ಭಕ್ತಿ ಶ್ರದ್ದೆಯಿಂದ ಮಾರಿಕಾಂಬೆಯನ್ನು ಆರಾದಿಸಿ/ ಅನುಗ್ರಹ ಸಿಗುತ್ತೆ: ಶ್ರೀ ಪ್ರಸನ್ನನಾಥ ಸ್ವಾಮೀಜಿ

ಕಲ್ಲೂರು ಮಂಡ್ಲಿಯ ಶ್ರೀ ಮಾರಿಕಾಂಬಾ ದೇಗುಲದ ಅಷ್ಟಬಂಧ ಪ್ರತಿಷ್ಟೆಯಲ್ಲಿ ಆದಿಚುಂಚನಗಿರಿ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ
ಶಿವಮೊಗ್ಗ,:ಭಯ, ಭಕ್ತಿ  ಹಾಗೂ ಶ್ರದ್ಧೆಯ ಆರಾಧನೆಯಿಂದ ಭಗವಂತ ನಮ್ಮನ್ನು ಸದಾ ಅನುಗ್ರಹಿಸಿ ಆಯುರಾರೋಗ್ಯ ಕಲ್ಪಿಸುತ್ತಾನೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಇಂದಿಲ್ಲಿ ತಿಳಿಸಿದರು.
ಅವರಿಂದು ಮಧ್ಯಾಹ್ನ ಶಿವಮೊಗ್ಗ ತಾಲೂಕು ಹಾಯ್ ಹೊಳೆ ಅಂಚೆಯ ಕಲ್ಲೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿತವಾದ ಮಾರಿಕಾಂಬ ದೇವಿಯ ಸ್ಥಿರ ಮೂರ್ತಿ ಅಷ್ಟ ಬಂದ ಪ್ರತಿಷ್ಠೆ ಹಾಗೂ 48 ಸಹಿತ ಬ್ರಹ್ಮ ಕಳಶೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಶ್ರೀಗಳನ್ನು ಆರಾಧಿಸುವ ಜೊತೆಗೆ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. 

ಮಾರಿಕಾಂಬ ತಾಯಿ ಅನುಗ್ರಹಕ್ಕೆ ನಮ್ಮಲ್ಲಿ ನಂಬಿಕೆಯ ಮನಸ್ಸಿರಬೇಕು. ನಂಬಿಕೆ ಶ್ರದ್ದೆಯ ಭಕ್ತಿ ಖಂಡಿತವಾಗಿಯೂ ತಾಯಿಯ ಕೃಪೆಗೆ ಪಾತ್ರವಾಗುತ್ತದೆ ಎಂದು ಹೇಳಿದರು.

ದೇವಸ್ಥಾನದ ಉದ್ಘಾಟನೆ ಅಥವಾ ಪ್ರತಿಷ್ಠಾಪನೆ ಮಾತ್ರ ಮುಖ್ಯವಾಗುವುದಿಲ್ಲ. ದೇವಿಯ ನಿತ್ಯದ ಆರಾದನೆ ಜೊತೆಗೆ ಎಲ್ಲರಲ್ಲೂ ತಾಯಿಯ ಸೇವಾ ಮನೋಭಾವ ಇರಬೇಕು. ನಿತ್ಯ ತಾಯಿಗೆ ಕೈಲಾದ ಭಕ್ತಿಯನ್ನು ನೀಡಬೇಕು. ಆಗ ಇಡೀ ಸಮಾಜ ಶಾಂತವಾಗಿ ಸಮೃದ್ಧಿಯಾಗಿ ಇರಲು ಸಾಧ್ಯ ಎಂದರು. 

ನಾವು ಮೊದಲು ಮಾತೃದೇವೋಭವ ಎಂದು ಹೇಳುತ್ತೇವೆ. ಹಾಗಾಗಿ ತಾಯಿಗೆ ಮೊದಲ ಆದ್ಯತೆ ಇದೆ ಎಂದ ಅವರು ನಂತರ ಪಿತೃದೇವೋಭವ, ಆಚಾರ್ಯದೇವೋಭವ ಹಾಗೂ ಅತಿಥಿ ದೇವೋ ಭವ ಎಂದು ಹೇಳುತ್ತೇವೆ. ತಾಯಿಗೆ ಮೊದಲ ಸ್ಥಾನ ಇದೆ. ಮಾರಿಕಾಂಬೆಯ ಅನುಗ್ರಹ ನಿಮಗೆಲ್ಲರಿಗೂ ದೊರಕಲಿ ಎಂದು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರ ಭಕ್ತ ಬಳಗದ ಕೆ.ಇ. ಕಾಂತೇಶ್, ಪತ್ರಕರ್ತ ಗಜೇಂದ್ರಸ್ವಾಮಿ ಹಾಗೂ ವಿವಿಧ ಗಣ್ಯರು ಆಗಮಿಸಿ ದ್ದರು. 

ಸುಬ್ರಹ್ಮಣ್ಯ ಹೆಬ್ಬಾರ್ ಅವರ ಪೌರೋಹಿತ್ಯದಲ್ಲಿ ಈ ಮಹತ್ಕಾರ್ಯವನ್ನು ಮಾಡಲಾಗಿದ್ದು, ಉದ್ಯಮಿ ಸುರೇಶಸ ಕೆ. ಬಾಳೆಗುಂಡಿಉತ್ಸವ ಮೂರ್ತಿಯ ಸೇವಾಕರ್ತರಾಗಿದ್ದಾರೆ.

 ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಡಿ. ಮೂರ್ತಿ ಕಾರ್ಯದರ್ಶಿ ಮನು ಕುಮಾರ್, ಶ್ರೀಧರ್, ಗೌರವಾಧ್ಯಕ್ಷ ರಾಗಿ ರಾಘವೇಂದ್ರ ಪ್ರಮುಖರಾದ ಶಿವರಾಜ್ ಡಿ ಸತೀಶ್ ಹಾಗೂ ನಿರ್ದೇಶಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.