ಕೃಷ್ಣ ಜನ್ಮಾಷ್ಟಮಿ ಸಂಭ್ರಮ | ಕೃಷ್ಣನ ವೇಷದಲ್ಲಿ ಮಿಂಚಿದ ಪುಟಾಣಿ ಲೋಕಾಂಶ್! ಮತ್ತು ಹನ್ವಿಕಾ !

ಶಿವಮೊಗ್ಗ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದೇಶದಾದ್ಯಂತ ಸಂಭ್ರಮ ಮನೆಮಾಡಿದ್ದು, ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಕ್ರಿಯೇಟಿವ್ ಕಿಡ್ಡೋಸ್ ಶಾಲೆಯಲ್ಲಿ ಮತ್ತು Junior Genius Montessori House of children ಶಾಲೆಯಲ್ಲಿ ಪುಟಾಣಿ ಮಕ್ಕಳಿಗಾಗಿ ವಿಶೇಷ ವೇಷಭೂಷಣ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಶಾಲೆಯ LKG ತರಗತಿಯ ವಿದ್ಯಾರ್ಥಿ ಲೋಕಾಂಶ್, ಮತ್ತು 2 1/2 ವರ್ಷದ ಪುಟಾಣಿ ಹನ್ವಿಕಾ ಶ್ರೀಕೃಷ್ಣನ ವೇಷ ಧರಿಸಿ ಎಲ್ಲರ ಗಮನ ಸೆಳೆದರು.
ಕೃಷ್ಣನ ವೇಷದಲ್ಲಿ ಮುದ್ದಾಗಿ ಕಾಣಿಸಿಕೊಂಡ ಲೋಕಾಂಶ್ ಮತ್ತು ಹನ್ವಿಕಾ  ಪುಟಾಣಿ ಕೃಷ್ಣನಂತೆ ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದು, ಶಿಕ್ಷಕರು ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರನಾದರು.

ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಧಾರ್ಮಿಕ ಆಚರಣೆಗಳು ಹಾಗೂ ಹಬ್ಬಗಳ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಇಂತಹ ವೇಷಭೂಷಣ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಶಾಲೆಯ ವತಿಯಿಂದ ತಿಳಿಸಲಾಯಿತು.

ಲೋಕಾಂಶ್ ಮತ್ತು ಪುಟಾಣಿ ಹನ್ವಿಕಾ ಅವರ ತಾಯಿ ಮೋನಿಕ ಹಾಗೂ ತಂದೆ ಸುಜಯ್. ಇವರು ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ವಾಸವಾಗಿದ್ದಾರೆ.

🌸 ಕೃಷ್ಣನ ವೇಷದಲ್ಲಿ ಮಿಂಚಿದ ಪುಟಾಣಿ ಲೋಕಾಂಶ್‌ ಮತ್ತು ಹನ್ವಿಕಾ ಮುದ್ದಾದ ಪ್ರದರ್ಶನ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದಿತು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.