ಶಿವಮೊಗ್ಗ ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್

ಶಿವಮೊಗ್ಗ: ಶಾಂತಿನಗರ ರಾಗಿಗುಡ್ಡದಲ್ಲಿ   ಈದ್ ಮೀಲಾದ್ ಜುಲೂಸ್ ಶಾಂತಿಯುತವಾಗಿ ಸಂಭ್ರಮದಿಂದ ಆಚರಿಸಲಾಯಿತು. ಹಿಂದೂ ಮತ್ತು ಮುಸ್ಲಿಂ ಭಾಂದವರು ಜಾತಿಭೇದ ಮರೆತು ಪರಸ್ಪರ ಸಿಹಿ ಹಂಚಿಕೊಂಡು ಪರಸ್ಪರ ಕೈಹಿಡಿದು ಮೆರವಣಿಗೆಯಲ್ಲಿಸಾಗಿ ಸೌಹಾರ್ದಕ್ಕೆ ಸಾಕ್ಷಿಯಾದರು.ಮೆರವಣಿಗೆಯಲ್ಲಿ ಮಕ್ಕಳ ದಫ್ ಕಾರ್ಯಕ್ರಮ ಆಕರ್ಷಕವಾಗಿತ್ತು.
 Dysp ಸಂಜೀವಕುಮಾರ್ ಮತ್ತು  ಶಾಂತಿ ಸುವ್ಯವಸ್ಥೆ ಜವಾಬ್ದಾರಿ ವಹಿಸಿದ್ದ ಗ್ರಾಮಾಂತರ ಸಿ ಪಿ ಐ ರಾಘವೇಂದ್ರ ಖಂಡಿಕೆ ರವರಿಗೆ ಮಕ್ಕಳು ಮತ್ತು ಸಾರ್ವಜನಿಕರು ಕೈ ಕುಲುಕುತ್ತ ಸಿಹಿಹಂಚುತ್ತಾ ಮೀಲಾದ್ ಶುಭಾಶಯ ಕೋರುತಿದ್ದ ದೃಶ್ಯಗಳು ಜನಸ್ನೇಹಿ ಪೊಲೀಸ್ ಗೆ ಸಾಕ್ಷಿ ಯಾಗಿದ್ದವು.

   ಮೆರವಣಿಗೆಯಲ್ಲಿ ನೂರ್ ಮಸ್ಜಿದ್ ಅಧ್ಯಕ್ಷರಾದ ಭಾಷಸಾಬ್ ಹುಣಸಘಟ್ಟ,ಶಾಂತಿನಗರದ ಪ್ರಮುಖರಾದ ನಾಗರಾಜಣ್ಣ, ಶಹಾಬುದ್ದಿನ್ ಬಾಬು,,ರಾಮಚಂದ್ರ ವಕೀಲರು,ಸಯ್ಯದ್ ಸಾದಿಕ್, ಬಸವರಾಜ್,ಶಾಂತಿನಗರ ನಾಗರೀಕ ಹಕ್ಕುವೇದಿಕೆ ಅಧ್ಯಕ್ಷರಾದ ಸಯ್ಯದ್ ಮುಜಿಬುಲ್ಲ, ಮೂಜಿಬುರ್ ರೆಹಮನ್, ಕ್ವಾಜ, ಕರವೇ ಸಾದಿಕ್,ರಿಯಾಜ್, ನೂರುಲ್ಲಾ ಖಾನ್, ಶಫಿವುಲ್ಲಾ,ಇರ್ಫಾನ್ ಜಿಮ್, ಅನ್ಸರ್, ಮೊದಲಾದ ಪ್ರಮುಖರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.