂಡ ನನಗೆ ಬೇಸರ ತಂದಿದೆ. ಅನಂತನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿದ್ದು ಸಂತೋಷ ತಂದಿದೆ. ಇದಕ್ಕೂ ಮೊದಲು ವಿಷ್ಣು ವರ್ಧನ್, ಬಿ. ಸರೋಜದೇವಿ ಸೇರಿದಂತೆ ಅನೇಕ ಅಗ್ರಜ ಕಲಾವಿದರಿಗೆ ಪ್ರಶಸ್ತಿ ಕೈತಪ್ಪಿ ಹೋಗಿತ್ತು. ಮಟನ್ ಮಾರ್ಕೇಟ್ ನಲ್ಲಿರುವ ಒಬ್ಬರಿಗೆ ಸಂಸದರ ಶಿಫಾರಸಿನ ಸೆನ್ಸಾರ್ ಬೋರ್ಡ್ ಕೊಟ್ಟಿದ್ದರು. ಚಲನಚಿತ್ರದ ಗಂಧ ಗಾಳಿಯೇ ಇಲ್ಲದವರಿಗೆ ಹುದ್ದೆಗಳನ್ನು ಕಲ್ಪಿಸಿದರೆ ಚಿತ್ರರಂಗ ದುರ್ಗತಿಗೆ ಇಳಿಯುತ್ತದೆ. ವಿದೇಶದ ಕಾಮ್ಸ್ ಫೆಸ್ಟಿ ವಲ್ ರೀತಿಯಲ್ಲಿ ಶಿವಮೊಗ್ಗದಲ್ಲೂ ದೊಡ್ಡ ಫಿಲಂ ಫೆಸ್ಟಿವಲ್ ಎಲ್ಲರೂ ಸೇರಿ ಹಮ್ಮಿಕೊಳ್ಳೋಣ ಎಂದರು.

ಕಿರುತೆರೆ ನಟಿ ಸಂಗೀತ ಅನಿಲ್ ಕೂಡ ಶಿವಮೊಗ್ಗ ಚಲನಚಿತ್ರ ದಸರಾವನ್ನು ಕೊಂಡಾಡಿದರು. ಮಾಸ್ಟರ್ ಮಂಜುನಾಥ್, ಮಾಸ್ಟರ್ ರೋಹಿತ್ ಶ್ರೀನಾಥ್ ಮಾಲ್ಗುಡಿ ಡೇಸ್ ನ ತಮ್ಮ ಶಿವಮೊಗ್ಗದ ಚಿತ್ರೀಕರಣದ ಅನುಭವ ಹಂಚಿಕೊAಡರು. ಇಲ್ಲಿನ ಜನರ ಹೃದಯ ವೈಶಾಲ್ಯತೆ ಕೊಂಡಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಮಾರ್ನಾಮಿಬೈಲ್ ನಲ್ಲಿ ಪ್ರಾರಂಭವಾದ ಒಂದು ದಿನದ ದಸರಾ ಈಗ ೧೧ ದಿನದ ವೈಭವದ ದಸರಾ ಆಗಿ ಹೊರ ಹೊಮ್ಮಿದೆ. ಸಾವಿರಾರು ಕಲಾವಿದರು ವಿವಿಧ ಚಟುವಟಿಕೆಗಳ ಮೂಲಕ ಭಾಗವಹಿಸಿದ್ದಾರೆ. ಸುಮಾರು ೨೫೦ಕ್ಕೂ ಹೆಚ್ಚು ನಗರದ ಎಲ್ಲಾ ದೇವತೆಗಳು ಮತ್ತು ಮೂರು ಆನೆಗಳೊಂದಿಗೆ ಅಂಬಾರಿಯಲ್ಲಿ ಚಾಮುಂಡೇಶ್ವರಿ ಮೆರವಣಿಗೆ ವಿಜಯದಶಮಿಯಂದು ಅಲ್ಲಮಪ್ರಭು ಮೈದಾನದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದು, ಎಲ್ಲಾ ನಾಗರಿಕರು ಇದರಲ್ಲಿ ಭಾಗವಹಿಸಬೇಕು. ಚಲನಚಿತ್ರಕ್ಕೆ ಅದರದ್ದೇ ಆದ ಮಹತ್ವವಿದೆ. ಅದರಲ್ಲಿ ಜೀವನಕ್ಕೆ ಬೇಕಾಗುವ ಎಲ್ಲಾ ಅಂಶಗಳು ಸಿಗುತ್ತದೆ. ಮುಂಬ ರುವ ದಿನಗಳಲ್ಲಿ ಮಕ್ಕಳ ಚಲನ ಚಿತ್ರೋತ್ಸವವನ್ನು ಕೂಡ ಇಲ್ಲಿ ಮಾಡೋಣ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಕನ್ನಡ ಚಿತ್ರಗಳು ಉಳಿಯಬೇಕಾಗಿದೆ. ಇಂದಿನ ಸಿನಿಮಾಗಳು ಸಮಾಜ ತಿದ್ದುವ ಕೆಲಸ ಮಾಡುತ್ತಿಲ್ಲ. ಎಲ್ಲೋ ಅಪರೂಪಕ್ಕೆ ಒಂದೊAದು ಚಿತ್ರಗಳು ಬರುತ್ತವೆ. ಈ ವರ್ಷ ‘ಪ್ರೇಮದ ಊರಲಿ’ ಚಿತ್ರವು ಯಾವ ದೊಡ್ಡ ಬಜೆಟ್ ಇಲ್ಲದೇ ಹಿಟ್ ಆಗಿರುವುದು ಸಂತೋಷದ ವಿಷಯ. ಕೋಟಿ ಕೋಟಿ ಖರ್ಚು ಮಾಡಿ ಕೊಚ್ಚುವುದು, ಕೊಲ್ಲುವುದು ಸಿನಿಮಾಗಳು ಬಂದರೆ ಇವು ಏನು ಸಂದೇಶ ನೀಡುತ್ತವೆ ಎಂದರು.
ಯುವಕರಲ್ಲಿ ಸಿನಿಮಾ ಚಟುವಟಿಕೆ ಬೆಳೆಸಬೇಕು ಎಂಬ ಉದ್ದೇಶದಿಂದ ನಾವು ಕಿರುಚಿತ್ರ ಸ್ಪರ್ಧೆ ಅಂಬೆಗಾಲು ಹಮ್ಮಿಕೊಂಡು ಯಶಸ್ವಿಯಾಗಿದ್ದೇವೆ. ಈ ಚಿತ್ರದಿಂದ ಅನೇಕ ನಿರ್ದೇಶಕರು ಉತ್ತಮ ಸ್ಥಾನಗಳನ್ನು ಪಡೆದಿದ್ದಾರೆ. ಇಂದು ಕೂಡ ಹಲವು ಕಿರು ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಹಾಗೆಯೇ ಅರಸಾಳಿನಲ್ಲಿ ಮಾಲ್ಗುಡಿ ಡೇಸ್ ನೆನಪಿನಲ್ಲಿ ನಿಲ್ದಾಣವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಸಚಿವರು ಒಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಸ್ಟರ್ ಮಂಜುನಾಥ್ ಮತ್ತು ರೋಹಿತ್ ಶ್ರೀನಾಥ್ ಅವರ ಸಲಹೆ ಪಡೆಯಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ಅಕಾಡಮಿ ಸದಸ್ಯ ದೇಶಾದ್ರಿ ಹೊಸ್ಮನೆ, ನಟರಾದ ಮಾಸ್ಟರ್ ಮಂಜುನಾಥ್, ಮಾಸ್ಟರ್ ರೋಹಿತ್ ಶ್ರೀನಾಥ್, ಹಿರಿತೆರೆ, ಕಿರುತೆರೆ ಕಲಾವಿದೆ ಸಂಗೀತಾ ಅನಿಲ್, ಸೂಡಾ ಮಾಜಿ ಅಧ್ಯಕ್ಷ ಎಸ್. ಜ್ಞಾನೇಶ್ವರ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ತುಕಾರಾಂ ರಾವ್ ಬಿ.ವಿ., ಪ್ರಭಾಕರ್, ವೈದ್ಯ, ಯಶವಂತ್ ಸೇರಿದಂತೆ ಹಲವರಿದ್ದರು.
ಈ ಸಂದರ್ಭದಲ್ಲಿ ಪೃಥ್ವಿಗೌಡ ನಿರ್ದೇಶನದ ಕಬಂಧ, ಪ್ರಶಾಂತ್ ಸಾಗರ್ ನಿರ್ದೇಶನದ ಶರಾವತಿ, ಮೇದಿನಿ ಕೆಳಮನೆ ನಿರ್ದೇಶನದ ದಾಳಿ, ಈಶಾನ್ಯ ಶರ್ಮಾ ನಿರ್ದೇಶನದ ಡಬಲ್ ಟಿಕ್, ನಾಗರಾಜ್ ಕಿತ್ತೂರು ನಿರ್ದೇಶನದ ಖಾಲಿ ಕನಸಿನ ಕಾಗದ, ನವನ್ ಶ್ರೀನಿವಾಸ್ ನಿರ್ದೇಶನದ ಗೋಣಿಚೀಲ, ಅನಿಶ್ ಶರ್ಮಾ ನಿರ್ದೇಶನದ ವಡ್ಡಾರಾಧಕ, ನವೀನ್ ತೇಜಸ್ವಿ ನಿರ್ದೇಶನದ ಹಬ್ಬ ಹರಿದಿನ ಸುಗ್ಗಿ ಶಿವರಾತ್ರಿ, ವಿದ್ಯಾಲಕ್ಷಿö ಪ್ರಲ್ಹಾದ್ ಅವರ ಘಮ, ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು.
ಹಾಗೆಯೇ ಕಲಾವಿದರಾದ ಗಾರ್ಗಿ ಕಾರೆಹಕ್ಲು, ಚಂದ್ರಶೇಖರ ಶಾಸ್ತಿç, ಚಂದ್ರಶೇಖರ ಹಿರೇಗೋಣಿಗೆರೆ, ದಾನಂ, ಶಿವಮೊಗ್ಗ ರಾಮಣ್ಣ, ರಘು ಗುಂಡ್ಲು, ಶಂಕರ್ ಅವರನ್ನು ಸನ್ಮಾನಿಸಲಾಯಿತು.
ಪಾಲಿಕೆ ಅಧಿಕಾರಿ ನಾಗೇಂದ್ರ ಸ್ವಾಗತಿಸಿದರು. ವಿನಯ್ ಶಿವಮೊಗ್ಗ ಅತಿಥಿಗಳ ಪರಿಚಯಿಸಿದರು. ಚೈತ್ರಾ ನಿರಂತರ ನಿರೂಪಿಸಿದರು. 

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.