*ಲಚ್ಯಾನ್ ನಿಲ್ದಾಣದಲ್ಲಿ ಬಸವ ಎಕ್ಸ್’ಪ್ರೆಸ್ ತಾತ್ಕಾಲಿಕ ನಿಲುಗಡೆ*
ಹಜರತ್ ಸೈಯದ್ ಅಬ್ದುಲ್ಲಾ ಇದ್ರೂಸ್ ರಹಮತುಲ್ಲಾಹಿ ಅಲೈ ಅವರ ಉರ್ಸ್-ಎ-ಶರೀಫ್ ಪ್ರಯುಕ್ತ, ರೈಲು ಸಂಖ್ಯೆ 17308 ಬಾಗಲಕೋಟೆ–ಮೈಸೂರು ಬಸವ ಡೈಲಿ ಎಕ್ಸ್’ಪ್ರೆಸ್ ರೈಲಿಗೆ 28.08.2026 ರಂದು ಲಚ್ಯಾಣ ನಿಲ್ದಾಣದಲ್ಲಿ ಒಂದು ದಿನದ ಮಟ್ಟಿಗೆ ತಾತ್ಕಾಲಿಕ ನಿಲುಗಡೆ ನೀಡಲಾಗುತ್ತದೆ. ಈ ರೈಲು ನಿಗದಿತ ದಿನದಂದು ಸಂಜೆ 17:28 ಕ್ಕೆ ಲಚ್ಯಾಣ ತಲುಪಿ, 17:29 ಕ್ಕೆ ನಿರ್ಗಮಿಸಲಿದೆ.
*ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆ ಮುಂದುವರಿಕೆ*
ರೈಲು ಸಂಖ್ಯೆ 16227/16228 ಮೈಸೂರು–ತಾಳಗುಪ್ಪ–ಮೈಸೂರು ಡೈಲಿ ಎಕ್ಸ್’ಪ್ರೆಸ್ ರೈಲಿನ ನಿಲುಗಡೆ ಅರಸಾಳು ನಿಲ್ದಾಣದಲ್ಲಿ ಹಾಗೂ ರೈಲು ಸಂಖ್ಯೆ 16206/16205 ಮೈಸೂರು–ತಾಳಗುಪ್ಪ–ಮೈಸೂರು ಡೈಲಿ ಎಕ್ಸ್’ಪ್ರೆಸ್ ರೈಲಿನ ನಿಲುಗಡೆ ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ 24.08.2026 ರಿಂದ ಮುಂದಿನ ಸೂಚನೆಯವರೆಗೆ ಮುಂದುವರಿಯಲಿದೆ.
*ತಳಕು ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ ಮುಂದುವರಿಕೆ*
ರೈಲು ಸಂಖ್ಯೆ 57415/57416 ಗುಂತಕಲ್–ಚಿಕ್ಕಜಾಜೂರು–ಗುಂತಕಲ್ ಡೈಲಿ ಪ್ಯಾಸೆಂಜರ್ ರೈಲಿಗೆ ತಳಕು ನಿಲ್ದಾಣದಲ್ಲಿ ನೀಡಲಾಗಿರುವ ತಾತ್ಕಾಲಿಕ ನಿಲುಗಡೆಯನ್ನು (ಈ ಹಿಂದೆ 17.11.2026 ರವರೆಗೆ ಮಾತ್ರ ಸೂಚಿಸಲಾಗಿತ್ತು), ಈಗ 18.05.2027 ರವರೆಗೆ ಮುಂದುವರಿಸಲಾಗಿದೆ.

Leave a Comment