ಮಾನವನ ದುರಾಸೆಯೇ ಪರಿಸರ ನಾಶವಾಗಲು ಕಾರಣ : ಪರಿಸರ ಸಂರಕ್ಷಕಿ ರೂಪ ದೀಪಕ್
ಸಾಗರ : ಕೃಷ್ಣಜನ್ಮಾಷ್ಟಮಿ ಹಬ್ಬದ ಅಂಗವಾಗಿ ಪುಟಾಣಿ ಮಕ್ಕಳಿಗೆ ರಾಧಾ ಕೃಷ್ಣರ ವೇಷ ಸ್ಪರ್ಧೆಯನ್ನು ಗಾಂಧಿನಗರದ ಎಸ್.ಎಂ.ಇ ಕಾನ್ವೆಂಟ್ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಲಾಗಿತ್ತು.
ರಾಧಾ - ಕೃಷ್ಣರ ವೇಷದಲ್ಲಿ ಪುಟಾಣಿ ಮಕ್ಕಳು ಕಣ್ಮನ ಸೆಳೆದರು.ವಿವಿಧ ರೀತಿಯ ವೇಷ ಧರಿಸಿ ಮಕ್ಕಳು ಸಂತಸ ಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಪರಿಸರ ಸಂರಕ್ಷಕಿ ರೂಪ ದೀಪಕ್ ಮಾತನಾಡಿ, ಮನುಷ್ಯನ ದುರಾಸೆಯಿಂದಾಗಿ ಪರಿಸರ ನಾಶವಾಗುತ್ತಿದೆ.ಇದರಿಂದಾಗಿ ಪ್ರಕೃತಿ ವಿಕೋಪಗಳಂತಹ ಅವಘಡಗಳು ಪದೇ ಪದೇ ಸಂಭವಿಸುತ್ತಿವೆ ಎಂದು ಹೇಳಿದರು.
ನಮ್ಮ ಪೂರ್ವಿಕರು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು. ಇದರಿಂದ ಪರಿಸರ ಶುದ್ಧವಾಗಿತ್ತು. ಆದರೆ, ಇಂದು ಮನಷ್ಯನ ಅತಿ ಆಸೆಯಿಂದ ಪರಿಸರ ನಾಶವಾಗುತ್ತಿದೆ.ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸುವಂತಹ ಕಾರ‌್ಯ ಇಂದು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಇಮ್ರಾನ್ ಸಾಗರ್ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಪರಿಸರ ಉಳಿಸುವಲ್ಲಿ ಶ್ರಮವಹಿಸುತ್ತಿರುವ ರೂಪ ದೀಪಕ್ ಅವರನ್ನು ಸನ್ಮಾನಿಸಿ,ಗೌರವಿಸಲಾಯಿತು.
ವೇದಿಕೆಯಲ್ಲಿ ನಿವೃತ್ತ ಉದ್ಯೋಗಿ ಹಿರೇಮಠ್,ಶಿಕ್ಷಕಿಯರಾದ ಜುಲ್ಫಿಯ,ಲಕ್ಷ್ಮಿ ಹಾಜರಿದ್ದರು.
ಜ್ಯೋತಿ ಪ್ರಾರ್ಥಿಸಿದರು.ಸಫಾ ಸ್ವಾಗತಿಸಿದರು.ಪ್ರಿಯಾಂಕ ವಂದಿಸಿದರು.ಅನ್ನಜ್ಞಾನ ಮಣಿ ನಿರೂಪಿಸಿದರು.

Leave a Comment