ಕಾಂಗ್ರೆಸ್ ನೂತನ ಕ್ಯಾಬಿನೆಟ್ - ದಿಕ್ಕು ದೆಸೆ ಕಾಣದ ಕ್ಯಾಬಿನೆಟ್:ಐಡಿಯಲ್ ಗೋಪಿ
ಕಾಂಗ್ರೆಸ್ ನೂತನ ಕ್ಯಾಬಿನೆಟ್ - ದಿಕ್ಕು ದೆಸೆ ಕಾಣದ ಕ್ಯಾಬಿನೆಟ್ ಅಂತ ಹೇಳಬಹುದು ಎಂದು ಶಿವಮೊಗ್ಗದ ಮಾಜಿ-ಕಾರ್ಪೊರೇಟರ್ ಐಡಿಯಲ್ ಗೋಪಿ ಹೇಳಿದ್ದಾರೆ.
ಕಾರಣ ಓಲ್ಡ್ ಬಾಟಲ್ ಅಂಡ್ ಓಲ್ಡ್ ವೈನ್ ವಿತ್ ನ್ಯೂ ಲೇಬಲ್ ಬಹುತೇಕ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದವರೇ ಪುನಹ ಸಚಿವರಾಗುತ್ತಿದ್ದಾರೆ ಹೆಣ್ಣುಮಕ್ಕಳಿಗೆ ಮಾನ್ಯತೆ ನೀಡದ ಕ್ಯಾಬಿನೆಟ್ ಮಹಿಳೆಯರಿಗೆ ಪ್ರಾತಿನಿಧ್ಯ ಕೊಡ್ತೇವೆ ಮಹಿಳೆಯರನ್ನ ಗೌರವಿಸುತ್ತೇವೆ ಎನ್ನುವ ಕಾಂಗ್ರೆಸ್ ನ ಮುಖವಾಡ ಇಂದು ಕಳಚಿ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲು ಕಾಯ್ದೆಗಳನ್ನು ರೂಪಿಸಿ ಮಂಡನೆ ಪಡೆಯಲು ಹೊರಟರೆ ಕಾಂಗ್ರೆಸ್ ಅಲ್ಲೂ ಕೂಡ ವಿರೋಧ ಮಾಡಿಕೊಂಡು ಬಂದಿದೆ ಕರ್ನಾಟಕದಲ್ಲಿ ಮಹಿಳೆಯರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ಸರ್ಕಾರವನ್ನ ಇಂದು ನಾವು ನೋಡ್ತಾ ಇದ್ದೇವೆ ಎಂದು ತಿಳಿಸಿದ್ದಾರೆ.
ನೂತನ ಸಚಿವರ 20 ಜನರ ಪಟ್ಟಿಯಲ್ಲಿ ಚಿಕ್ಕಮಗಳೂರಿನ ಕುರುಬ ಸಮಾಜದ ಗಾಯತ್ರಿ ಶಾಂತೇಗೌಡರ ಹೆಸರಿದ್ದು ತದನಂತರ ಅವರನ್ನು ಕೈಬಿಟ್ಟದ್ದು ರಾಜ್ಯದ ಇಡೀ ಕುರುಬ ಸಮಾಜಕ್ಕೆ ಮಾಡಿದ ಅನ್ಯಾಯವಾಗಿರುತ್ತದೆ ಮುಂದಿನ ದಿನಗಳಲ್ಲಿ ಕುರುಬ ಸಮಾಜ ಮತ್ತು ಈ ರಾಜ್ಯದ ಹೆಣ್ಣು ಮಕ್ಕಳು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.

Leave a Comment