ಶಿವಮೊಗ್ಗ*ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮಕ್ಕಳಿಗೆ ಪೊಲೀಸ್ ಕಲ್ಯಾಣ ನಿಧಿಯಿಂದ ಪ್ರೋತ್ಸಾಹ ಧನ ವಿತರಣೆ*

*2025ನೇ ಸಾಲು ಹಾಗೂ 2026ನೇ ಸಾಲಿನ* ಎರಡು ಶೈಕ್ಷಣಿಕ ವರ್ಷಗಳಲ್ಲಿ *ಎಸ್ಎಸ್ಎಲ್‌ಸಿ/ಪಿಯುಸಿ* ಪರೀಕ್ಷೆಗಳಲ್ಲಿ *ಶೇ. 90 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು* ಪಡೆದ ಶಿವಮೊಗ್ಗ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, *ಪೊಲೀಸ್ ಕಲ್ಯಾಣ ನಿಧಿಯಿಂದ ಪ್ರೋತ್ಸಾಹ ಧನ ವಿತರಣೆ* ಮಾಡಲಾಗಿರುತ್ತದೆ. 

2025-2026ರ ಶೈಕ್ಷಣಿಕ ವರ್ಷಕ್ಕೆ, *ಒಟ್ಟು ₹15,50,000 (ರೂಪಾಯಿ ಹದಿನೈದು ಲಕ್ಷದ ಐವತ್ತು  ಸಾವಿರ ಮಾತ್ರ) ಮೊತ್ತದ ಪ್ರೋತ್ಸಾಹ ದನವನ್ನು, ಒಟ್ಟು 68 ವಿದ್ಯಾರ್ಥಿಗಳಿಗೆ* ವಿತರಿಸಲಾಯಿತು.  ಇದರಲ್ಲಿ ಎಸ್ಎಸ್ಎಲ್‌ಸಿ/ಪಿಯುಸಿ ಪರೀಕ್ಷೆಗಳಲ್ಲಿ 90% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ *32 ವಿದ್ಯಾರ್ಥಿಗಳು ಮತ್ತು ಉನ್ನತ ಶಿಕ್ಷಣ ಪಡೆಯುತ್ತಿರುವ 36 ವಿದ್ಯಾರ್ಥಿಗಳಿಗೆ* ಪ್ರೋತ್ಸಾಹ ಧನ ವಿತರಣೆ ಮಾಡಲಾಗಿರುತ್ತದೆ.

ಮಾಹಿತಿ ಕೆಳಕಂಡಂತಿರುತ್ತದೆ. 
1. *ಎಸ್ಎಸ್ಎಲ್‌ಸಿ (90% ಕ್ಕಿಂತ ಹೆಚ್ಚು)* – 12 ವಿದ್ಯಾರ್ಥಿಗಳಿಗೆ ತಲಾ 10,000/- ರೂ ಸೇರಿ ಒಟ್ಟು 1,20,000/- ರೂ ಪ್ರೋತ್ಸಾಹ ಧನ. 
2. *ಪಿಯುಸಿ (90% ಕ್ಕಿಂತ ಹೆಚ್ಚು)* – 20 ವಿದ್ಯಾರ್ಥಿಗಳಿಗೆ ತಲಾ 10,000/- ರೂ ಸೇರಿ ಒಟ್ಟು 2,00,000/- ರೂ ಪ್ರೋತ್ಸಾಹ ಧನ. 
3. *ತಾಂತ್ರಿಕ ಪದವಿ (ಬಿಇ,ಬಿಟೆಕ್,ಎಲ್ಎಲ್‌ಬಿ)* – 10 ವಿದ್ಯಾರ್ಥಿಗಳಿಗೆ ತಲಾ 40,000/- ರೂ ಸೇರಿ ಒಟ್ಟು 4,00,000/- ರೂ ಪ್ರೋತ್ಸಾಹ ಧನ. 
4. *ಇತರೆ  ಎಲ್ಲಾ ರೀತಿಯ ಪದವಿ* – 12 ವಿದ್ಯಾರ್ಥಿಗಳಿಗೆ ತಲಾ 20,000/- ರೂ ಸೇರಿ ಒಟ್ಟು 2,40,000/- ರೂ ಪ್ರೋತ್ಸಾಹ ಧನ. 
5. *ಎಂಎ, ಎಂಎಸ್ಇ, ಎಂಕಾಮ್* – 7 ವಿದ್ಯಾರ್ಥಿಗಳಿಗೆ ತಲಾ 30,000/- ರೂ ಸೇರಿ ಒಟ್ಟು 2,10,000/- ರೂ ಪ್ರೋತ್ಸಾಹ ಧನ. 
6. *ಎಂಬಿಬಿಎಸ್, ಎಂಟೆಕ್, ಸಿಎ* – 4 ವಿದ್ಯಾರ್ಥಿಗಳಿಗೆ ತಲಾ 50,000/- ರೂ ಸೇರಿ ಒಟ್ಟು 2,00,000/- ರೂ ಪ್ರೋತ್ಸಾಹ ಧನ. 
7. *ಎಂಡಿ, ಎಂಎಸ್* – 3 ವಿದ್ಯಾರ್ಥಿಗಳಿಗೆ ತಲಾ 60,000/- ರೂ ಸೇರಿ ಒಟ್ಟು 1,80,000/- ರೂ ಪ್ರೋತ್ಸಾಹ ಧನ. 
 *ಸೇರಿ ಒಟ್ಟು ₹15,50,000 (ರೂಪಾಯಿ ಹದಿನೈದು ಲಕ್ಷದ ಐವತ್ತು  ಸಾವಿರ ಮಾತ್ರ) ಮೊತ್ತದ ಪ್ರೋತ್ಸಾಹ ಧನ.  ವಿತರಣೆ ಮಾಡಲಾಗಿರುತ್ತದೆ.*

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.