ನಗರದ ಚಾಲುಕ್ಯನಗರದ ಕೆರೆಯಲ್ಲಿ ಗಣಪತಿ ವಿಸರ್ಜನೆಗೆ ಅವಕಾಶ.
ಶಿವಮೊಗ್ಗ: ನಗರದ ಚಾಲುಕ್ಯ ನಗರದ ಕೆರೆಯಲ್ಲಿ ಮಹಾನಗರ ಪಾಲಿಕೆಯಿಂದ ವ್ಯವಸ್ಥಿತವಾಗಿ ಗಣಪತಿ ವಿಸರ್ಜನೆಗೆ ಅನುಕೂಲ ಮಾಡಿದ್ದಾರೆ.
ಕೆರೆಯ ಮುಂಬಾಗ ಸ್ವಚ್ಛತೆಗೊಳಿಸಿ, ರಕ್ಷಕರು, ಮಾರ್ಗದರ್ಶಕರನ್ನು ನಿಯೋಜಿಸಿದ್ದಾರೆ.
ಕೆರೆಯಲ್ಲಿ ಹೂವು, ಹಾರ ಇನ್ನಿತರೆ ಪತ್ರೆಗಳನ್ನು ಕೆರೆಗೆ ಹಾಕದಂತೆ ಮಾರ್ಗದರ್ಶಿಗಳು ತಿಳಿಸುತ್ತ ದಡದಲ್ಲಿರುವ ಚೀಲಕ್ಕೆ ತುಂಬಿಸಿ ಕೆರೆಯ ಸ್ವಚ್ಛತೆಯನ್ನು ಕಾಪಾಡುವಲ್ಲಿ ಮುಂದಾಲೋಚನೆ ಮಾಡಿದ್ದಾರೆ.
ಗಣಪತಿ ನೀರಿನೊಳಗೆ ಬಿಡುವವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದು ಸಾರ್ವಜನಿಕರ ಪ್ರಶಂಸೆಗೆ ಒಳಗಾಗಿದ್ದಾರೆ.
ಈ ಕಾರ್ಯದಲ್ಲಿ ಮಹಾನಗರಪಾಲಿಕೆ ವತಿಯಿಂದ ಅಣ್ಣಯ್ಯ, ಪ್ರಕಾಶ್ ಇ, ಮೆಸ್ತ್ರಿ ರವಿ ಕೆ ಇವರು ಹೆಲ್ತ್ ಇನಸ್ಪೆಕ್ಟರ್ ಸುರೇಶ್ ರವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿತ್ತಿದ್ದಾರೆ.

Leave a Comment