ದೇಶ ಮುನ್ನಡೆಸಿದ ಸಮರ್ಥ ನಾಯಕ ಮೋದಿ: ಬಿ.ವೈ.ವಿಜಯೇಂದ್ರ ಬಣ್ಣನೆ

ನಮೋ ಅವರಿಂದಾಗಿ ಜಾಗತಿಕ ಶಕ್ತಿಯಾಗಿ ಬೆಳೆದ ಭಾರತ
ಶಿವಮೊಗ್ಗ: ಭಾರತಕ್ಕೆ ಉಜ್ವಲವಾದ ಭವಿಷ್ಯವಿದೆ. ಭ್ರμÁ್ಟಚಾರರಹಿತ ಆಡಳಿತ ನೀಡಬಹುದು, ಅಭಿವೃದ್ಧಿಯಲ್ಲಿ ವಿಶ್ವಭೂಪಟದಲ್ಲಿ ಭಾರತ ಗುರುತಿಸಿಕೊಳ್ಳುವಂತೆ ಮಾಡಬಹುದು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಜೀ ಅವರು ನಿರೂಪಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ. 
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ದೀಪ ಪ್ರಜ್ವಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವನಾಯಕ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ. ಅವರ ಶ್ರೇಯಸ್ಸಿಗೆ ಹಾರೈಸಿ ಕೋಟ್ಯಂತರ ಜನರ ಆಶೀರ್ವಾದ ರೂಪದಲ್ಲಿ ದೀಪ ಪ್ರಜ್ವಲನ ಕಾರ್ಯಕ್ರಮವನ್ನು ಅವರ ಜನ್ಮದಿನವಾದ ಇಂದು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. 
ಭಾರತ ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಮೋದಿ ಅವರೇ ಕಾರಣ. ದೇಶವೊಂದು ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವ ಸಾಧನೆ ಮಾಡಿದರು. ಗುಜರಾತ್ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಮೋದಿ ಅವರು ಇಡೀ ದೇಶಕ್ಕೆ ಗುಜರಾತ್ ಮಾದರಿಯನ್ನು ಪರಿಚಯಿಸಿದರು. ಇಡೀ ದೇಶಕ್ಕೆ ಹೊಸ ಭರವಸೆ ತಂದರು ಎಂದು ಪ್ರಶಂಸಿಸಿದರು. 
ಅಭಿವೃದ್ಧಿಯ ಹರಿಕಾರ...

ದೇಶದ ಪ್ರಧಾನಿಗಳಾಗಿ ಇಂದಿನವರೆಗೆ ಸ್ವಚ್ಛ, ಭ್ರμÁ್ಟಚಾರ ರಹಿತ ಆಡಳಿತ ನೀಡಿದರು. ಹಿಂದಿನ ಅನೇಕ ಸರ್ಕಾರಗಳು ತಮ್ಮ ಯೋಜನೆಗಳನ್ನು ಪೂರೈಸಲು ಹಲವಾರು ವರ್ಷಗಳನ್ನು ತೆಗೆದುಕೊಳ್ಳುತಿದ್ದವು. ಮೋದಿ ಅವರ ಅವಧಿಯಲ್ಲಿ ಕ್ರಿಯಾಶೀಲ ಸಂಸದರಾದ ಬಿ.ವೈ.ರಾಘವೇಂದ್ರ, ಅಭಿವೃದ್ಧಿಯ ಕನಸು ಕಂಡಿದ್ದ ಬಿ.ಎಸ್.ಯಡಿಯೂರಪ್ಪ ಅವರಿಂದಾಗಿ ಈ ವಿಮಾನನಿಲ್ದಾಣ ಸಾಕಾರವಾಯಿತು. ಮೋದಿ ಅವರೇ ಇದಕ್ಕೆ ಶಂಕುಸ್ಥಾಪನೆ ಮಾಡಿ ಉದ್ಘಾಟನೆ ಸಹ ಮಾಡಿದರು. ಸಿಗಂಧೂರು ಸೇತುವೆ ಸಹ ಲೋಕಾರ್ಪಣೆಯಾಗಿದೆ ಎಂದು ಹೇಳಿದರು. 

ಸಮರ್ಥವಾಗಿ ಮುನ್ನಡೆಸಿದ ನಾಯಕ...

ಕೋವಿಡ್ ಸೋಂಕು, ಅಮೆರಿಕ- ಇರಾನ್ ಯುದ್ಧ, ಉಕ್ರೇನ್ ಮತ್ತು ರμÁ್ಯ ನಡುವಿನ ಯುದ್ಧ ಮುಂತಾದ ಜಾಗತಿಕ ಸವಾಲಿನ ನಡುವೆಯೂ ಭಾರತವನ್ನು ಸಮರ್ಥವಾಗಿ ಮುನ್ನಡೆಸಿದರು. ಭಾರತ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದರು. 

ಬದ್ಧತೆಯ ನಾಯಕ ಮೋದಿ...

ಮೋದಿ ಅವರು ತಮ್ಮ ತಾಯಿ ನಿಧನರಾದಾಗ ತೋರಿದ ಬದ್ಧತೆ ಇಡೀ ವಿಶ್ವಕ್ಕೆ ತಿಳಿದಿದೆ. ದೇಶದಲ್ಲಿ ಪಕ್ಷಾತೀತವಾಗಿ, ಜಾತ್ಯತೀತವಾಗಿ ಮೋದಿ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದರಿಂದ ಅವರ ಜನಪ್ರಯತೆ ದಿನೇದಿನೇ ಹೆಚ್ಚಳವಾಗಿದೆ ಎಂದು ವಿಶ್ಲೇಷಿಸಿದರು. 
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬುದು ಮೋದಿ ಅವರ ಮಂತ್ರ. ಯುವಶಕ್ತಿಯ ಮೇಲೆ ವಿಶ್ವಾಸ ಇಟ್ಟಿರುವ ಮೋದಿ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ನೀಡುತ್ತಿದ್ದಾರೆ. ವಿಶ್ವನಾಯಕ ಮೋದಿ ಅವರ ಸ್ವಾರ್ಥರಹಿತ ಸಾರ್ವಜನಿಕ ಜೀವನವನ್ನು ಸ್ಮರಿಸಲು ಆಶೀರ್ವಾದದ ದೀಪ ಬೆಳಗಿಸಲಾಗುತ್ತಿದೆ. ಒಂದು ತಿಂಗಳು ಸೇವಾ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಇಡೀ ವಿಶ್ವವೇ ನರೇಂದ್ರ ಮೋದಿ ಅವರ ನಾಯಕತ್ವದ ಕಡೆ ನೋಡುತ್ತಿದೆ. ಅವರ ಶಕ್ತಿ ಇನ್ನೂ ಹೆಚ್ಚಲಿ. ದೇಶವನ್ನು ಅಭಿವೃದ್ಧಿಯಲ್ಲಿ ಇನ್ನೂ ಹೊಸ ಎತ್ತರಕ್ಕೆ ಕೊಂಡೊಯ್ಯುವಂತಾಗಲಿ ಎಂದು ತಿಳಿಸಿದರು. ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ, ಮಾಜಿ ಶಾಸಕರಾದ ಕುಮಾರಸ್ವಾಮಿ, ಅಶೋಕ್, ಪಕ್ಷದ ಜಿಲ್ಲಾ ಅಧ್ಯಕ್ಷರು, ಪಕ್ಷದ ಮುಖಂಡರಾದ ವೆಂಕಟೇಶ್ ನಾಯಕ್, ಶಿವಕುಮಾರ್, ವಿರೂಪಾಕ್ಷ, ನಾಗರಾಜು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.







ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.