ಶಿವಮೊಗ್ಗದಲ್ಲಿ ಗಾಂಜಾ ಮಾರಾಟದ ಮೇಲೆ ಪೊಲೀಸರ ದಾಳಿ: ಐವರು ಆರೋಪಿಗಳ ಬಂಧನ

₹61,500 ಮೌಲ್ಯದ 1.230 ಕೆ.ಜಿ. ಗಾಂಜಾ ಹಾಗೂ ₹400 ನಗದು ವಶಕ್ಕೆ
ಶಿವಮೊಗ್ಗ: ನಗರದ ಶಿವಮೊಗ್ಗ–ಹಾಳೂರು ಅನುಪಿನಕಟ್ಟೆ ಮುಖ್ಯ ರಸ್ತೆಯ ತುಂಗಾ ಮೇಲ್ದಂಡೆ ಕಾಲುವೆ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ತುಂಗಾನಗರ ಠಾಣೆ ಪೊಲೀಸರು ಐವರನ್ನು ಬಂಧಿಸಿ, ₹61,500 ಮೌಲ್ಯದ 1 ಕೆ.ಜಿ. 230 ಗ್ರಾಂ ಗಾಂಜಾ ಹಾಗೂ ₹400 ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
2026ರ ಅಕ್ಟೋಬರ್ 15ರಂದು ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ತುಂಗಾನಗರ ಪೊಲೀಸ್ ಠಾಣೆಯ ಪಿಎಸ್‌ಐ ರಘುವೀರ್ ಎಂ. ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿದರು. ಈ ವೇಳೆ ಗಾಂಜಾ ಮಾರಾಟದಲ್ಲಿ ತೊಡಗಿರುವ ಆರೋಪದ ಮೇರೆಗೆ ಐವರನ್ನು ಬಂಧಿಸಿ, ಮಾದಕ ವಸ್ತು ಹಾಗೂ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳನ್ನು 24 ವರ್ಷದ ವಸೀಂ ಅಕ್ರಮ್, 21 ವರ್ಷದ ನದೀಮ್ ಅಲಿಯಾಸ್ ನದ್ದು, 20 ವರ್ಷದ ನಾಸೀರ್ ಶೇಖ್, 21 ವರ್ಷದ ಹರ್ಷದ್ ವುಲ್ಲಾ ಅಲಿಯಾಸ್ ಅದ್ದು ಹಾಗೂ 26 ವರ್ಷದ ಶಾಹೀದ್ ಖಾನ್ ಅಲಿಯಾಸ್ ಭಾಷಾ ಖಾನ್ ಎಂದು ಗುರುತಿಸಲಾಗಿದೆ.
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0670/2026ರ ಅಡಿಯಲ್ಲಿ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ (NDPS) ಪ್ರಕಾರ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹಲೋ ಶಿವಮೊಗ್ಗ | ದಿನಪತ್ರಿಕೆ ಮತ್ತು ನ್ಯೂಸ್ ಚಾನಲ್

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.