*ಸ್ಟಿಂಗ್ ಆಪರೇಷನ್ ಮೊದಲ ಕರ್ತೃ, ಪಿತಾಮಹ ಮಧು ಬಂಗಾರಪ್ಪ :ಮಾಜಿ ಸಚಿವ* ಹರತಾಳು ಹಾಲಪ್ಪ ವಾಗ್ದಾಳಿ

*ಹರತಾಳು ಹಾಲಪ್ಪ ಸ್ಟಿಂಗ್ ಆಫರೇಷನ್ ಮೊದಲ ಬಲಿಪಶು, ಸಂತ್ರಸ್ತ ನಾನು*
ಸೊರಬ: ರಾಜ್ಯ ರಾಜಕಾರಣದಲ್ಲಿ ಮುಂಚೂಣಿಯಲ್ಲಿರುವ ಸ್ಟಿಂಗ್ ಆಪರೇಷನ್ ಮೊದಲ ಕರ್ತು, ಮೊದಲ ಪಿತಾಮಹ ಈಗಿನ ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಆರೋಪ ಗಂಭೀರ ಆರೋಪ ಮಾಡಿದರು.
ತಾಲ್ಲೂಕಿನ ಕಮನವಳ್ಳಿ ಗ್ರಾಮದಲ್ಲಿ ಸೋಮವಾರ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ -ಮುಖಂಡರ ಪಕ್ಷ ಸೇರ್ಪಡೆ ಹಾಗೂ ಸಂಘಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇವಸ್ಥಾನದ ಮುಂಭಾಗದಲ್ಲಿ ನಿಂತು ಪ್ರಮಾಣ ಮಾಡಿ ಹೇಳುತ್ತಿದ್ದೇನೆ.  ಸ್ಟಿಂಗ್ ಆಪರೇಷನ್ ಗೆ ಬಲಿಯಾದ ಮೊದಲ ಸಂತ್ರಸ್ತ ನಾನು. ಸುಳ್ಳು ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಯಿತು.  ನಾನು ಸಚಿವನಾಗಿದ್ದಾಗ ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ನನ್ನ ಮೇಲೆ ದೂರು ನೀಡಿದ ವ್ಯಕ್ತಿಗೆ 192 ಬಾರಿ ಅವರ ಮನೆಯಿಂದ ದೂರವಾಣಿ ಕರೆ ಮಾಡಲಾಗಿದೆ. ಎಸ್ ಬಂಗಾರಪ್ಪ ಅವರಂತಹ ನಾಯಕನನ್ನು ಈ ವಿಷಯದಲ್ಲಿ ಬಳಸಿಕೊಂಡಿದ್ದಾರೆ.  

ಮಧು ಬಂಗಾರಪ್ಪನವರ ಅಭಿವೃದ್ಧಿ ಏನಿದ್ದರೂ ಅಹಂಕಾರ, ಠೇಂಕಾರ. ಅಧಿಕಾರದ ಮದದಿಂದ ಮೆರೆಯುತ್ತಾ ಬಾಯಿಗೆ ಬಂದಂತೆ ಇನ್ನೊಬ್ಬರ ಬಗ್ಗೆ ಮಾತನಾಡುವುದನ್ನು ಬಿಟ್ಟು ತಾಲೂಕಿನ ಅಭಿವೃದ್ಧಿ ಮಾಡಿ ತೋರಿಸಲಿ ಎಂದು ಸವಾಲೆಸೆದ ಅವರು, ಕಳೆದ 6 ದಶಕಗಳಿಂದ ಒಂದೇ ಕುಟುಂಬದ ಆಡಳಿತದಿಂದ ತಾಲೂಕಿನ ಅಭಿವೃದ್ಧಿ ಕುಂಠಿತಗೊಂಡಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ತಾಲೂಕಿನ ಜನತೆ ತಕ್ಕ ಪಾಠ ಕಲಿಸಬೇಕು ಎಂದರು.

ಸ್ವಾತಂತ್ರ್ಯ ನಂತರವೂ ಜಮೀನು, ವಸತಿ, ವಿದ್ಯೆ ಇಲ್ಲದೇ ಅರೆ ಹೊಟ್ಟೆಯಲ್ಲಿ ಬದುಕುತ್ತಿದ್ದ ದೇಶದ ದಲಿತರು, ಹಿಂದುಳಿದ ಸಮುದಾಯಗಳಿಗೆ ಧ್ವನಿಯಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಕಸಿತ ಭಾರತದ ಮೂಲಕ 2040ರ ಹೊತ್ತಿಗೆ ಹಸಿವು ಮುಕ್ತ ಹಾಗೂ ಶೋಷಣೆ ಮುಕ್ತ ರಾಷ್ಟ್ರ ನಿರ್ಮಾಣ ಮಾಡಲು ಸಂಕಲ್ಪ ತೊಟ್ಟಿದ್ದಾರೆ ಎಂದರು.

ಬಿಜೆಪಿ ಜಗತ್ತಿನಲ್ಲಿ 14 ಕೋಟಿ ಸಕ್ರಿಯ ಕಾರ್ಯಕರ್ತರನ್ನು ಹೊಂದಿರುವ ಬಹುದೊಡ್ಡ ರಾಜಕೀಯ ಪಕ್ಷವಾಗಿದೆ. ಹಿರಿಯರು ಕಟ್ಟಿ ಬೆಳೆಸಿದ ಪಕ್ಷದಲ್ಲಿ ಸಿದ್ಧಾಂತ ಒಪ್ಪಿ ಬರುವ ಪ್ರತಿಯೊಬ್ಬರಿಗೂ ಸ್ವಾಗತವಿದೆ. ಈ ತಾಲ್ಲೂಕು ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ವಿಪರ್ಯಾಸ. ಕ್ಷೇತ್ರದಲ್ಲಿ ಹುಟ್ಟಿ ಬೆಳೆದ ಐದು ಜನ ಬೇರೆ ಬೇರೆ ಕ್ಷೇತ್ರದಲ್ಲಿ ಶಾಸಕರಾಗಿದ್ದೇವೆ. ಹೀಗೆ ರಾಜಕೀಯ ಪ್ರಜ್ಞೆ ಇದ್ದು ಬೇರೆ ಬೇರೆ ಕ್ಷೇತ್ರದಲ್ಲಿ ಜನಪ್ರತಿನಿಧಿಗಳಾದರೂ ಇಲ್ಲಿ ಶಾಸಕರಾದವರಿಂದ ಮಾತ್ರ ತಾಲ್ಲೂಕಿನ ಅಭಿವೃದ್ದಿ ಮಾಡಲು ಸಾಧ್ಯವಾಗಿಲ್ಲ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಈ ಬಾರಿ ಸೊರಬ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನು ಶಾಸಕರಾಗಿ ಆಯ್ಕೆ ಮಾಡಲು ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕಿದೆ ಎಂದರು.ಒಬ್ಬ ಜನಪ್ರತಿನಿಧಿ ಅಧಿಕಾರದ ಮದದಿಂದ ಮುಖಂಡರನ್ನು ನೋಡಿದಾಗ ಸ್ವಾಭಿಮಾನವಿರುವ ಯಾವುದೇ ವ್ಯಕ್ತಿ ಅವರ ಜೊತೆಗೆ ಇರುವುದಿಲ್ಲ. ರುದ್ರಪ್ಪ ಕಡೇರ್ ಅವರು ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಸೇರಿದ್ದು ಸಂತಸವನ್ನುಂಟು ಮಾಡಿದೆ ಎಂದ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದರು.

ಮಾಜಿ ಸಚಿವ ಬಿ.ಸಿ.ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಮಣ್ಣ ಮಾತನಾಡಿ, ಮಾತನಾಡಿದರು. 

ಈ ಸಂದರ್ಭದಲ್ಲಿ ನೂರಾರು ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಎಂಎಡಿಬಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ತಾಲ್ಲೂಕು ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಮಾಚಿದೇವ ಮಡಿವಾಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರಾಜು ಎಂ ತಲ್ಲೂರು, ಮುಖಂಡರಾದ ಡಾ|| ಜ್ಞಾನೇಶ್ ಹೆಚ್ ಈ, ಟಿ.ಡಿ ಮೇಘರಾಜ್, ಗೀತಾ ಮಲ್ಲಿಕಾರ್ಜುನ, ಸುಧಾ ಶಿವಪ್ರಸಾದ್, ತಾಪಂ ಮಾಜಿ ಅಧ್ಯಕ್ಷ ರುದ್ರಪ್ಪ ಕಡ್ಲೇರ್, ಹರಿಕೃಷ್ಣ, ಶಿವಕುಮಾರ್ ಕಡಸೂರು ಸೇರಿದಂತೆ ಹಲವರು ಇದ್ದರು.

*“ಮಧು ಬಂಗಾರಪ್ಪನವರ ಅಭಿವೃದ್ಧಿ ಏನಿದ್ದರೂ ಅಹಂಕಾರ, ಠೇಂಕಾರ. ಅಧಿಕಾರದ ಮದದಿಂದ ಮೆರೆಯುವುದನ್ನು ಬಿಟ್ಟು ತಾಲೂಕಿನ ಅಭಿವೃದ್ಧಿ ಮಾಡಿ ತೋರಿಸಲಿ.  ಅವರ ಇತಿಹಾಸ ನನ್ನ ಬಳಿ ಇದೆ.*
ಹರತಾಳು ಹಾಲಪ್ಪ, ಮಾಜಿ ಸಚಿವ

*“ನಾನು ಸಚಿವನಾಗಿದ್ದಾಗ ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ನನ್ನ ಮೇಲೆ ದೂರು ನೀಡಿದ ವ್ಯಕ್ತಿಗೆ 192 ಬಾರಿ ಅವರ ಮನೆಯಿಂದ ದೂರವಾಣಿ ಕರೆ ಮಾಡಲಾಗಿದೆ.*
*ಹರತಾಳು ಹಾಲಪ್ಪ, ಮಾಜಿ ಸಚಿವ*

*“ಅಹಂಕಾರ, ಠೇಂಕಾರ. ಅಧಿಕಾರದ ಮದದಿಂದ ಮೆರೆಯುತ್ತಾ ಬಾಯಿಗೆ ಬಂದಂತೆ ಇನ್ನೊಬ್ಬರ ಬಗ್ಗೆ ಮಾತನಾಡುವುದನ್ನು ಬಿಟ್ಟು ತಾಲೂಕಿನ ಅಭಿವೃದ್ಧಿ ಮಾಡಿ ತೋರಿಸಲಿ*
*ಹರತಾಳು ಹಾಲಪ್ಪ, ಮಾಜಿ ಸಚಿವ*

*“ಒಬ್ಬ ಜನಪ್ರತಿನಿಧಿ ಅಧಿಕಾರದ ಮದದಿಂದ ಮುಖಂಡರನ್ನು ನೋಡಿದಾಗ ಸ್ವಾಭಿಮಾನವಿರುವ ಯಾವುದೇ ವ್ಯಕ್ತಿ ಅವರ ಜೊತೆಗೆ ಇರುವುದಿಲ್ಲ.*
*ಬಿ.ವೈ ರಾಘವೇಂದ್ರ, ಸಂಸದ*

*“ಎಸ್ ಬಂಗಾರಪ್ಪನವರ ಹೆಸರಿನಲ್ಲಿ ಗೆದ್ದು ಅಧಿಕಾರ ಪಡೆದವರಿಗೆ ತಾಲೂಕಿನ ಅಭಿವೃದ್ಧಿ ಬೇಕಿಲ್ಲ.  ತಮಗೆ ಮತ ನೀಡಿ ಗೆಲ್ಲಿಸಿದ ಗ್ರಾಮಗಳಿಗೆ ಸಚಿವರು ಇಂದಿಗೂ ಭೇಟಿ ನೀಡಿಲ್ಲ. ಅವರ ವ ರ್ತನೆಯಿಂದ ಬೇಸತ್ತು ಬಿಜೆಪಿ ಸೇರಿದ್ದೇವೆ.*
*ರುದ್ರಪ್ಪ ಕಡ್ಲೇರ್, ತಾ.ಪಂ ಮಾಜಿ ಅಧ್ಯಕ್ಷ*


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.