ಶಿವಮೊಗ್ಗದ ನವುಲೆಯ ವಾಸಿ ನಿವೃತ್ತ ASI ನಿಧನ- ಸಂತಾಪ
ಶಿವಮೊಗ್ಗ: ಶಿವಮೊಗ್ಗ ನಗರದ ನವುಲೆಯ ವಾಸಿ ನಿವೃತ್ತ ASI ಎನ್.ಸಿದ್ದಪ್ಪ ASI ನಿನ್ನೆ ದಿವಸ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಎನ್ ಸಿದ್ದಪ್ಪ ನಿವೃತ್ತ ಎ ಎಸ್ ಐ ಇವರು ಅನಾರೋಗ್ಯದ ನಿಮಿತ್ತ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಮೃತಪಟ್ಟಿದ್ದು ಅವರ ಸ್ವಗ್ರಾಮ ಶಿವಮೊಗ್ಗದ ನವಲೆಗೆ ರಾತ್ರಿ ತರುತ್ತಿದ್ದು, ನಾಳೆ ನವಲೆಯಲ್ಲಿನ ಅವರ ಮನೆಯಲ್ಲಿ ಪೂಜಾವಿಧಿವಿಧಾನ ಇಟ್ಟುಕೊಂಡಿರುತ್ತಾರೆ ಎಂದು ತಿಳಿದು ಬಂದಿದೆ.
ಮೃತ ಆಶೀ ಎನ್.ಸಿದ್ದಪ್ಪರವರು 1955 ರಲ್ಲಿ ಹುಟ್ಟಿದ್ದು ಇವರಿಗೆ ಹೆಂಡ್ತಿ ಮತ್ತು ಎರಡು ಗಂಡು, ಒಬ್ಬ ಹೆಣ್ಣು ಮಗಳು ಇರುತ್ತಾರೆ ಇಲಾಖೆಯಲ್ಲಿ ನಿಷ್ಠಾವಂತರಾಗಿ ಕರ್ತವ್ಯ ನಿರ್ವಹಿಸಿದ್ದರು.
ಮೃತರು ಶಿವಮೊಗ್ಗ ನಗರದಲ್ಲಿ ಮತ್ತು ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ.
ಮೃತರು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯತ್ವವನ್ನು ಸಹ ಹೊಂದಿದ್ದರು.
ಮೃತರ ನಿಧನದ ಸುದ್ದಿಯನ್ನು ತಿಳಿದ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದರು. ಕಂಬನಿ ಮಿಡಿದಿದ್ದಾರೆ.
ಮೃತರು ಪತ್ನಿ ಮತ್ತು ಮೂವರು ಮಕ್ಕಳು ಹಾಗೂ ಅವರ ಕುಟುಂಬದ ಸದಸ್ಯರು ಸ್ನೇಹಿತರು ಮತ್ತು ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಮತ್ತು ಮೃತರ ಕುಟುಂಬಕ್ಕೆ ದುಂಖಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಇಂದು ನವುಲೆಯ ಸ್ವಗೃಹಕ್ಕೆ ತರಲಾಗಿದ್ದು ಇಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

Leave a Comment