ನಕಲಿ ಫೇಸ್‌ಬುಕ್ ಖಾತೆಗಳ ಬಗ್ಗೆ ಎಚ್ಚರ! :PI ಗುರುರಾಜ್

 ಶಿವಮೊಗ್ಗ:  Face book ಬಳಕೆದಾರರು ನಕಲಿ ಫೇಸ್‌ಬುಕ್ ಖಾತೆಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಶಿವಮೊಗ್ಗ ತುಂಗಾ ನಗರದ ಪೋಲಿಸ್ ಇನ್ಸ್ಪೆಕ್ಟರ್ ಗುರುರಾಜ್ ಹೇಳಿದ್ದಾರೆ

ದುಷ್ಕರ್ಮಿಗಳು ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಗಳನ್ನು ಸೃಷ್ಟಿಸಿ, ಕಡಿಮೆ ಬೆಲೆಗೆ ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಇತರೆ ಸಾಮಗ್ರಿಗಳನ್ನು ಮಾರಾಟ ಮಾಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

⚠️ Face Book ಬಳಕೆದಾರರು ಎಚ್ಚರಿಕೆಯಿಂದಿರಿ:
❌ ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಆಕರ್ಷಕ ಆಫರ್‌ಗಳನ್ನು ಪರಿಶೀಲಿಸದೆ ನಂಬಬೇಡಿ.
❌ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿರುವ ಫೇಸ್‌ಬುಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಬೇಡಿ.
❌ ಮುಂಗಡ ಹಣ ಪಾವತಿಸುವ ಮೊದಲು ಖಾತೆಯ ನೈಜತೆಯನ್ನು ಖಚಿತಪಡಿಸಿಕೊಳ್ಳಿ.

✅ ಅನುಮಾನಾಸ್ಪದ ಫೇಸ್‌ಬುಕ್ ಖಾತೆಗಳು ಅಥವಾ ಪೋಸ್ಟ್‌ಗಳನ್ನು ತಕ್ಷಣ ವರದಿ ಮಾಡಿ.
✅ ವಂಚನೆ ನಡೆದರೆ ತಕ್ಷಣ 1930ಕ್ಕೆ ಕರೆ ಮಾಡಿ ಅಥವಾ cybercrime.gov.in ನಲ್ಲಿ ದೂರು ದಾಖಲಿಸಿ.

ಸಾರ್ವಜನಿಕರು ಜಾಗರೂಕರಾಗಿರಿ. ಪರಿಶೀಲಿಸಿ ನಂತರವೇ ಹಣ ಪಾವತಿಸಿ. ನಿಮ್ಮ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಿ ಎಂದು ಹೇಳಿದ್ದಾರೆ.

ಪೋಲೀಸ್ ಇನ್ಸ್ಪೆಕ್ಟರ್ ಗುರುರಾಜ್ ಇವರು ನೀಡಿದ ಸಲಹೆ ಮತ್ತು ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಪಾಲಿಸಿರಿ ...ಮೋಸ ಹೋಗದಿರಿ ಹಾಗೂ ಹಣವನ್ನು ಕಳೆದುಕೊಳ್ಳ ಬೇಡಿ ಎನ್ನುವುದು ನಮ್ಮ ತಿಳುವಳಿಕೆ ಸಹ ಆಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.