ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರ ಮನೆಯಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ!
ಶಿವಮೊಗ್ಗ: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರ ಮನೆಯಲ್ಲಿ ಅವರು ಪತ್ನಿ ಹಾಗೂ ಪುತ್ರನೊಂದಿಗೆ ಗಣಪತಿಯನ್ನು ತಮ್ಮ ಮನೆಗೆ ಭಕ್ತಿಭಾವದಿಂದ ಬರಮಾಡಿಕೊಂಡಿದ್ದಾರೆ.
ಗಣಪತಿಯನ್ನು ಮನೆಗೆ ಬರಮಾಡಿಕೊಳ್ಳುವ ಈ ಶುಭ ಸಂದರ್ಭದಲ್ಲಿ ಪ್ರತಿಯೊಬ್ಬರ ಬದುಕಿನಲ್ಲಿರುವ ಅಡೆತಡೆಗಳು ದೂರವಾಗಿ, ಪ್ರತಿಯೊಂದು ಕುಟುಂಬದಲ್ಲೂ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಬಿವೈಆರ್ ಅವರು ಪ್ರಾರ್ಥಿಸಿದ್ದಾರೆ.
ಗೌರಿ ದೇವಿಯ ಮಾತೃಶಕ್ತಿ ಹಾಗೂ ಗಣೇಶನ ಜ್ಞಾನ-ವಿವೇಕ ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಲಿ. ಸಮಾಜದ ಒಳಿತಿಗಾಗಿ ಇನ್ನಷ್ಟು ಶ್ರದ್ಧೆಯಿಂದ ಕೆಲಸ ಮಾಡುವ ಸಂಕಲ್ಪವನ್ನು ಈ ಹಬ್ಬ ನಮಗೆ ನೀಡಲಿ ಎಂದು ಸಚಿವರು ಆಶಿಸಿದ್ದಾರೆ.
ನಾಡಿನ ಸಮಸ್ತ ಜನತೆಗೆ ಸಂಸ ಬಿ.ವೈ.ರಾಘವೇಂದ್ರ ಅವರು ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.
ಹಲೋ ಶಿವಮೊಗ್ಗ — ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಚಾನಲ್ ಅನ್ನು Subscribe ಮಾಡಿ, Like ಮತ್ತು Share ಮಾಡಿ.

Leave a Comment