​ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 17 ರವರೆಗೆ ಸೇವಾ ಸಂಕಲ್ಪ ಅಭಿಯಾನ​ ನಡೆಯಲಿದೆ.: ಸಂಸದ B.Y.ರಾಘವೇಂದ್ರ

​ಶಿವಮೊಗ್ಗ:ಸೆಪ್ಟೆಂಬರ್ 17 ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನ.​ಸೆಪ್ಟೆಂಬರ್ 25: ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನ.​ಅಕ್ಟೋಬರ್ 2: ಗಾಂಧಿ ಜಯಂತಿ.
​ಅಕ್ಟೋಬರ್ 7: ನರೇಂದ್ರ ಮೋದಿ ಅವರು ಸರ್ಕಾರಿ ಮುಖ್ಯಸ್ಥರಾಗಿ (2001ರ ಅಕ್ಟೋಬರ್ 7 ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ನಂತರ ಪ್ರಧಾನಿಯಾಗಿ) ಸತತವಾಗಿ 25 ವರ್ಷಗಳ ಕಾಲ ಸೇವೆ ಪೂರ್ಣಗೊಳಿಸಿದ ಐತಿಹಾಸಿಕ ದಿನವಾಗಿದೆ.
​ಆಗಾಗಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 17 ರವರೆಗೆ ಒಂದು ತಿಂಗಳ ಕಾಲ ಸೇವಾ ಸಂಕಲ್ಪ ಅಭಿಯಾನ ನಡೆಯಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಇಂದು ಬೆಳಿಗ್ಗೆ ಶಿವಮೊಗ್ಗ ನಗರದ ಬಿಜೆಪಿ ಕಾರ್ಯಾಲಯ ದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

​ಸಂಘಟನೆ: ರಾಷ್ಟ್ರೀಯ ಅಧ್ಯಕ್ಷರ ಕರೆಯಂತೆ ದೇಶಾದ್ಯಂತ, ರಾಜ್ಯ, ಜಿಲ್ಲೆ, ಮಂಡಲ ಹಾಗೂ ಬೂತ್ ಮಟ್ಟದಲ್ಲಿ ವಿವಿಧ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಮುಖ್ಯ ಕಾರ್ಯಕ್ರಮಗಳು ಮತ್ತು ಸಾಧನೆಗಳು

​ಆಶೀರ್ವಾದ ದೀಪ: ಸೆಪ್ಟೆಂಬರ್ 17 ರಂದು ಸಂಜೆ 7 ಗಂಟೆಗೆ ಕಾರ್ಯಕರ್ತರು ಮತ್ತು ಸರ್ಕಾರದ ಯೋಜನೆಗಳ ಫಲಾನುಭವಿಗಳು ತಮ್ಮ ಮನೆಗಳ ಮುಂದೆ ಅಥವಾ ಆಯಾ ವಾರ್ಡ್‌ಗಳಲ್ಲಿ ದೀಪ ಬೆಳಗಿಸಿ, ಪ್ರಧಾನಿಯವರಿಗೆ ಶುಭ ಹಾರೈಸಿ ಆಶೀರ್ವಾದ ಕೋರಲಿದ್ದಾರೆ.

ಸೆ.17ರಂದು ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಮನೆಗಳ ಮುಂದೆ ‘ಆಶೀರ್ವಾದದ ದೀಪ’ ಬೆಳಗಿಸುವ ಕಾರ್ಯಕ್ರಮ ನಡೆಯಲಿದೆ ಎಂದರು

ಸೆ.18ರಿಂದ 24ರವರೆಗೆ ಸ್ವಚ್ಛತಾ ಅಭಿಯಾನ, ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ಸೈಕಲ್ ಜಾಥಾ ಹಾಗೂ ಬೀದಿ ನಾಟಕ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸೆ.25ರಂದು ದೀನ್‌ದಯಾಳ್ ಉಪಾಧ್ಯಾಯ ಜಯಂತಿ, ಅ.2ರಂದು ಗಾಂಧಿ ಜಯಂತಿ ಹಾಗೂ ಖಾದಿ–ಸ್ವದೇಶಿ ಸಂತೆ, ಶಾಲಾ ಮಕ್ಕಳಿಗೆ ಚಿತ್ರಕಲಾ ಮತ್ತು ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದರು.

 ಅ.17ರಂದು ಬೃಹತ್ ಮಾನವ ರಂಗೋಲಿ ಹಾಗೂ ಸೇವಾ ಜ್ಯೋತಿ ಬೆಳಗಿಸುವ ಮೂಲಕ ಅಭಿಯಾನಕ್ಕೆ ಸಮಾರೋಪ ನಡೆಯಲಿದೆ ಎಂದರು.

ಕ್ಷೇತ್ರದ ನಾಗರಿಕರು, ಯುವಜನತೆ ಹಾಗೂ ತಾಯಂದಿರು ವಿವಿಧ ಸೇವಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

​ಸಾಧನೆಗಳ ಪ್ರಚಾರ: 
ಕೇಂದ್ರ ಸರ್ಕಾರದ ಜನಧನ್, ಸ್ವಚ್ಛ ಭಾರತ್, ಉಜ್ವಲ, ಆಯುಷ್ಮಾನ್ ಭಾರತ್, ಆರ್ಟಿಕಲ್ 370 ರದ್ದು, ಜಲ ಜೀವನ ಮಿಷನ್ ಹಾಗೂ ಪಿಎಂ-ಕಿಸಾನ್ ಯೋಜನೆಗಳ ಕುರಿತು ಜನರಿಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಸ್ಥಳೀಯ ಅಭಿವೃದ್ಧಿ (ಶಿವಮೊಗ್ಗ ಕ್ಷೇತ್ರ): ಮೇಲ್ಸೇತುವೆಗಳು, ಸೇತುವೆಗಳು, ಅಮೃತ್ ಯೋಜನೆಯಡಿ ರೈಲ್ವೆ ನಿಲ್ದಾಣಗಳ ಆಧುನಿಕೀಕರಣ, ವಿಮಾನ ನಿಲ್ದಾಣ ಹಾಗೂ ಎಫ್‌ಎಮ್ ರೇಡಿಯೋ ಟವರ್ ನಿರ್ಮಾಣದಂತಹ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ ಎಂದರು.

ಈ ಪತ್ರಿಕಾ ಗೋಷ್ಠಿಯಲ್ಲಿ ಶಾಸಕ ಚೆನ್ನಬಸಪ್ಪ,  ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಎನ್. ಕೆ. ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಬಿಜೆಪಿ ನಗರ ಅಧ್ಯಕ್ಷರು, MLC ಧನಂಜಯ ಸರ್ಜಿ.ಚಂದ್ರಶೇಖರ್ ಎಸ್.ಜಿಲ್ಲಾ ಮಾಧ್ಯಮ ಪ್ರಮುಖ್.ಮಂಜುನಾಥ್ ಎನ್.ಜಿಲ್ಲಾ ಮಾಧ್ಯಮ ಸಹ ಪ್ರಮುಖ್. ಮತ್ತಿತರರು ಹಾಜರಿದ್ದರು

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.