ನಿವೃತ್ತ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಮಂಜಪ್ಪ ಎಂ.ಎಸ್. ನಿಧನ
1953ರ ಜೂನ್ 6ರಂದು ಜನಿಸಿದ್ದ ಮಂಜಪ್ಪ ಎಂ.ಎಸ್. ಅವರು 1976ರ ಮೇ 17ರಂದು ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದರು. ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ, 2009ರ ಜೂನ್ 30ರಂದು ಸೇವೆಯಿಂದ ನಿವೃತ್ತರಾಗಿದ್ದರು.
ನಿವೃತ್ತಿಯ ನಂತರ ಅವರು ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿದ್ದರು. ಸಂಘದ ನೋಂದಣಿ ಸಂಖ್ಯೆ 1174 ಹಾಗೂ AY/900/24 ಸಂಖ್ಯೆಯನ್ನು ಹೊಂದಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೆಪ್ಟೆಂಬರ್ 26ರಂದು ರಾತ್ರಿ 9.45ರ ಸುಮಾರಿಗೆ ಬೆಂಗಳೂರಿನ ನಾರಾಯಣಹೃದಯಾಲಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಂಪಳ್ಳಿ ಮೂಲದವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ತಮ್ಮ ಮಗಳ ಮನೆಯಲ್ಲಿ ವಾಸವಾಗಿದ್ದರು.
ಮಂಜಪ್ಪ ಎಂ.ಎಸ್. ಅವರು ಪತ್ನಿ ಜಯಲಕ್ಷ್ಮಿ, ಪುತ್ರಿಯರಾದ ಅನ್ನಪೂರ್ಣ, ವೀಣಾ ಮತ್ತು ಪ್ರತಿಭಾ, ಪುತ್ರ ಪ್ರವೀಣ್ ಕುಮಾರ್, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗ ಮತ್ತು ಸ್ನೇಹಿತರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಇಂದು ಬೆಂಗಳೂರಿನಲ್ಲಿಯೇ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹಲೋ ಶಿವಮೊಗ್ಗ ಪ್ರಾರ್ಥಿಸುತ್ತದೆ.

Leave a Comment