*ಹಿಂದೂ ಜನಜಾಗೃತಿ ಸಮಿತಿಯಿಂದ ಶಿವಮೊಗ್ಗದಲ್ಲಿ ‘ಗುರುಪೂರ್ಣಿಮಾ ಮಹೋತ್ಸವ’!*

*ಹಿಂದೂ ಜನಜಾಗೃತಿ ಸಮಿತಿಯಿಂದ ದೇಶದಾದ್ಯಂತ 64 ಸ್ಥಳಗಳಲ್ಲಿ ;   ಶಿವಮೊಗ್ಗ ಮತ್ತು ತೀರ್ಥಹಳ್ಳಿ ಯಲ್ಲಿ ‘ಗುರುಪೂರ್ಣಿಮಾ ಮಹೋತ್ಸವ’!*

ಶಿವಮೊಗ್ಗ : ಹಿಂದೂ ಧರ್ಮದ ಮೇಲಾಗುತ್ತಿರುವ ತೆರೆಮರೆಯ ಆಘಾತಗಳನ್ನು ತಡೆಯಲು ‘ಗುರುಪೂರ್ಣಿಮಾ ಮಹೋತ್ಸವ’ದಲ್ಲಿ ಪಾಲ್ಗೊಳ್ಳಿ! - ಹಿಂದೂ ಜನಜಾಗೃತಿ ಸಮಿತಿಯ ಕರೆ ಇಂದು ಕೇವಲ 'ಲವ್ ಜಿಹಾದ್' ಅಷ್ಟೇ ಅಲ್ಲ, ‘ಕಾರ್ಪೊರೇಟ್ ಜಿಹಾದ್’, 'ಹಲಾಲ್ ಜಿಹಾದ್', ಮತಾಂತರ ಮತ್ತು ಸುಳ್ಳು ನರೇಟಿವ್ ನಂತಹ ಸಂಕಟಗಳಿಂದ ಹಿಂದೂ ಧರ್ಮದ ಮೇಲೆ ನಾಲ್ಕೂ ದಿಕ್ಕುಗಳಿಂದ ದಾಳಿಗಳಾಗುತ್ತಿವೆ. ಈ ಅದೃಶ್ಯ ಹಾಗೂ ವೈಚಾರಿಕ ಶತ್ರುಗಳನ್ನು ಗುರುತಿಸುವುದು ಹೇಗೆ ಮತ್ತು ಧರ್ಮರಕ್ಷಣೆಗಾಗಿ ಹಿಂದೂಗಳು ಹೇಗೆ ಸಂಘಟಿತರಾಗಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜುಲೈ 29 ರಂದು ದೇಶದಾದ್ಯಂತ 64 ಸ್ಥಳಗಳಲ್ಲಿ 'ಗುರುಪೂರ್ಣಿಮಾ ಮಹೋತ್ಸವ'ವನ್ನು ಆಯೋಜಿಸಲಾಗಿದೆ. ಶಿವಮೊಗ್ಗ ನಗರದ  ಶುಭಮಂಗಳ ಕಲ್ಯಾಣ ಮಂಟಪ, 60 ಅಡಿ ರಸ್ತೆ, ವಿನೋಬನಗರದಲ್ಲಿ ಮತ್ತು ತೀರ್ಥಹಳ್ಳಿಯ  ಶ್ರೀ ಗಾಯತ್ರಿ ಮಂದಿರ, ಕೊಪ್ಪ ರಸ್ತೆ, ತೀರ್ಥಹಳ್ಳಿಯಲ್ಲಿ ಗುರುಪೂರ್ಣಿಮೆಯನ್ನು ಆಯೋಜಿಸಲಾಗಿದೆ. ಈ ಮಹೋತ್ಸವದಲ್ಲಿ 'ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹೋರಾಟ ಮತ್ತು ಸಾಧನೆಯ ದಿಶೆ' ಎಂಬ ವಿಷಯದ ಮೇಲೆ ಜ್ವಲಂತ ವಿಚಾರಗಳನ್ನು ಮಂಡಿಸಲಾಗುವುದು. ಧರ್ಮರಕ್ಷಣೆ ಮತ್ತು ಸ್ವಸಂರಕ್ಷಣೆಯ ದಿಶೆ ನೀಡುವ ಈ ಮಹೋತ್ಸವದಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ.
ಈ ಮಹೋತ್ಸವದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಭಾವಚಿತ್ರ ಪೂಜೆ (ಗುರುಪೂಜನ), ರಾಮರಾಜ್ಯದ ಸ್ಥಾಪನೆಗಾಗಿ ಸಂಕಲ್ಪ ಮತ್ತು ನಾಮಜಪ, ಧರ್ಮರಕ್ಷಕರು ಹಾಗೂ ಹಿಂದುತ್ವನಿಷ್ಠರ ಸನ್ಮಾನ, ರಾಷ್ಟ್ರಭಕ್ತ ಮತ್ತು ಧರ್ಮನಿಷ್ಠ ಗಣ್ಯ ವ್ಯಕ್ತಿಗಳ ಮಾರ್ಗದರ್ಶನ, ಸ್ವಸಂರಕ್ಷಣೆಯ ಸುಲಭ ಪದ್ಧತಿಗಳ ಪ್ರಾತ್ಯಕ್ಷಿಕೆ, ‘ಸಮಿತಿ’ಯ ಪ್ರೇರಣಾಸ್ರೋತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕಾರ್ಯದ ಕುರಿತು ಕಿರುಚಿತ್ರ (ಶಾರ್ಟ್ ಫಿಲ್ಮ್), ಹಾಗೂ ‘ರಾಮರಾಜ್ಯ ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹೋರಾಟ ಮತ್ತು ದಿಶೆ’ ಎಂಬ ವಿಷಯಗಳ ಕುರಿತು ಗಣ್ಯ ವಕ್ತಾರರಿಂದ ವಿಶೇಷ ಮಾರ್ಗದರ್ಶನ ನಡೆಯಲಿದೆ. ಈ ಮಹೋತ್ಸವದಲ್ಲಿ ವಿವಿಧ ವಿಷಯಗಳ ಗ್ರಂಥ ಪ್ರದರ್ಶನ ಹಾಗೂ ರಾಷ್ಟ್ರ-ಧರ್ಮಕ್ಕೆ ಸಂಬಂಧಿಸಿದ ಪೋಸ್ಟರ್ ಪ್ರದರ್ಶನವನ್ನೂ ಆಯೋಜಿಸಲಾಗುವುದು. ಆದ್ದರಿಂದ, ಸಮಸ್ತ ರಾಷ್ಟ್ರ ಮತ್ತು ಧರ್ಮಪ್ರೇಮಿ ಹಿಂದೂಗಳು ಕುಟುಂಬ ಸಮೇತರಾಗಿ ಈ ಅಮೂಲ್ಯ ಅವಕಾಶದ ಲಾಭ ಪಡೆದುಕೊಳ್ಳಬೇಕಾಗಿ ಹಿಂದೂ ಜನಜಾಗೃತಿ ಸಮಿತಿಯು ವಿನಂತಿಸಿದೆ. ಈ ಗುರುಪೂರ್ಣಿಮಾ ಮೋಹತ್ಸವವು ಸಂಜೆ 5 ಗಂಟೆಗೆ  HJS Karnataka ಯೌಟ್ಯೂಬ್ ಚಾನೆಲ್ ಮೂಲಕ ನೇರಪ್ರಸಾರವಾಗಲಿದೆ, ಸಮಸ್ತ ಹಿಂದೂ ಬಾಂಧವರು ಇದರ ಲಾಭ ಪಡೆಯಬೇಕೆಂದು ಸಮಿತಿಯು ಕರೆ ನೀಡಿದೆ.
ಸ್ಥಳೀಯ ಗುರುಪೂರ್ಣಿಮೆಯ ವಿಳಾಸ ಮತ್ತು ಸಮಯ :
ಸ್ಥಳ : ಶುಭಮಂಗಳ ಕಲ್ಯಾಣ ಮಂಟಪ, 60 ಅಡಿ ರಸ್ತೆ, ವಿನೋಬನಗರ, ಶಿವಮೊಗ.  ಮತ್ತು
ಸ್ಥಳ : ಶ್ರೀ ಗಾಯತ್ರಿ ಮಂದಿರ, ಕೊಪ್ಪ ರಸ್ತೆ, ತೀರ್ಥಹಳ್ಳಿ
ದಿನಾಂಕ : ಬುಧವಾರ, 29 ಜುಲೈ 2026
ಸಮಯ : ಸಂಜೆ 5.30 ಗಂಟೆಗೆ 


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.