ಶಿವಮೊಗ್ಗದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ!ಕಾರಿನಲ್ಲಿ 1.42 ಕೆಜಿ ಗಾಂಜಾ ವಶ – ಇಬ್ಬರು ಆರೋಪಿಗಳ ಬಂಧನ

ಶಿವಮೊಗ್ಗ: ನಗರದ ಅಣ್ಣಾನಗರ ಎಡಭಾಗದ ಚಾನಲ್ ರಸ್ತೆಯಲ್ಲಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರೆಂಬ ಖಚಿತ ಮಾಹಿತಿಯ ಮೇರೆಗೆ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಸೆಪ್ಟೆಂಬರ್ 14ರಂದು ಪಿಎಸ್ಐ ಮಂಜುನಾಥ್ ಎನ್.ಕೆ. ನೇತೃತ್ವದಲ್ಲಿ ದೊಡ್ಡಪೇಟೆ ಠಾಣೆಯ ಸಿಬ್ಬಂದಿ ದಾಳಿ ನಡೆಸಿದರು. ಈ ವೇಳೆ ಕಾರಿನಲ್ಲಿದ್ದ ತೌಫೀಕ್ ಅಹಮದ್, 33 ವರ್ಷ, ಶಿವಮೊಗ್ಗದ ಟಿಪ್ಪುನಗರ ಎಡಭಾಗ ಹಾಗೂ ಸೈಯ್ಯದ್ ಅಪ್ಸರ್, 26 ವರ್ಷ, ಭದ್ರಾವತಿಯ ಅಮೀರ್ ಜಾನ್ ಕಾಲೋನಿ ಎಂಬ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳಿಂದ ಸುಮಾರು 1 ಕೆಜಿ 420 ಗ್ರಾಂ ತೂಕದ ಗಾಂಜಾ, ಅಂದಾಜು 70 ಸಾವಿರ ರೂಪಾಯಿ ಮೌಲ್ಯದ ಮಾದಕ ವಸ್ತು, ಗಾಂಜಾ ಸಾಗಾಟಕ್ಕೆ ಬಳಸಿದ್ದ ಹೋಂಡಾ ಜಾಜ್ ಕಾರು ಹಾಗೂ 300 ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 320/2026, ಎನ್‌ಡಿಪಿಎಸ್ ಕಾಯ್ದೆಯ ಕಲಂ 8(c), 20(b)(II)B ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ದಾಳಿಯಲ್ಲಿ ಎಎಸ್ಐ ಚೂಡಾಮಣಿ ಸೇರಿದಂತೆ ಸಂದೀಪ್, ಗಣೇಶ್, ಮನೋಹರ ಹಾಗೂ ಗುರುನಾಯಕ್ ಭಾಗವಹಿಸಿದ್ದರು.
ಗಾಂಜಾ ಮಾರಾಟದ ವಿರುದ್ಧ ಶಿವಮೊಗ್ಗ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆ ಮುಂದುವರಿದಿದ್ದು, ಪ್ರಕರಣದ ತನಿಖೆಯಿಂದ ಇನ್ನಷ್ಟು ಮಾಹಿತಿ ಹೊರಬರಬೇಕಿದೆ.

ಇಂತಹ ಶಿವಮೊಗ್ಗ ಜಿಲ್ಲೆಯ ತಾಜಾ ಸುದ್ದಿ ಮತ್ತು ಪೊಲೀಸ್ ಸುದ್ದಿಗಳಿಗಾಗಿ ಹಲೋ ಶಿವಮೊಗ್ಗ ಚಾನಲ್‌ನ್ನು ಸಬ್‌ಸ್ಕ್ರೈಬ್ ಮಾಡಿ, ವಿಡಿಯೋವನ್ನು ಲೈಕ್ ಮತ್ತು ಶೇರ್ ಮಾಡಿ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.