ರಾಗಿಗುಡ್ಡದಲ್ಲಿ ಪಾರ್ಕ್ ನಿರ್ಮಾಣಕ್ಕೆ ಮನವಿ: ಸೂಡಾ ಅಧ್ಯಕ್ಷ ಮಧುಸೂಧನ್ ಸಿ.ಜಿ. ಅವರಿಗೆ ಶಾಂತಿನಗರ ನಾಗರಿಕ ಹಕ್ಕುಗಳ ವೇದಿಕೆ ಮನವಿ

ಶಿವಮೊಗ್ಗ: ಶಾಂತಿನಗರ ಪ್ರದೇಶದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಪಾರ್ಕ್ ನಿರ್ಮಾಣ ಮಾಡಿಕೊಡುವಂತೆ ಆಗ್ರಹಿಸಿ ಶಾಂತಿನಗರ ನಾಗರಿಕ ಹಕ್ಕುಗಳ ವೇದಿಕೆ ವತಿಯಿಂದ ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ನೂತನ ಅಧ್ಯಕ್ಷರಾದ ಸಿ.ಜಿ. ಮಧುಸೂಧನ್ ಅವರಿಗೆ ಮನವಿ ಸಲ್ಲಿಸಲಾಯಿತು.

ವೇದಿಕೆಯ ಅಧ್ಯಕ್ಷ ಸಯ್ಯದ್ ಮುಜಿಬುಲ್ಲ ಅವರ ನೇತೃತ್ವದಲ್ಲಿ ಸೂಡಾ ಅಧ್ಯಕ್ಷರನ್ನು ಭೇಟಿಯಾದ ಮುಖಂಡರು, ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಶುಭಾಶಯಗಳನ್ನು ಕೋರಿದರು. ಇದೇ ಸಂದರ್ಭದಲ್ಲಿ ಶಾಂತಿನಗರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸುಸಜ್ಜಿತ ಪಾರ್ಕ್ ನಿರ್ಮಿಸುವಂತೆ ಮನವಿ ಮಾಡಿದರು.

ಶಾಂತಿನಗರದಲ್ಲಿ ಸಾರ್ವಜನಿಕರಿಗೆ ವಾಯುವಿಹಾರ ಹಾಗೂ ವಿಶ್ರಾಂತಿಗೆ ಸೂಕ್ತ ಸ್ಥಳದ ಕೊರತೆಯಿದ್ದು, ಮಕ್ಕಳಿಗೆ ಆಟವಾಡಲು ಕೂಡ ಪಾರ್ಕ್ ಅಗತ್ಯವಾಗಿದೆ. ಹೀಗಾಗಿ ಸ್ಥಳೀಯ ನಿವಾಸಿಗಳ ಅನುಕೂಲಕ್ಕಾಗಿ ಪಾರ್ಕ್ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.

ಮನವಿ ಸ್ವೀಕರಿಸಿದ ಸೂಡಾ ಅಧ್ಯಕ್ಷ ಸಿ.ಜಿ. ಮಧುಸೂಧನ್ ಅವರು ವಿಷಯವನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್.ಎಸ್., ಕಾರ್ಮಿಕ ಮುಖಂಡ ಅಪ್ಸರ್ ಭಾಷಾ, ಶಾಂತಿನಗರದ ಮುಖಂಡರಾದ ಪ್ರಸನ್ನಕುಮಾರ್, ನೂರುಲ್ಲಖಾನ್, ಕರವೇಯ ಸಾದಿಕ್, ಸುಭಾನ್, ಸಯ್ಯದ್ ಶಫಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.